ETV Bharat / bharat

ಸಂಬಳದಿಂದ ಕಡಿತವಿಲ್ಲ, ಪಿಎಂ-ಕೇರ್ಸ್ ನಿಧಿಗೆ ಸ್ವಯಂಪ್ರೇರಿತವಾಗಿ ಕೊಡುಗೆ ನೀಡಬಹುದು: ಏಮ್ಸ್ - ಏಮ್ಸ್​ನ ವೈದ್ಯರು

ಏಮ್ಸ್​ನ ವೈದ್ಯರು ಸ್ವಯಂ ಪ್ರೇರಿತವಾಗಿ ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಬಹುದು. ವೈದ್ಯರ ಸಂಬಳದಲ್ಲಿ ಕಡಿತ ಮಾಡುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.

aiims
aiims
author img

By

Published : Apr 16, 2020, 9:09 AM IST

ನವದೆಹಲಿ: ವೈದ್ಯರ ಸಂಬಳದಲ್ಲಿ ಕಡಿತ ಮಾಡಲಾಗುವುದಿಲ್ಲ, ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಬಯಸುವ ವೈದ್ಯರು ಸ್ವಯಂ ಪ್ರೇರಿತವಾಗಿ ನೀಡಬಹುದು ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಆಡಳಿತ ಮಂಡಳಿ ತಿಳಿಸಿದೆ.

ಪಿಎಂ-ಕೇರ್ಸ್ ನಿಧಿಗೆ ದೇಣಿಗೆ ನೀಡಲು ಸಿಬ್ಬಂದಿಯೇ ನಿರ್ಧರಿಸಬಹುದು ಎಂದು ಏಮ್ಸ್ ರಿಜಿಸ್ಟ್ರಾರ್ ಹೇಳಿದೆ.

"ವೈದ್ಯರ ವೇತನದಿಂದ ಯಾವುದೇ ಕಡಿತ ಮಾಡಲಾಗುವುದಿಲ್ಲ. ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಲು ಬಯಸುವ ವೈದ್ಯರು ಏಪ್ರಿಲ್ 20ರೊಳಗೆ ಲಿಖಿತವಾಗಿ ತಿಳಿಸಬೇಕು" ಎಂದು ಏಮ್ಸ್ ರಿಜಿಸ್ಟ್ರಾರ್ ತಿಳಿಸಿದ್ದಾರೆ.

"ವೈಯಕ್ತಿಕ ಸಂರಕ್ಷಣಾ ಸಲಕರಣೆಗಳ (ಪಿಪಿಇ) ಸಂಗ್ರಹಕ್ಕಾಗಿ ನವದೆಹಲಿಯ ಏಮ್ಸ್​ನಲ್ಲಿ ಹಣದ ಕೊರತೆಯಿಲ್ಲ. ಹೀಗಾಗಿ ನವದೆಹಲಿಯ ಏಮ್ಸ್​ನಲ್ಲಿ ವೈದ್ಯರಿಂದ ಯಾವುದೇ ದೇಣಿಗೆಯನ್ನು ಸ್ವೀಕರಿಸಲಾಗುವುದಿಲ್ಲ" ಎಂದು ಆಡಳಿತ ಮಂಡಳಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.