ETV Bharat / bharat

ದೇಶದಲ್ಲಿ ಶೇ.29.8 ರಷ್ಟು ಕೊರೊನಾ ಹರಡಲು ತಬ್ಲಿಘಿ ಜಮಾತ್ ಮೂಲ: ಕೇಂದ್ರ ಆರೋಗ್ಯ ಇಲಾಖೆ - ಕೊರೊನಾ

ಭಾರತದಲ್ಲಿ ಕೊರೊನಾ ಸೋಂಕಿತರ ಪೈಕಿ ಶೇ.29.8 ರಷ್ಟು ಅಂದರೆ 4,291 ಪ್ರಕರಣಗಳಿಗೆ ನಿಜಾಮುದ್ದೀನ್ ಮರ್ಕಜ್ ​​ಮೂಲ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯುದರ್ಶಿ ಲಾವ್​ ಅಗರ್​ವಾಲ್​ ಮಾಹಿತಿ ನೀಡಿದ್ದಾರೆ.

Health Ministry
ಕೇಂದ್ರ ಆರೋಗ್ಯ ಇಲಾಖೆ
author img

By

Published : Apr 19, 2020, 11:29 AM IST

ನವದೆಹಲಿ: ದೆಹಲಿಯ ನಿಜಾಮುದ್ದೀನ್​ನ ಮರ್ಕಜ್​ನಲ್ಲಿ ನಡೆದ ತಬ್ಲಿಘಿ ಜಮಾತ್​ನಿಂದ ದೇಶದ 23 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಾನಿಯುಂಟಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ.

ಜಮಾತ್​ನಲ್ಲಿ ಪಾಲ್ಗೊಂಡವರಿಂದ ತಮಿಳುನಾಡು (84%), ತೆಲಂಗಾಣ (79%), ದೆಹಲಿ (63%), ಉತ್ತರ ಪ್ರದೇಶ (59%) ಹಾಗೂ ಆಂಧ್ರ ಪ್ರದೇಶ (61%) ರಾಜ್ಯಗಳಿಗೆ ಹೆಚ್ಚು ಹಾನಿ ಸಂಭವಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15 ಸಾವಿರ ದಾಟಿದ್ದು, ಈ ಪೈಕಿ ಶೇ.29.8 ರಷ್ಟು ಅಂದರೆ 4,291 ಪ್ರಕರಣಗಳಿಗೆ ನಿಜಾಮುದ್ದೀನ್ ಮರ್ಕಜ್ ​​ಮೂಲ ಎಂದು ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯುದರ್ಶಿ ಲಾವ್​ ಅಗರ್​ವಾಲ್​ ಮಾಹಿತಿ ನೀಡಿದ್ದಾರೆ.

ದೇಶಾದ್ಯಂತ ಸುಮಾರು 40 ಸಾವಿರ ಜಮಾತ್​ ಕಾರ್ಯಕರ್ತರು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಮುಂಜಾಗೃತ ಕ್ರಮವಾಗಿ ಕ್ವಾರಂಟೈನ್​ನಲ್ಲಿರಿಸಲಾಗಿದೆ. ಈ ರೀತಿಯ ಮುಂಜಾಗೃತ ಕ್ರಮ, ಲಾಕ್​ಡೌನ್ ಹಾಗೂ ಸಾಮಾಜಿಕ ಅಂತರದಿಂದಾಗಿ ಭಾರತದಲ್ಲಿ ದೊಡ್ಡ ಪ್ರಮಾಣದ ಅಪಾಯಯವನ್ನು ತಡೆದಿದೆ ಎಂದು ಲಾವ್​ ಅಗರ್​ವಾಲ್ ತಿಳಿಸಿದರು.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,334 ಹೊಸ ಕೊರೊನಾ ಪ್ರಕರಣಗಳು, 27 ಸಾವು ವರದಿಯಾಗಿದೆ. ಈ ಮೂಲಕ ಸಾವಿನ ಸಂಖ್ಯೆ 507ಕ್ಕೆ ಹಾಗೂ ಸೋಂಕಿತರ ಸಂಖ್ಯೆ 15,712ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 2230 ಗುಣಮುಖರಾಗಿದ್ದು, 12,974 ಕೇಸ್​ಗಳು ಆ್ಯಕ್ಟಿವ್​ ಆಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.