ETV Bharat / bharat

ಬಿಹಾರದಲ್ಲಿ ದೀಪಾವಳಿ ಬಳಿಕ ಹೊಸ ಸರ್ಕಾರ ರಚನೆ: 7ನೇ ಬಾರಿ ನಿತೀಶ್ ಪ್ರಮಾಣ - ನಿತೀಶ್ ಕುಮಾರ್ ಸುದ್ದಿ

ಬಿಹಾರದಲ್ಲಿ ದೀಪಾವಳಿಯ ನಂತರ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿದ್ದು, ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ಈ ಮೂಲಕ ಅವರು ಏಳನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

nitish-kumar
nitish-kumar
author img

By

Published : Nov 12, 2020, 3:10 PM IST

ಪಾಟ್ನಾ (ಬಿಹಾರ): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ಬಹುಮತ ದೊರೆತ ನಂತರ, ಸರ್ಕಾರ ರಚನೆಯತ್ತ ಗಮನ ಹರಿದಿದೆ. ದೀಪಾವಳಿಯ ನಂತರ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿದ್ದು, ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಹಾರದಲ್ಲಿ ದೀರ್ಘಕಾಲದವರೆಗೆ ಮುಖ್ಯಮಂತ್ರಿಯಾಗಿ ಬೆಳೆದಿರುವ ನಿತೀಶ್ ಕುಮಾರ್ ನವೆಂಬರ್ 16 ಅಥವಾ ಮುಂದಿನ ವಾರ ಪ್ರಮಾಣ ವಚನ ಸ್ವೀಕರಿಸಬಹುದು. ಇದಕ್ಕೂ ಮೊದಲು, ನವೆಂಬರ್ ಅಂತ್ಯದಲ್ಲಿ, ಪ್ರಸ್ತುತ ಸರ್ಕಾರದ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಅವರು ರಾಜ್ಯಪಾಲರಿಗೆ ರಾಜೀನಾಮೆ ಕಳುಹಿಸಬಹುದು.

17 ವರ್ಷ 52 ದಿನಗಳ ಕಾಲ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಶ್ರೀ ಕೃಷ್ಣ ಸಿಂಗ್ ಅವರ ಹೆಸರಿನಲ್ಲಿ ಬಿಹಾರದಲ್ಲಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ದಾಖಲೆ ಇದೆ. ನಿತೀಶ್ ಕುಮಾರ್ 14 ವರ್ಷ 82 ದಿನಗಳ ಕಾಲ ಈ ಹುದ್ದೆಯಲ್ಲಿದ್ದಾರೆ.

ನಿತೀಶ್ ಕುಮಾರ್ ಯಾವಾಗೆಲ್ಲಾ ಬಿಹಾರ ಮುಖ್ಯಮಂತ್ರಿ ಆಗಿದ್ದರು?

  • ನಿತೀಶ್ ಕುಮಾರ್ (ಆಗ ಸಮತಾ ಪಕ್ಷದ ನಾಯಕ) ಮಾರ್ಚ್ 3, 2000ದಂದು ಮೊದಲ ಬಾರಿಗೆ ಬಿಹಾರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಬಹುಮತದ ಕೊರತೆಯಿಂದಾಗಿ ರಾಜೀನಾಮೆ ನೀಡಬೇಕಾಯಿತು.
  • 24 ನವೆಂಬರ್ 2005 ರಂದು ಎರಡನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.
  • 26 ನವೆಂಬರ್ 2010ರಂದು ಮೂರನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾದರು.
  • 22 ಫೆಬ್ರವರಿ 2015ರಂದು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
  • ಆರ್‌ಜೆಡಿಯೊಂದಿಗೆ ಮೈತ್ರಿ ಮಾಡಿಕೊಂಡು 2015ರ ನವೆಂಬರ್ 20ರಂದು ಐದನೇ ಬಾರಿಗೆ ಮುಖ್ಯಮಂತ್ರಿಯಾದರು.
  • ಆರ್‌ಜೆಡಿಯೊಂದಿಗಿನ ಸಂಬಂಧವನ್ನು ಮುರಿದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ನಂತರ ಜುಲೈ 27, 2017ರಂದು ಆರನೇ ಬಾರಿಗೆ ಸಿಎಂ ಆದರು.

ಎರಡು ದಶಕಗಳಲ್ಲಿ ಏಳನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ನಿತೀಶ್:

ಈ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ, ನಿತೀಶ್ ಕಳೆದ ಎರಡು ದಶಕಗಳಲ್ಲಿ ಏಳು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಂತಾಗುತ್ತದೆ. 2000ದಲ್ಲಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು, ಆದರೆ ಬಹುಮತಕ್ಕೆ ಬೇಕಾದ ಶಾಸಕರ ಬೆಂಬಲ ಕೊರತೆಯಿಂದಾಗಿ ಅವರು ರಾಜೀನಾಮೆ ನೀಡಬೇಕಾಯಿತು.

2005ರಲ್ಲಿ ಎನ್‌ಡಿಎಗೆ ಸಂಪೂರ್ಣ ಬಹುಮತ ದೊರೆತಾಗ ನಿತೀಶ್ ಕುಮಾರ್ ಮುಖ್ಯಮಂತ್ರಿಯಾದರು. 2014ರಲ್ಲಿ, ಲೋಕಸಭಾ ಚುನಾವಣೆಯಲ್ಲಿ ಜೆಡಿಯುನ ಕಳಪೆ ಸಾಧನೆಯ ದೃಷ್ಟಿಯಿಂದ, ಕುಮಾರ್ ನೈತಿಕ ಆಧಾರದ ಮೇಲೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆದರೆ, ಒಂದು ವರ್ಷದ ಒಳಗೆ ಅವರು ಅಧಿಕಾರಕ್ಕೆ ಮರಳಿದರು.

2015ರಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಲಾಲೂ ಪ್ರಸಾದ್ ನೇತೃತ್ವದ ಆರ್​ಜೆಡಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟ ಮಾಡಿಕೊಂಡು ಭರ್ಜರಿಯಾಗಿ ಜಯಗಳಿಸಿದ್ದರು. ಆದರೆ, ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅಂದಿನ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಹೆಸರು ಕಾಣಿಸಿಕೊಂಡಾಗ ಅವರು ಜುಲೈ 2017ರಲ್ಲಿ ರಾಜೀನಾಮೆ ನೀಡಿದರು. ಬಳಿಕ ನಿತೀಶ್, ಬಿಜೆಪಿಯ ಬೆಂಬಲದೊಂದಿಗೆ ಹೊಸ ಸರ್ಕಾರ ರಚಿಸಿದರು.

ಇದೀಗ ಅವರು ಏಳನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.