ETV Bharat / bharat

ಅರ್ಥವ್ಯವಸ್ಥೆಯನ್ನು ಹತೋಟಿಗೆ ತರಲು ನಿರ್ಮಲಾ ಸೀತಾರಾಮನ್ ಬಳಸಿದ ಸೂತ್ರವೇನು? - Budget announce

ಮಂದಗತಿಯ ಆರ್ಥಿಕ ವೃದ್ಧಿ ದರ ದೇಶದ ಆರ್ಥಿಕತೆಯನ್ನು ಎಲ್ಲರೂ ಪ್ರಶ್ನೆ ಮಾಡುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಹಳಿ ತಪ್ಪುತ್ತಿದ್ದು ಆರ್ಥಿಕತೆಯನ್ನು ಕೆಲ ಸೂತ್ರಗಳ ಮೂಲಕ ಸರಿದಾರಿಗೆ ತರುವ ಕೆಲಸವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಾಡಿದ್ದಾರೆ.

ನಿರ್ಮಲಾ ಸೀತಾರಾಮನ್​ , Nirmala Sitharaman
ನಿರ್ಮಲಾ ಸೀತಾರಾಮನ್​
author img

By

Published : Feb 2, 2020, 3:50 PM IST

ದೇಶದಲ್ಲಿ ನಡೆದ ಕೆಲ ಬದಲಾವಣೆಗಳು ಅದರಲ್ಲೂ ಪ್ರಮುಖವಾಗಿ ಜಿಡಿಪಿಯ (ಆರ್ಥಿಕ ವೃದ್ಧಿ ದರ) ಮಂದಗತಿಯ ಬೆಳವಣಿಗೆ ದೇಶದ ಆರ್ಥಿಕತೆಯನ್ನು ಎಲ್ಲರೂ ಪ್ರಶ್ನೆ ಮಾಡುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಸಾಲಿನ ಬಜೆಟ್​ನಲ್ಲಿ ಕೆಲ ನೀತಿಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಅನುಸರಿಸಿದ್ದು, ಈ ಮೂಲಕ ಹಳಿ ತಪ್ಪುತ್ತಿರುವ ಆರ್ಥಿಕತೆಯನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸಿನ ಕೊರತೆಯ ಗುರಿಯನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಸಡಿಲಿಸಲು ನಿರ್ಧರಿಸಿದ್ದು ಈ ಮೂಲಕ ಸರಕು ಸೇವೆಗಳಿಗೆ ದೇಶದಲ್ಲಿ ಬೇಡಿಕೆ ಹೆಚ್ಚುವಂತೆ ಮಾಡಿದ್ದಾರೆ. ಈ ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ದರವನ್ನು 3.3% ರಿಂದ 3.8% ಕ್ಕೆ ಏರಿಸಲು ಮುಂದಾಗಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಮಂಡಿಸಿದ್ದ ಬಜೆಟ್​ನಲ್ಲಿ ಕೇಂದ್ರ ಸರ್ಕಾರವು 7.03 ಲಕ್ಷ ಕೋಟಿ ರೂ.ಗಳನ್ನು ಸಾಲ ಪಡೆಯುವ ಅಗತ್ಯವಿದೆ ಎಂದು ಅಂದಾಜಿಸಿತ್ತು. ಈ ಬಗ್ಗೆ ಬಜೆಟ್‌ನಲ್ಲೂ ಉಲ್ಲೇಖಿಸಲಾಗಿತ್ತು. ಆದ್ರೆ, ನಿನ್ನೆ ಮಂಡಿಸಿದ ಆಯವ್ಯದಲ್ಲಿ 63,000 ಕೋಟಿ ರೂ. ಎರವಲು ಪಡೆಯಲು ಸರ್ಕಾರ ಮುಂದಾಗಿರುವುದಾಗಿ ತಿಳಿಸಿದೆ.

ಅರ್ಥವ್ಯವಸ್ಥೆಯಲ್ಲಿ ಅನಿರೀಕ್ಷಿತ ತಲ್ಲಣಗಳು, ಬದಲಾವಣೆಗಳು ಉಂಟಾದ ಸಂದರ್ಭದಲ್ಲಿ ನಿಗದಿಪಡಿಸಲಾಗಿದ್ದ ವಿತ್ತೀಯ ಕೊರತೆಯಿಂದ ಪಾರಾಗಲು ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಕಾಯ್ದೆಯಲ್ಲಿ ಅವಕಾಶಗಳಿವೆ. ಈ ವಿಚಾರವನ್ನು ಎನ್‌.ಕೆ. ಸಿಂಗ್‌ ಸಮಿತಿ ವರದಿ ಉಲ್ಲೇಖಿಸಿ ಸಂದಿಗ್ಧತೆಯಿಂದ ಪಾರಾಗುವ ಕೆಲವು ಕಾನೂನಾತ್ಮಕ ಅಂಶಗಳನ್ನು ಬಜೆಟ್‌ ಭಾಷಣದ ವೇಳೆ ನಿರ್ಮಲಾ ಸೀತಾರಾಮಾನ್ ತಿಳಿಸಿದ್ದಾರೆ.

ಸರ್ಕಾರವು ಹಣಕಾಸಿನ ಬಲವರ್ಧನೆಗೆ ಅಂಟಿಕೊಳ್ಳುವುದಿಲ್ಲ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈ ಬಜೆಟ್ ಕೇಂದ್ರ ಸರ್ಕಾರದ ಹಣಕಾಸಿನ ದುರ್ಬಲತೆಯ ನಿಜವಾದ ವ್ಯಾಪ್ತಿಯನ್ನು ಬಹಿರಂಗಪಡಿಸಿದೆ. ಸರ್ಕಾರದ ನಿವ್ವಳ ತೆರಿಗೆ ಸಂಗ್ರಹವು ಕೇವಲ ಏಳು ತಿಂಗಳ ಹಿಂದೆ ನೀಡಿದ ಬಜೆಟ್ ಅಂದಾಜಿಗಿಂತ 1.46 ಲಕ್ಷ ಕೋಟಿ ರೂ.ಆಗಿದೆ.

ಹಾಗಾದ್ರೆ, ವಿತ್ತೀಯ ಕೊರತೆ ಎಂದರೇನು?

ವಿತ್ತೀಯ ಕೊರತೆ ಎಂದರೆ, ಸರ್ಕಾರವು ತನ್ನ ತೆರಿಗೆ ಮತ್ತು ತೆರಿಗೆಯೇತರ ಆದಾಯದಿಂದ ಗಣನೀಯವಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡುತ್ತಿದ್ದು, ಅದು ಸರ್ಕಾರದ ಸಾಲದ ಹೊರೆ ಹೆಚ್ಚಿಸುತ್ತದೆ ಮತ್ತು ಅದರ ಸಾರ್ವಭೌಮ ಶ್ರೇಯಾಂಕದ ಮೇಲೆ ಪರಿಣಾಮ ಬೀರುತ್ತದೆ.

ವಿತ್ತೀಯ ಕೊರತೆ ನೀಗಿಸಲು ಕೇಂದ್ರ ಬಜೆಟ್‌ನಲ್ಲಿ ಈ ಬಗ್ಗೆ ಹೆಚ್ಚು ಗಮನಹರಿಸಲಾಗಿದೆ. ಏಕೆಂದರೆ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಒಟ್ಟಾರೆ ಸಾಲದ ಅಗತ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ. 2019-20ರಲ್ಲಿ ಸರ್ಕಾರವು 7.67 ಲಕ್ಷ ಕೋಟಿ ರೂ.ಗಳನ್ನು ಸಾಲವಾಗಿ ಪಡೆದಿದೆ. ಇದು ಸರ್ಕಾರದ ಒಟ್ಟು ಬಜೆಟ್ ವೆಚ್ಚದ 28% ಕ್ಕಿಂತ ಹೆಚ್ಚಾಗಿದೆ. ಇದನ್ನು ಪರಿಷ್ಕೃತ ಅಂದಾಜಿನ ಪ್ರಕಾರ, 26.99 ಲಕ್ಷ ಕೋಟಿ ರೂ.ಎಂದು ತಿಳಿಸಲಾಗಿದೆ.

ಎಫ್‌ಆರ್‌ಬಿಎಂ ಕಾಯ್ದೆಯಡಿ ಅನುಮತಿಸಲಾದ ವಿತ್ತೀಯ ಕೊರತೆಯ ವಿಚಲನ ಎಂದರೇನು?

2004 ರ ಎಫ್‌ಆರ್‌ಬಿಎಂ ಕಾಯ್ದೆಯ ಕಾರ್ಯವನ್ನು ಪರಿಶೀಲಿಸಲು ರಚಿಸಲಾದ ಸಮಿತಿಯೇ ಎನ್‌,ಕೆ. ಸಿಂಗ್ ಸಮಿತಿ. ಈ ಸಮಿತಿಯು ಆರ್ಥಿಕ ವರ್ಷದಲ್ಲಿ ರಚನಾತ್ಮಕ ಬದಲಾವಣೆಗಳಿಂದ ಉಂಟಾಗುವ ಕಷ್ಟದ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಡಲು 50 ಬೇಸಿಸ್ ಪಾಯಿಂಟ್‌ ಸೂತ್ರವನ್ನು ಸೂಚಿಸಿದೆ.

ಅಸಾಧಾರಣ ಸಂದರ್ಭಗಳಲ್ಲಿ ಹಣಕಾಸಿನ ಕೊರತೆಯ ಗುರಿಯನ್ನು ಸಡಿಲಿಸುವ ಹಿನ್ನೆಲೆಯಲ್ಲಿ ಎನ್‌.ಕೆ.ಸಿಂಗ್ ಸಮಿತಿಯು ಗಮನಹರಿಸಿದೆಯಾದ್ರೂ ನಿಗದಿತ ಗುರಿಯನ್ನು ದುರ್ಬಲಗೊಳಿಸುವ ಸರ್ಕಾರದ ಅಧಿಕಾರವನ್ನು ತಡೆ ಹಿಡಿಯುವುದು ಅಗತ್ಯವೆಂದು ಸಮಿತಿ ತಿಳಿಸಿದೆ. ನಂತರದ ವರ್ಷಗಳಲ್ಲಿ ಹಣಕಾಸಿನ ಬಲವರ್ಧನೆಯ ಹಾದಿಗೆ ಮರಳಲು ಸರ್ಕಾರವು ತನ್ನ ಮಾರ್ಗಸೂಚಿಯನ್ನು ರೂಪಿಸುವುದು ಕಡ್ಡಾಯ ಎಂದೂ ಸಮಿತಿ ಸೂಚಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.