ನವದೆಹಲಿ: ಅಪರಾಧಿಗಳ ಭದ್ರತೆಯ ಹಿತದೃಷ್ಟಿಯಿಂದ ನಿರ್ಭಯಾ ಪ್ರಕರಣದ ಅಪರಾಧಿಯೊಬ್ಬನನ್ನು ಮಂಡೋಲಿ ಜೈಲಿನಿಂದ ಸ್ಥಳಾಂತರಿಸಿದ ನಂತರ ಎಲ್ಲ ನಿರ್ಭಯಾ ಅಪರಾಧಿಗಳನ್ನು ಈಗ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಸದ್ಯ ಬಕ್ಸಾರ್ ಜೈಲಿನ ಸಿಬ್ಬಂದಿಗೆ ನೇಣಿಗೇರಿಸಲು ಬಳಸುವ 10 ಹಗ್ಗಗಳನ್ನು ವಾರಾಂತ್ಯದೊಳಗೆ ತಯಾರು ಮಾಡಿಕೊಳ್ಳುವಂತೆ ನೀಡಲಾಗಿರುವ ಸೂಚನೆಯು ನಿರ್ಭಯಾ ಪ್ರಕರಣದಲ್ಲಿನ ಆರೋಪಿಗಳಿಗೆ ಶೀಘ್ರವೇ ಶಿಕ್ಷೆ ವಿಧಿಸಲಾಗುವುದೆಂಬ ಊಹಾಪೋಹ ಎದ್ದಿದೆ.
2012 ರ ಡಿಸೆಂಬರ್ 16 ರಂದು ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ, ಕ್ರೂರವಾಗಿ ಹಿಂಸೆ ನೀಡಲಾಗಿತ್ತು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಸಂತ್ರಸ್ತೆ ಸಾವನ್ನಪ್ಪಿದ್ದರು. ನಿರ್ಭಯಾ ಪ್ರಕರಣ ಈ ಅಪರಾಧಿಗಳಿಗೆ ಸುಪ್ರೀಂಕೋರ್ಟ್ 1 ವರ್ಷದ ಕೆಳಗೆ ಗಲ್ಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಹೈದರಾಬಾದ್ ಪಶುವೈದ್ಯೆ ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಬೆನ್ನಲ್ಲೇ ನಿರ್ಭಯಾ ಅಪರಾಧಿಗಳಿಗೆ ಶೀಘ್ರವೇ ಶಿಕ್ಷೆಯಾಗಬೇಕು ಎಂದು ನಿರ್ಭಯಾ ಪೋಷಕರು ಹಾಗೂ ಸಾರ್ವಜನಿಕರು ಒತ್ತಾಯಪಡಿಸಿದ್ದರು. ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ನಿರ್ಭಯಾ ಪ್ರಕರಣದ ಎಲ್ಲ ಅಪರಾಧಿಗಳನ್ನು ತಿಹಾರ್ ಜೈಲಿಗೆ ಸ್ಥಳಾಂತರಿಸುವುದಲ್ಲದೇ ಗಲ್ಲುಹಗ್ಗಗಳನ್ನು ತಯಾರಿಸುವಂತೆ ಸೂಚನೆ ನೀಡಲಾಗಿದೆ. ಇದು ನಿರ್ಭಯಾ ಅಪರಾಧಿಗಳಿಗೆ ಶಿಕ್ಷೆ ನೀಡಲು ಇರಬಹುದು ಎಂದೇ ಊಹಿಸಲಾಗಿದೆ.