ಭುವನೇಶ್ವರ್: ಟ್ರಾಫಿಕ್ ನಿಯಮ ಉಲ್ಲಂಘನೆ ಕುರಿತ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಜಾರಿಯಾದ ನಂತರ ಒಡಿಶಾದಲ್ಲಿ ಆಟೋ ರಿಕ್ಷಾ ಮಾಲಿಕನಿಗೆ 47,500 ರೂಪಾಯಿ ದಂಡ ವಿಧಿಸಲಾಗಿದೆ.
ಹರಿಬಿಂಧು ಕಹನರ್ ಎಂಬ ಆಟೋ ರಿಕ್ಷಾ ಮಾಲೀಕನಿಗೆ ಟ್ರಾಫಿಕ್ ಪೊಲೀಸರು ಶಾಕ್ ನೀಡಿದ್ದು, ಹಲವು ಸಂಚಾರಿ ನಿಯಮಗಳನ್ನ ಉಲಂಘಿಸಿದ್ದಾರೆ ಎಂದು ಬರೋಬ್ಬರಿ 47 ಸಾವಿರದ 500 ರೂಪಾಯಿ ದಂಡ ವಿಧಿಸಲಾಗಿದೆ.
ಈ ಬಗ್ಗೆ ತನ್ನ ಅಳಲು ತೋಡಿಕೊಂಡಿರುವ ಆಟೋ ರಿಕ್ಷಾ ಮಾಲೀಕ, ಈ ಆಟೋ ರಿಕ್ಷಾ ಸೆಕೆಂಡ್ ಹ್ಯಾಂಡ್ ಆಗಿದ್ದು, ಅದರ ಬೆಲೆ ಬರಿ 25 ಸಾವಿರ ಬೆಲೆ ಬಾಳುತ್ತದೆ. ಆದರೆ ಅದರ ಎರಡರಷ್ಟು ಮೊತ್ತದ ದಂಡ ವಿಧಿಸಲಾಗಿದೆ. ನಾನು ಡ್ರಿಂಕ್ ಅಂಡ್ ಡ್ರೈವ್ ಬಿಟ್ಟರೆ ಮತ್ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದಿದ್ದಾರೆ.