ETV Bharat / bharat

ಕಾನೂನು ತಿದ್ದುಪಡಿ: ಕಾಶ್ಮೀರದಲ್ಲಿ ಭೂ ಖರೀದಿಗೆ ಅನುವು ಮಾಡಿಕೊಟ್ಟ ಕೇಂದ್ರ - ಜಮ್ಮುಕಾಶ್ಮೀರ ಲೇಟೆಸ್ಟ್ ನ್ಯೂಸ್

ಜಮ್ಮು - ಕಾಶ್ಮೀರ ಮತ್ತು ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೂಮಿ ಮಾರಾಟ ಮತ್ತು ಖರೀದಿಗೆ ಕೇಂದ್ರ ಸರ್ಕಾರ ಹೊಸ ಕಾನೂನುಗಳನ್ನು ಜಾರಿಗೆ ತಂದಿದೆ. ಈವರೆಗೆ ಕಣಿವೆ ರಾಜ್ಯದಲ್ಲಿ ಜಾರಿಯಲ್ಲಿದ್ದ 11 ಭೂ ಕಾಯ್ದೆಗಳನ್ನು ರದ್ದು ಪಡಿಸಿ, ದೇಶದ ಯಾವುದೇ ಭಾಗದ ವ್ಯಕ್ತಿ ಭೂಮಿ ಖರೀದಿ ಮಾಡಲು ಅನುವು ಮಾಡಿ ಕೊಟ್ಟಿದೆ.

Ladakh
ಕೇಂದ್ರ
author img

By

Published : Oct 27, 2020, 7:43 PM IST

ಶ್ರೀನಗರ (ಜಮ್ಮುಕಾಶ್ಮೀರ): ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ನಲ್ಲಿ ಹೊರ ರಾಜ್ಯದವರು ಭೂಮಿ ಖರೀದಿಸಲು ಅನುವಾಗುವಂತೆ ಹಲವು ಕಾನೂನುಗಳ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ತಂದಿದೆ. ಈವರೆಗೆ ಕಣಿವೆ ರಾಜ್ಯದಲ್ಲಿ ಜಾರಿಯಲ್ಲಿದ್ದ 11 ಭೂ ಕಾಯ್ದೆಗಳನ್ನು ಕೇಂದ್ರ ಸರ್ಕಾರ ರದ್ದು ಪಡಿಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರ ರದ್ದುಗೊಳಿಸಿ ವರ್ಷ ಕಳೆದ ಬಳಿಕ ಈ ತಿದ್ದುಪಡಿಗಳನ್ನು ತರಲಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಭೂಮಿ ಖರೀದಿಸಲು ಇರುವ, ಜಮ್ಮು ಮತ್ತು ಕಾಶ್ಮೀರ ಅಭಿವೃದ್ಧಿ ಕಾಯ್ದೆಯ ಸೆಕ್ಷನ್‌ 17ರಿಂದ ರಾಜ್ಯದ ಶಾಶ್ವತ ನಿವಾಸಿ ಅನ್ನೋದನ್ನ ಕೈ ಬಿಡಲಾಗಿದೆ.

ವಿಶೇಷಾಧಿಕಾರ ರದ್ದುಗೊಳಿಸುವ ಮೊದಲು, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳು ಅಲ್ಲದವರು ಈ ಭಾಗದಲ್ಲಿ ಸ್ಥಿರಾಸ್ತಿ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಕೇಂದ್ರ ಸರ್ಕಾರ ಈಗ ಮಾಡಿರುವ ಈ ತಿದ್ದುಪಡಿಯಿಂದಾಗಿ ಹೊರ ರಾಜ್ಯದವರಿಗೂ ಭೂಮಿ ಖರೀದಿಗೆ ಅವಕಾಶ ದೊರೆಯಲಿದೆ.

ಹೊಸ ಕಾನೂನುಗಳ ಪ್ರಕಾರ, ಭೂ ಮಾಲೀಕತ್ವವನ್ನು ಯಾರಿಗೂ ವರ್ಗಾಯಿಸುವಂತಿಲ್ಲ. ಕೇವಲ ಕೃಷಿಕರಿಗೆ ಮಾತ್ರ ಭೂಮಿ ಮಾರಾಟ ಮಾಡಬಹುದು ಎಂದು ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.