ETV Bharat / bharat

ಕಾರ್ಗಿಲ್​ ವಿಜಯೋತ್ಸವ: ರಾಷ್ಟ್ರ ರಾಜಧಾನಿಯಲ್ಲಿ 'ವಿಕ್ಟರಿ ರನ್​'

ಪಾಕಿಸ್ತಾನ​​ ವಿರುದ್ಧ 1999ರ ಕಾರ್ಗಿಲ್​ ಕದನದಲ್ಲಿನ ವಿಜಯದ ಸಂಕೇತವಾಗಿ ರಾಷ್ಟ್ರ ರಾಜಧಾನಿಯಲ್ಲಿ 'ವಿಕ್ಟರಿ ರನ್​' ಕಾರ್ಯಕ್ರಮ ನಡೆಯಿತು.

author img

By

Published : Jul 21, 2019, 10:40 AM IST

ವಿಕ್ಟರಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜುಲೈ 26ರ ಕಾರ್ಗಿಲ್​​ ವಿಜಯ ದಿವಸದ ಹಿನ್ನೆಲೆಯಲ್ಲಿ 'ವಿಕ್ಟರಿ ರನ್​' ಆಯೋಜಿಸಲಾಗಿತ್ತು. ನಗರದ ವಿಜಯ ಚೌಕ್​ ಬಳಿ ಲೆಫ್ಟಿನೆಂಟ್ ಜನರಲ್ ಆಶ್ವನಿ​ ಕುಮಾರ್​ ರನ್​ಗೆ ಚಾಲನೆ ನೀಡಿದ್ರು.

ಪಾಕಿಸ್ತಾನ​​ ವಿರುದ್ಧ 1999ರ ಕಾರ್ಗಿಲ್​ ಕದನದಲ್ಲಿನ ವಿಜಯದ ಸಂಕೇತವಾಗಿ ನಡೆದ 'ವಿಕ್ಟರಿ ರನ್​'ನಲ್ಲಿ ಸಾವಿರಾರು ಜನ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು. ಇನ್ನು ಜುಲೈ 20ರಂದು 'ವಿಕ್ಟರಿ ಫ್ಲೇಮ್​' ಮನಾಲಿಗೆ ತಲುಪಿತ್ತು. ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಜುಲೈ 14ರಂದು ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ 'ವಿಕ್ಟರಿ ಫ್ಲೇಮ್​'ಗೆ ಚಾಲನೆ ನೀಡಿದ್ದರು. ಫ್ಲೇಮ್​​ ಕಾರ್ಗಿಲ್​ ವಿಜಯ ದಿವಸವಾದ ಜುಲೈ 26ರಂದು ಕಾರ್ಗಿಲ್​ ತಲುಪಲಿದೆ.

'ವಿಕ್ಟರಿ ಫ್ಲೇಮ್​' ರೋಹ್ಟಾಂಗ್ ಲಾ ಬಾರಾ-ಲಾಚಾ ಲಾ, ನಾಕಿ ಲಾ, ಲಾಚುಲುಂಗ್ ಲಾ ಮತ್ತು ಟ್ಯಾಂಗ್ಲಾಂಗ್ ಲಾ ಮೂಲಕ ಕಾರ್ಗಿಲ್​ಗೆ ತಲುಪಲಿದೆ. ಇನ್ನು ನಿನ್ನೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ದ್ರಾಸ್​ನಲ್ಲಿರುವ ಕಾರ್ಗಿಲ್​ ಯುದ್ಧ ಸ್ಮಾರಕದ ಬಳಿ ತೆರಳಿ ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸಿದ್ದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.