ಕಾಠ್ಮಂಡು(ನೇಪಾಳ): ಮಹಾ ಶಿವರಾತ್ರಿ ಹಬ್ಬದ ಮುನ್ನ ದಿನವಾದ ಇಂದು ಹಿಮಾಲಯದ ಪಶುಪತಿ ದೇವಾಲಯಕ್ಕೆ ಭಾರತ ಮತ್ತು ನೇಪಾಳದಿಂದ ಸಾವಿರಾರು ಸಾಧುಗಳು ಆಗಮಿಸುತ್ತಿದ್ದಾರೆ.
![Pashupatinath Temple](https://etvbharatimages.akamaized.net/etvbharat/prod-images/6133974_thum.jpg)
ಈ ವರ್ಷ ಫೆಬ್ರವರಿ 21 ರಂದು ನಡೆಯಲಿರುವ ಹಬ್ಬಕ್ಕೆ ಮುಂಚಿತವಾಗಿ ಐದು ಸಾವಿರಕ್ಕೂ ಹೆಚ್ಚು ಸಾಧುಗಳು ಗುರುವಾರ ವೇಳೆಗೆ ಪಶುಪತಿ ತಲುಪುವ ನಿರೀಕ್ಷೆಯಿದೆ ಎನ್ನಲಾಗಿದೆ.
ಕಾಠ್ಮಂಡುವಿನಿಂದ 5 ಕಿ ಮೀ ದೂರದ ಭಾಗ್ಮತಿ ನದಿಯ ದಡದಲ್ಲಿರುವ ಪಶುಪತಿ ದೇವಾಲಯಕ್ಕೆ ದೇಶದ ವಿವಿದ ಮೂಲೆಗಳಿಂದ ಭಕ್ತರು ಸೇರುತ್ತಾರೆ.