ETV Bharat / bharat

NEET ಮಿಸ್​ ಮಾಡಿಕೊಂಡವರಿಗೆ ಇನ್ನೊಂದು ಚಾನ್ಸ್: ಅ.14ರಂದು ಪರೀಕ್ಷೆ: ಸುಪ್ರೀಂ - ಸುಪ್ರೀಂಕೋರ್ಟ್​ ನೀಟ್​ ಪರೀಕ್ಷೆ

ರಾಷ್ಟ್ರೀಯ ಅರ್ಹತೆ ಪ್ರವೇಶ ಪರೀಕ್ಷೆ (ನೀಟ್) ಮಿಸ್​ ಮಾಡಿಕೊಂಡವರಿಗೆ ಮತ್ತೊಮ್ಮೆ ಬರೆಯಲು ಸುಪ್ರೀಂಕೋರ್ಟ್​ ಅವಕಾಶ ನೀಡಿದೆ.

NEET
NEET
author img

By

Published : Oct 12, 2020, 6:14 PM IST

ನವದೆಹಲಿ: ಕಳೆದ ಸೆಪ್ಟೆಂಬರ್​​ 13ರಂದು ದೇಶಾದ್ಯಂತ 2020ನೇ ಸಾಲಿನ ನೀಟ್ ಪರೀಕ್ಷೆ ನಡೆದಿದ್ದು, ಅದರ ಫಲಿತಾಂಶ ಅಕ್ಟೋಬರ್​ 16ರಂದು ಪ್ರಕಟಗೊಳ್ಳಲಿದೆ. ಇದರ ಮಧ್ಯೆ ಸುಪ್ರೀಂಕೋರ್ಟ್​ ಮತ್ತೊಂದು ಮಹತ್ವದ ನಿರ್ಧಾರ ಹೊರಹಾಕಿದೆ.

ಮಹಾಮಾರಿ ಕೊರೊನಾದಿಂದಾಗಿ ಈ ಪರೀಕ್ಷೆ ಮಿಸ್​ ಮಾಡಿಕೊಂಡವರಿಗೆ ಮತ್ತೊಮ್ಮೆ ನೀಟ್​​ ಬರೆಯಲು ಅವಕಾಶ ನೀಡಲಾಗಿದ್ದು, ಅಕ್ಟೋಬರ್​​ 14ರಂದು ಪರೀಕ್ಷೆ ನಡೆಯಲಿದೆ. ಮಹಾಮಾರಿ ಕೊರೊನಾ ವೈರಸ್ ಕಾರಣ ಕಂಟೇನ್ಮೆಂಟ್​​ ವಲಯದಲ್ಲಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ ಮತ್ತೊಂದು ಅವಕಾಶ ನೀಡಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದೆ.

ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬ್ಡೆ ನೇತೃತ್ವದ ಪೀಠ ಈ ಆದೇಶ ಹೊರಹಾಕಿದೆ. ಇದೇ ವಿಚಾರವಾಗಿ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಟ್ವೀಟ್ ಕೂಡ ಮಾಡಿದ್ದಾರೆ. ಸೆಪ್ಟೆಂಬರ್​​ 13ರಂದು ಪರೀಕ್ಷೆ ಆಯೋಜನೆ ಮಾಡಿದ್ದಕ್ಕಾಗಿ ಅನೇಕ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಜತೆಗೆ ತಾವು ಈ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಅಳಲು ತೊಡಿಕೊಂಡಿದ್ದರು. ಇದರ ಬೆನ್ನಲ್ಲೇ ಸುಪ್ರೀಂಕೋರ್ಟ್​ ಈ ಮಹತ್ವದ ಆದೇಶ ಹೊರಹಾಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.