ETV Bharat / bharat

ವಿಶ್ಲೇಷಣೆ: ಕೊರೊನಾ ಕಂಟಕದ ನಡುವೆ ಮದ್ಯ ಮಾರಾಟದ ಅವಶ್ಯಕತೆ ಇದೆಯೇ? - corona virus

ಮದ್ಯದ ಅಂಗಡಿಗಳನ್ನು ಈಗ ತೆರೆದಿದ್ದರಿಂದಾಗಿ, ಸಾಮಾಜಿಕ ಅಂತರದ ನಿಯಮಗಳನ್ನು ಮರೆತು ಜನರು ಮದ್ಯದ ಅಂಗಡಿ ಮುಂದೆ ಸರದಿಯಲ್ಲಿ ನಿಂತಿದ್ದರು. ಹೈಪರ್ಟೆನ್ಷನ್, ಡಯಾಬಿಟೀಸ್ ಮತ್ತು ಇತರ ರೋಗಗಳನ್ನು ಹೊಂದಿರುವವರು ಕೊವೀಡ್ ಸೋಂಕಿಗೆ ಹೆಚ್ಚು ತುತ್ತಾಗುತ್ತಾರೆ ಎಂದು ವೈದ್ಯರು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಮದ್ಯದ ಅಂಗಡಿಗಳನ್ನು ತೆರೆಯುವ ನಿರ್ಧಾರವನ್ನು ಸರ್ಕಾರ ಯಾಕೆ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿದಿಲ್ಲ.

Need of liquor during corona pandemic..?
ಕೊರೊನಾ ಕಂಟಕದ ನಡುವೆ ಮದ್ಯ ಮಾರಾಟದ ಅವಶ್ಯಕತೆ ಇದೆಯೇ?
author img

By

Published : May 8, 2020, 4:25 PM IST

ಇಡೀ ದೇಶ ಆರ್ಥಿಕ ಕುಸಿತದ ಆಘಾತದಲ್ಲಿರುವಾಗ ಕೊರೊನಾ ಬರಸಿಡಿಲಿನಂತೆ ಬಂದೆರಗಿದೆ. ದೇಶದ ಜನರಿಗೆ ಹಾಗೂ ಆರ್ಥಿಕತೆಯನ್ನು ಇದು ಇನ್ನಷ್ಟು ಕುಸಿಯುವಂತೆ ಮಾಡಿದೆ. ಎಲ್ಲ ಔದ್ಯಮಿಕ ಮತ್ತು ಸೇವಾ ಕ್ಷೇತ್ರದ ಚಟುವಟಿಕೆಗಳು ನಿಂತುಹೋಗಿ ಸರ್ಕಾರದ ಖಜಾನೆಗೆ ನಷ್ಟವಾಗಿದೆ. ಕೊವೀಡ್ ವಿರುದ್ಧ ಹೋರಾಟ ನಡೆಸುತ್ತಿರುವ ಕೇಂದ್ರ ಸರ್ಕಾರವು ಆರ್ಥಿಕ ಉತ್ತೇಜನ ಪ್ಯಾಕೇಜ್​ಗಳನ್ನು ನೀಡಿ,ರಾಜ್ಯಗಳನ್ನು ರಕ್ಷಿಸಬೇಕು ಎಂಬ ಬೇಡಿಕೆ ಕೇಳಿ ಬರುತ್ತಿದೆ. ಈವರೆಗೂ ಕೇಂದ್ರ ಸರ್ಕಾರ ಇದಕ್ಕೆ ಕಿವಿಗೊಟ್ಟಿಲ್ಲ. ಆದರೆ, ಕೆಲವು ಷರತ್ತುಗಳ ಮೇಲೆ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ. ಒಂದೂವರೆ ತಿಂಗಳು ಮದ್ಯದ ಅಂಗಡಿಯನ್ನು ಬಂದ್ ಮಾಡಿದ್ದರಿಂದಾಗಿ ರಾಜ್ಯಗಳಿಗೆ ಉಂಟಾದ ಕಂದಾಯ ನಷ್ಟ ಅಂದಾಜು 30 ಸಾವಿರ ಕೋಟಿ ರೂ.ಗಳಾಗಿವೆ. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಕರ್ನಾಟಕ ಸರ್ಕಾರಗಳ ಶೇ. 20 ರಷ್ಟು ಆದಾಯ ಮತ್ತು ಪಶ್ಚಿಮ ಬಂಗಾಳ, ಛತ್ತೀಸ್​ಗಢ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ತೆಲಂಗಾಣದ ಶೇ.15-20 ರಷ್ಟು ಆದಾಯವು ಅಬಕಾರಿ ಇಲಾಖೆಯಿಂದ ಬರುತ್ತಿದೆ.

ಕೇಂದ್ರ ಸರ್ಕಾರಕ್ಕೆ ಹೋಲಿಸಿದರೆ ರಾಜ್ಯಗಳು ಒಂದೂವರೆ ಪಟ್ಟು ಹೆಚ್ಚು ಆರ್ಥಿಕ ಹೊರೆಯನ್ನು ಅನುಭವಿಸುತ್ತಿವೆ. ಇವು ಐದು ಪಟ್ಟು ಹೆಚ್ಚು ಉದ್ಯೋಗಿಗಳ ಪಾಲು ಹೊಂದಿವೆ ಮತ್ತು ಮದ್ಯದಿಂದ ಆದಾಯವು ರಾಜ್ಯದ ಬಜೆಟ್​ಗಳಿಗೆ ದಶಕಗಳಿಂದಲೂ ಮಹತ್ವದ ಭಾಗವಾಗಿಯೇ ಮುಂದುವರಿದಿದೆ. ಕೇಂದ್ರ ಸರ್ಕಾರದಿಂದ ಯಾವುದೇ ಆರ್ಥಿಕ ಸಹಕಾರ ಲಭ್ಯವಾಗದೇ ಇದ್ದುದರಿಂದ, ಮದ್ಯದ ಅಂಗಡಿಗಳನ್ನು ತೆರೆಯುವ ಅವಕಾಶವನ್ನು ಸುಲಭವಾಗಿ ರಾಜ್ಯಗಳು ಒಪ್ಪಿಕೊಂಡಿವೆ. ಒಂದಷ್ಟು ಕೊರತೆಯನ್ನು ನೀಗಿಸಿಕೊಳ್ಳುವ ಅವಕಾಶವನ್ನು ಬಳಸಿಕೊಂಡ ರಾಜ್ಯಗಳು ತೆರಿಗೆಯನ್ನೂ ಹೆಚ್ಚಳ ಮಾಡಿವೆ. ದೆಹಲಿಯು ಶೇ. 70, ಆಂಧ್ರ ಪ್ರದೇಶವು ಶೇ. 75, ತೆಲಂಗಾಣವು ಶೇ. 16 ಮತ್ತು ಪಶ್ಚಿಮ ಬಂಗಾಳವು ಶೇ. 30 ರಷ್ಟು ತೆರಿಗೆಯನ್ನು ಹೆಚ್ಚಳ ಮಾಡಿದೆ. ಮದ್ಯ ಖರೀದಿಗೆ ಕಿಲೋ ಮೀಟರ್​ಗಳವರೆಗೆ ದೂರದ ಸರದಿ ಇದ್ದು, ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಡಿಸ್ಟಿಲ್ಲರಿಗಳಿಗೆ ಹೆಚ್ಚು ಸಮಯದವರೆಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮದ್ಯ ಉದ್ಯಮ ಬೇಡಿಕೆ ಸಲ್ಲಿಸಿದೆ. 40 ದಿನಗಳಿಂದ ವಿಧಿಸಿದ್ದ ಲಾಕ್​ಡೌನ್​ನಿಂದಾಗಿ ಗಳಿಸಿದ್ದೆಲ್ಲವೂ ಶೂನ್ಯವೇ ಎಂದು ಸಮಾಜ ಕೇಳುವ ಪ್ರಶ್ನೆಗೆ ಉತ್ತರ ಯಾರು ನೀಡುತ್ತಾರೆ?

ಕಟು ವಾಸ್ತವವೆನೆಂದರೆ, ಕೊವೀಡ್ ಸಾಂಕ್ರಾಮಿಕ ರೋಗ ಒಂದೆಡೆಯಾದರೆ, ದೇಶದಲ್ಲಿ ಮದ್ಯ ವ್ಯಸನವೂ ಅಷ್ಟೇ ದೊಡ್ಡ ಸಾಂಕ್ರಾಮಿಕ ರೋಗವಾಗಿದೆ. ದೇಶದಲ್ಲಿ 16 ಕೋಟಿ ಮದ್ಯ ವ್ಯಸನಿಗಳಿದ್ದಾರೆ. ಇದು ಲಕ್ಷಾಂತರ ಕುಟುಂಬಗಳನ್ನ ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. 2018 ಸೆಪ್ಟೆಂಬರ್​ನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದಂತೆ ಪ್ರತಿ ವರ್ಷ ಮದ್ಯ ವ್ಯಸನದಿಂದ 2,60,000 ಜನರು ಅವಧಿಗೂ ಮೊದಲೇ ಸಾವನ್ನಪ್ಪುತ್ತಿದ್ದಾರೆ. ಪ್ರತಿ ದಿನ ಸರಾಸರಿ 712 ಜನರನ್ನು ಸಾಯಿಸುತ್ತದೆ. ಆದರೆ ಸರ್ಕಾರಕ್ಕೆ ಪ್ರತಿ ದಿನ 700 ಕೋಟಿ ರೂ. ನೀಡುತ್ತದೆ. ಮದ್ಯ ವ್ಯಸನದಿಂದ ಸುಮಾರು 230 ರೋಗಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯಕೀಯ ಪರಿಣಿತರು ಹೇಳುತ್ತಾರೆ. ಇನ್ನೊಂದೆಡೆ ಈ ಮದ್ಯ ವ್ಯಸನದಿಂದಾಗಿ ಹಲವು ಕುಟುಂಬಗಳು ನೆಮ್ಮದಿ ಮತ್ತು ಶಾಂತಿಯನ್ನು ಕಳೆದುಕೊಂಡಿವೆ ಎಂದು ಸಾಮಾಜಿಕ ಪರಿಣಿತರು ಹೇಳುತ್ತಾರೆ.

ದೇಶದ ಅಬಕಾರಿ ಆದಾಯವು 2004-05 ರಲ್ಲಿ 28 ಸಾವಿರ ಕೋಟಿಯಾಗಿದ್ದು, ಆಗಿನಿಂದ ಹತ್ತು ಪಟ್ಟು ಹೆಚ್ಚಳ ಕಂಡಿದೆ. ಆದರೆ,ಇದು ಸಾಮಾಜಿಕ ಅವನತಿಗೆ ಕಾರಣವಾಗಿದೆ. ಅಪಾರ ಸಂಖ್ಯೆಯ ಮಕ್ಕಳನ್ನು ಅನಾಥರನ್ನಾಗಿ ಮಾಡಿವೆ ಮತ್ತು ಯುವತಿಯರನ್ನು ವಿಧವೆಯರನ್ನಾಗಿ ಮಾಡಿವೆ. ಅಷ್ಟೇ ಅಲ್ಲ, ಯುವಕರು ಈ ವ್ಯಸನದಿಂದ ಸಾವಿಗೆ ಶರಣಾಗುತ್ತಿದ್ದಾರೆ. ಇದನ್ನು ಹಣದಿಂದ ಸರಿಪಡಿಸಲಾಗದು. ಲಾಕ್​ಡೌನ್​ನಲ್ಲಿ ಈ ಮದ್ಯ ಸಿಗದೇ ವ್ಯಸನದಿಂದ ಜನರು ಮುಕ್ತವಾಗಿದ್ದಾಗ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದವು. ಎಲ್ಲ ಮದ್ಯದ ಅಂಗಡಿಗಳೂ ಮುಚ್ಚಿದ್ದವು. ಹಲವು ಮದ್ಯ ವ್ಯಸನಿಗಳು ಆರೋಗ್ಯದಲ್ಲಿ ಸುಧಾರಣೆ ಕಂಡುಕೊಂಡಿದ್ದರು ಮತ್ತು ಜೀವನ ಶೈಲಿಯನ್ನೂ ಬದಲಿಸಿಕೊಂಡಿದ್ದರು. ಆದರೆ, ಮದ್ಯದ ಅಂಗಡಿಗಳನ್ನು ಈಗ ತೆರೆದಿದ್ದರಿಂದಾಗಿ, ಸಾಮಾಜಿಕ ಅಂತರದ ನಿಯಮಗಳನ್ನು ಮರೆತು ಜನರು ಮದ್ಯದ ಅಂಗಡಿ ಮುಂದೆ ಸರದಿಯಲ್ಲಿ ನಿಂತಿದ್ದರು. ಹೈಪರ್ಟೆನ್ಷನ್, ಡಯಾಬಿಟೀಸ್ ಮತ್ತು ಇತರ ರೋಗಗಳನ್ನು ಹೊಂದಿರುವವರು ಕೊವೀಡ್ ಸೋಂಕಿಗೆ ಹೆಚ್ಚು ತುತ್ತಾಗುತ್ತಾರೆ ಎಂದು ವೈದ್ಯರು ಪದೇ ಪದೇ ಎಚ್ಚರಿಕೆ ನೀಡುತ್ತಿದ್ದರೂ ಮದ್ಯದ ಅಂಗಡಿಗಳನ್ನು ತೆರೆಯುವ ನಿರ್ಧಾರವನ್ನು ಯಾಕೆ ತೆಗೆದುಕೊಳ್ಳಲಾಗಿದೆ ಎಂಬುದು ತಿಳಿದಿಲ್ಲ. ಇದರಿಂದಾಗಿ ಈ ಸಾಂಕ್ರಾಮಿಕ ರೋಗ ಹರಡುವ ಪ್ರಮಾಣ ಇನ್ನಷ್ಟು ಹೆಚ್ಚಳವಾಗಲಿದೆ. ಮದ್ಯದ ಅಂಗಡಿಗಳನ್ನು ತೆರೆಯುವ ಸರ್ಕಾರದ ನಿರ್ಧಾರದಿಂದಾಗಿ ಕೊರೊನಾ ರಾಕ್ಷಸನಿಗಿಂತ ಹೆಚ್ಚಿನ ಹಾನಿಯನ್ನು ಮದ್ಯ ರಾಕ್ಷಸನೇ ಮಾಡುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.