ETV Bharat / bharat

ಮುಫ್ತಿಗೆ ಗೃಹಬಂಧನದಿಂದ ಮುಕ್ತಿ: ಪಿಡಿಪಿ ಮುಖ್ಯಸ್ಥೆಯ ಭೇಟಿ ಮಾಡಿದ ಫಾರೂಕ್‌, ಒಮರ್ - PDP chief Mehbooba Mufti release

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ವಿಧಿ 370 ಅನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಗೃಹ ಬಂಧನಕ್ಕೊಳಗಾಗಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಪುತ್ರ ಒಮರ್ ಅಬ್ದುಲ್ಲಾ ಭೇಟಿಯಾದರು.

ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭೇಟಿಯಾದ ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ

author img

By

Published : Oct 14, 2020, 5:39 PM IST

Updated : Oct 14, 2020, 5:44 PM IST

ಜಮ್ಮು ಕಾಶ್ಮೀರ: ಒಂದು ವರ್ಷಕ್ಕೂ ಹೆಚ್ಚು ಕಾಲ ಗೃಹ ಬಂಧನದಲ್ಲಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರನ್ನು ನಿನ್ನೆ ಬಿಡುಗಡೆ ಮಾಡಿದೆ.

ನ್ಯಾಶನಲ್ ಕಾನ್ಫರೆನ್ಸ್‌ (ಎನ್‌ಸಿ) ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಮತ್ತು ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಅವರು ಇಂದು ಅವರನ್ನು ಭೇಟಿ ಮಾಡಿದ್ದು, ಕೆಲಕಾಲ ಮಾತುಕತೆ ನಡೆಸಿದರು.

ಗೃಹ ಬಂಧನದಿಂದ ಬಿಡುಗಡೆಯಾದ ನಂತರ ಅವರ ಯೋಗಕ್ಷೇಮದ ಬಗ್ಗೆ ವಿಚಾರಿಸಲು ನನ್ನ ತಂದೆ ಮತ್ತು ನಾನು ಇಂದು ಮಧ್ಯಾಹ್ನ ಮೆಹಬೂಬಾ ಮುಫ್ತಿ ಅವರನ್ನು ಭೇಟಿ ಮಾಡಿದ್ದೆವು. ಗುಪ್ಕರ್ ಘೋಷಣೆ ಸಹಿ ಮಾಡಿದವರು ಗುರುವಾರ ಸಭೆಯಲ್ಲಿ ಭಾಗಿಯಾಗಲು ಫಾರೂಕ್ ಅಬ್ದುಲ್ಲಾ ಅವರು ಮಾಡಿದ ಮನವಿಗೆ ಮುಫ್ತಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಒಮರ್ ಟ್ವೀಟ್ ಮಾಡಿದ್ದಾರೆ.

  • My father & I called on @MehboobaMufti Sahiba this afternoon to enquire about her well-being after her release from detention. She has kindly accepted Farooq Sb’s invitation to join a meeting of the Gupkar Declaration signatories tomorrow afternoon. pic.twitter.com/MR9IQPFW2T

    — Omar Abdullah (@OmarAbdullah) October 14, 2020 " class="align-text-top noRightClick twitterSection" data=" ">

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ಅನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಅಲ್ಲಿನ ರಾಜಕೀಯ ನಾಯಕರನ್ನು ಕೇಂದ್ರ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲರು ಗೃಹ ಬಂಧನಲ್ಲಿಟ್ಟಿದ್ದರು. ಈ ಆದೇಶದ ಪ್ರಕಾರ ಮೆಹಬೂಬಾ ಕಣಿವೆ ರಾಜ್ಯದಲ್ಲಿ ಗೃಹ ಬಂಧನಕ್ಕೀಡಾದ ಮೊದಲ ರಾಜಕೀಯ ನಾಯಕಿಯಾಗಿದ್ದಾರೆ. ಆ ಬಳಿಕ ಒಮರ್ ಅಬ್ದುಲ್ಲಾ ಸೇರಿದಂತೆ ಎಲ್ಲ ಪ್ರತ್ಯೇಕತಾವಾದಿ ನಾಯಕರನ್ನು ಸರ್ಕಾರ ಗೃಹ ಬಂಧನದಲ್ಲಿರಿಸಿತ್ತು.

Last Updated : Oct 14, 2020, 5:44 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.