ನವದೆಹಲಿ: ಇಂದು ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಎಲ್ಲಾ ಮತದಾರರು ತಪ್ಪದೇ ಮತ ಚಲಾಯಿಸುವ ಮುಖೇನ ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.
ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಿಗೆ ಚುನಾವಣೆ ನಡೆಯುತ್ತಿದೆ. ಅಲ್ಲದೇ ಭಾರತದ ವಿವಿಧ ಭಾಗಗಳಲ್ಲಿ ಉಪ ಚುನಾವಣೆಗಳು ನಡೆಯುತ್ತಿವೆ. ಈ ರಾಜ್ಯಗಳಲ್ಲಿನ ಮತದಾರರು ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಈ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ ಅಂತ ನಾನು ಭಾವಿಸುತ್ತೇನೆ ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
-
Elections are taking place for Haryana and Maharashtra assemblies. There are also by-polls taking place in various parts of India. I urge voters in these states and seats to turnout in record numbers and enrich the festival of democracy. I hope youngsters vote in large numbers.
— Narendra Modi (@narendramodi) October 21, 2019 " class="align-text-top noRightClick twitterSection" data="
">Elections are taking place for Haryana and Maharashtra assemblies. There are also by-polls taking place in various parts of India. I urge voters in these states and seats to turnout in record numbers and enrich the festival of democracy. I hope youngsters vote in large numbers.
— Narendra Modi (@narendramodi) October 21, 2019Elections are taking place for Haryana and Maharashtra assemblies. There are also by-polls taking place in various parts of India. I urge voters in these states and seats to turnout in record numbers and enrich the festival of democracy. I hope youngsters vote in large numbers.
— Narendra Modi (@narendramodi) October 21, 2019
ಮುಂದಿನ ಐದು ವರ್ಷಗಳ ಕಾಲ ಸರ್ಕಾರವನ್ನು ನಡೆಸಲು ಯಾರಿಗೆ ಅವಕಾಶ ನೀಡಬೇಕು ಎಂದು ಇಂದು ಮಹಾರಾಷ್ಟ್ರದ ಜನರು ನಿರ್ಧರಿಸಲಿದ್ದಾರೆ. ಆದ್ದರಿಂದ ಮಹಾರಾಷ್ಟ್ರದ ನನ್ನ ಎಲ್ಲಾ ಸಹೋದರ-ಸಹೋದರಿಯರು ವಿಶೇಷವಾಗಿ ನನ್ನ ಯುವ ಗೆಳೆಯರೆಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದ್ದಾರೆ.
ಇಂದು ಹರಿಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮತದಾನದ ದಿನವಾಗಿದೆ. ಎಲ್ಲಾ ಮತದಾರರು ತಮ್ಮ ಮತ ಚಲಾಯಿಸಿ ಪ್ರಜಾಪ್ರಭುತ್ವದ ಈ ಉತ್ಸವದಲ್ಲಿ ಭಾಗವಹಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.