ವಾರಣಾಸಿ (ಉತ್ತರ ಪ್ರದೇಶ): ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋಧ್ಯಮ ನಿಗಮದ (ಐಆರ್ಸಿಟಿಸಿ) ನೂತನ "ಮಹಾ ಕಾಲ್ ಎಕ್ಸ್ಪ್ರೆಸ್" ರೈಲಿಗೆ ವೀಡಿಯೋ ಕಾನ್ಪರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ್ದಾರೆ.
ಖಾಸಗಿ ರೈಲ್ವೇ ನೆಟ್ವರ್ಕ್ನ ಮೂರನೇ ರೈಲು ಇದಾಗಿದ್ದು, ಫೆಬ್ರವರಿ 20 ರಿಂದ ವಾರಣಾಸಿ-ಇಂದೋರ್ ಮಾರ್ಗದಲ್ಲಿ ಸೇವೆ ಪ್ರಾರಂಭಿಸಲಿದೆ. ರಾತ್ರಿ ಸೇವೆ ನೀಡುವ ದೇಶದ ಮೊದಲ ಖಾಸಗಿ ರೈಲು ಮಹಾ ಕಾಲ್, ಉತ್ತರ ಪ್ರದೇಶದ ವಾರಣಾಸಿಯ ಮೂರು ಜ್ಯೋತಿರ್ಲಿಂಗ ಯಾತ್ರಾ ಕೇಂದ್ರಗಳನ್ನು ಮತ್ತು ಮಧ್ಯಪ್ರದೇಶದ ಉಜ್ಜಯಿನಿ, ಓಂಕಾರೇಶ್ವರಗಳನ್ನು ಸಂಪರ್ಕಿಸಲಿದೆ. ಈ ವಿಶೇಷ ರೈಲಿನಲ್ಲಿ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಪ್ಯಾಕೇಜ್ಗಳನ್ನು ಐಆರ್ಸಿಟಿಸಿ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅಲ್ಲದೆ, ರೈಲಿನಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ 10 ಲಕ್ಷ ರೂ.ಗಳ ಪ್ರಯಾಣ ವಿಮೆಯನ್ನು ನೀಡಲಾಗುತ್ತದೆ ಎಂದು ಐಆರ್ಅಸಿಟಿಸಿ ತಿಳಿಸಿದೆ. ಮಹಾ ಕಾಲ್ ಎಕ್ಸ್ಪ್ರೆಸ್ಗಾಗಿ ಐಆರ್ಸಿಟಿಸಿ ವೆಬ್ಸೈಟ್ ಮತ್ತು ಮೊಬೈಲ್ ಆ್ಯಪ್ "ಐಆರ್ಸಿಟಿಸಿ ರೈಲ್ ಕನೆಕ್ಟ್' ನಲ್ಲಿ ಬುಕಿಂಗ್ ಮಾಡಬಹುದು. ಈ ರೈಲು 120 ದಿನಗಳ ಮುಂಗಡ ಕಾಯ್ದಿರಿಸುವ ಅವಧಿಯನ್ನು ಹೊಂದಿರುತ್ತದೆ ಮತ್ತು ಸಾಮಾನ್ಯ ಮತ್ತು ವಿದೇಶಿ ಪ್ರವಾಸಿ ಕೋಟಾ ಒಳಗೊಂಡಿದೆ.