ಅಹಮದಾಬಾದ್ (ಗುಜರಾತ್): ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ ನಡೆಯಲಿರುವ ಬೃಹತ್ ಸ್ವಾಗತ ರ್ಯಾಲಿಯ ಹೆಸರನ್ನು "ನಮಸ್ತೆ ಟ್ರಂಪ್" ಎಂದು ಬದಲಾಯಿಸಲಾಗಿದೆ.
ಈ ಮೊದಲು ಟ್ರಂಪ್ ಸ್ವಾಗತ ರ್ಯಾಲಿ ಹೆಸರನ್ನು "ಕೆಮ್ ಚೋ ಟ್ರಂಪ್ " ಎಂದು ಇಡಲಾಗಿತ್ತು. ಈಗ ಆ ಹೆಸರನ್ನು ನಮಸ್ತೆ ಟ್ರಂಪ್ ಎಂದು ಬದಲಾಯಿಸಲಾಗಿದೆ. ಅಹಮದಾಬಾದ್ ನಗರ ಪಾಲಿಕೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯನ್ನು ಪ್ರಕಟಿಸಿದೆ.
ಕಳೆದ ವರ್ಷ ಪ್ರಧಾನಿ ಮೋದಿ ಅಮೆರಿಕ ಭೇಟಿ ವೇಳೆ "ಹೌಡಿ ಮೋದಿ" ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಿ ಭಾರತ ಪ್ರಧಾನಿಗೆ ಅಮೆರಿಕ ನೆಲದಲ್ಲಿ ಅಭೂತಪೂರ್ವ ಸ್ವಾಗತ ಕೋರಲಾಗಿತ್ತು. ಈಗ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತಕ್ಕೆ ಭೇಟಿ ನೀಡುತ್ತಿದ್ದು ಅವಿಸ್ಮರಣೀಯ ಸ್ವಾಗತ ಕೊರಲು ಕೇಂದ್ರ ಹಾಗೂ ಗುಜರಾತ್ ರಾಜ್ಯ ಸರ್ಕಾರ ಸಜ್ಜಾಗಿದೆ.
ಅಂದಹಾಗೆ ಕೆಮ್ ಚೋ ಎಂಬುದು ಗುಜರಾತಿ ಭಾಷೆಯಾಗಿದ್ದು, “ಹೇಗಿದ್ದೀರಿ ಟ್ರಂಪ್” ಎನ್ನುವ ಅರ್ಥ ಕೊಡುತ್ತದೆ.