ಬಿಹಾರ: ದೆಹಲಿಯ ನಿಜಾಮುದ್ದೀನ್ ಘಟನೆಯ ಬಳಿಕ, ಇದೀಗ ಬಿಹಾರದ ನಳಂದಾ ಮಾರ್ಕಜ್ನಲ್ಲಿ 640 ಜನ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ ಅವರಲ್ಲಿ 4 ಜನರಲ್ಲಿ ಕೊರೊನಾ ವೈರಸ್ ದೃಢಪಟ್ಟಿದೆ. ಭಾಗಿಯಾಗಿದ್ದ 640 ಜನರಲ್ಲಿ ಸುಮಾರು 277 ಜನರನ್ನು ಈವರೆಗೆ ಪತ್ತೆಹಚ್ಚಲಾಗಿದ್ದು, ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ನಳಂದಾದ ಬಿಹರ್ಶರೀಫ್‌ನ ಶೇಖ್ನಾ ಮಸೀದಿಯಲ್ಲಿ ನಡೆದ ಮರ್ಕಜ್ನಲ್ಲಿ 1000ರಿಂದ 1200 ಜನರು ಭಾಗಿಯಾಗಿದ್ದರು ಎಂದು ಮರ್ಕಜ್ನ ಮೂಲಗಳಿಂದ ತಿಳಿದುಬಂದಿದೆ.
ವರದಿಯ ಪ್ರಕಾರ, ನಳಂದಾ ಮರ್ಕಜ್ಗೆ ಹಾಜರಾದ ನವಾಡಾ ಜಿಲ್ಲೆಯ ವ್ಯಕ್ತಿಯಲ್ಲಿ ಈಗಾಗಲೇ ಕೋವಿಡ್-19 ದೃಢಪಟ್ಟಿದೆ. ಇದಲ್ಲದೆ, ದೆಹಲಿ ಮರ್ಕಜ್ನಲ್ಲಿ ಭಾಗಿಯಾಗಿ ಬಳಿಕ ನಳಂದಾ ಮರ್ಕಜ್ಗೆ ಹಾಜರಾದ ಮುಂಗರ್ನ ಇನ್ನೊಬ್ಬ ವ್ಯಕ್ತಿಯಲ್ಲಿ ಕೂಡಾ ಕೋವಿಡ್-19 ದೃಢಪಟ್ಟಿದೆ.
ಮರ್ಕಜ್ನಲ್ಲಿ ಭಾಗಿಯಾದವರ ಟ್ರಾವೆಲ್ ಹಿಸ್ಟರಿ ಮತ್ತು ಸಂಪರ್ಕಿತರನ್ನು ಟ್ರೇಸ್ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಪತ್ತೆಹಚ್ಚಲಾಗಿರುವ 277 ಮಂದಿಯಲ್ಲಿ ಭಾಗಲ್ಪುರದಿಂದ 8, ಲಖಿಸರೈಯಿಂದ 1, ಬೆಗುಸರಾಯ್ಯಿಂದ 20, ಖಾಗೇರಿಯಾದಿಂದ 8, ಜಮುಯಿ, ಬಂಕಾ, ಮೋತಿಹಾರಿ, ವೈಶಾಲಿ, ಬಕ್ಸಾರ್ ಮತ್ತು ಭೋಜ್ಪುರದ ತಲಾ 4 ಮಂದಿ ಇದ್ದಾರೆ. ಮುಜಾಫರ್ಪುರದಿಂದ 13, ದರ್ಬಂಗಾ ಮತ್ತು ಮಧುಬಾನಿಯಿಂದ 11, ಮಾಧೇಪುರದಿಂದ 17, ಸುಪಾಲ್ನಿಂದ 7, ನಳಂದದಿಂದ 14, ಸಿವಾನ್ನಿಂದ 12, ರೋಹ್ತಾಸ್ನಿಂದ 5, ಪಾಟ್ನಾದಿಂದ 25 ಮಂದಿ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದಿದೆ.
ಆದರೆ ಮರ್ಕಜ್ನಲ್ಲಿ ಭಾಗಿಯಾಗಿದ್ದ ಕೆಲವರು ನಾಪತ್ತೆಯಾಗಿದ್ದು, ಪತ್ತೆಕಾರ್ಯ ಮುಂದುವರಿದಿದೆ. ನಳಂದದ ಬಿಹಾರ ಷರೀಫ್‌ನಲ್ಲಿ ನಡೆದ ತಬ್ಲಿಘಿ ಜಮಾತ್ ಸಭೆಯ ಬಗ್ಗೆ ಮಾಹಿತಿ ಪಡೆದ ನಂತರ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತಿದೆ ಎಂದು ಬಿಹಾರ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಹೇಳಿದ್ದಾರೆ.