ETV Bharat / bharat

ಸಶಸ್ತ್ರ ಪಡೆಗಳ ಸ್ಥೈರ್ಯಗುಂದಿಸಲು ರಾಹುಲ್ ಗಾಂಧಿ ಯತ್ನ: ಜೆ.ಪಿ.ನಡ್ಡಾ ಆರೋಪ - ಕ್ಸಿ ಜಿನ್‌ಪಿಂಗ್

ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಹೇಳಿಕೆಗಳ ಮೂಲಕ ರಾಷ್ಟ್ರವನ್ನು ವಿಭಜಿಸಲು ಮತ್ತು ಸಶಸ್ತ್ರ ಪಡೆಗಳನ್ನು ನಿರಾಶೆಗೊಳಿಸಲು ರಾಹುಲ್ ಗಾಂಧಿ ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.

Nadda attacks Rahul Gandhi
ರಾಗಾ ವಿರುದ್ಧ ನಡ್ಡಾ ವಾಗ್ದಾಳಿ
author img

By

Published : Jun 23, 2020, 1:50 PM IST

Updated : Jun 23, 2020, 2:04 PM IST

ನವದೆಹಲಿ: ರಾಹುಲ್ ಗಾಂಧಿ, 'ರಾಷ್ಟ್ರವನ್ನು ವಿಭಜಿಸಲು' ಮತ್ತು 'ಸಶಸ್ತ್ರ ಪಡೆಗಳನ್ನು ನಿರಾಶೆಗೊಳಿಸಲು' ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.

ಪೂರ್ವ ಲಡಾಖ್​ನ ಗಾಲ್ವಾನ್​ ಕಣಿವೆಯಲ್ಲಿ ನಡೆದ ಸಂಘರ್ಷದ ವಿಚಾರವಾಗಿ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಬಂದಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೆ ನಡ್ಡಾ ತಿರುಗೇಟು ನೀಡಿದ್ದಾರೆ. 2008ರಲ್ಲಿ ಚೀನಾದೊಂದಿಗೆ ಕಾಂಗ್ರೆಸ್​ ಮಾಡಿಕೊಂಡ ಒಡಂಬಡಿಕೆಯ ಪರಿಣಾಮ ಇಂದು ಈ ಪರಿಸ್ಥಿತಿ ಬಂದೊದಗಿದೆ ಎಂದು ಅವರು ಹೇಳಿದ್ದಾರೆ.

  • First, Congress signs MoU with Chinese Communist Party.

    Then, Congress surrenders land to China.

    During Doklam issue, Rahul Gandhi secretly goes to Chinese embassy.

    During crucial situations, Rahul Gandhi tries to divide the nation & demoralise armed forces.

    Effects of MoU? pic.twitter.com/Z3WJhpt4Ol

    — Jagat Prakash Nadda (@JPNadda) June 23, 2020 " class="align-text-top noRightClick twitterSection" data=" ">

"ಕಾಂಗ್ರೆಸ್ ಈ ಮೊದಲೇ ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ ಕಾಂಗ್ರೆಸ್, ಮೆಮರಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್ (ಕಾನೂನಾತ್ಮಕವಲ್ಲದ ದ್ವಿಪಕ್ಷೀಯ ಒಪ್ಪಂದ)ಗೆ ಸಹಿ ಹಾಕಿದೆ. ಬಳಿಕ ಚೀನಾಗೆ ಭಾರತದ ಭೂಭಾಗವನ್ನ ನೀಡಿದೆ. ಡೋಕ್ಲಾಮ್ ವಿವಾದದ ವೇಳೆ ರಾಹುಲ್ ಗಾಂಧಿ ರಹಸ್ಯವಾಗಿ ಚೀನಾದ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. ಇದೀಗ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಹೇಳಿಕೆಗಳ ಮೂಲಕ ರಾಷ್ಟ್ರವನ್ನು ವಿಭಜಿಸಲು ಮತ್ತು ಸಶಸ್ತ್ರ ಪಡೆಗಳನ್ನು ನಿರಾಶೆಗೊಳಿಸಲು ಯತ್ನಿಸುತ್ತಿದ್ದಾರೆ " ಎಂದು ನಡ್ಡಾ ಟ್ವೀಟ್​ ಮಾಡಿದ್ದಾರೆ.

2008 ರಲ್ಲಿ ಅಂದಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಹಾಗೂ ಅಂದಿನ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡನಾಗಿದ್ದ ಇಂದಿನ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮೆಮರಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್​ಗೆ ಸಹಿ ಹಾಕಿದ್ದರು.

Last Updated : Jun 23, 2020, 2:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.