ಆರೋಗ್ಯ ಸಚಿವಾಲಯ ಎನ್-95 ಮಾಸ್ಕ್ಗಳ ಅಸಮರ್ಪಕ ಬಳಕೆ ವಿರುದ್ಧ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಉಸಿರಾಟದ ಕವಾಟಗಳನ್ನು ಹೊಂದಿರುವ ಮಾಸ್ಕ್ಗಳು ಕೊರೊನಾ ವೈರಸ್ ತಡೆಯುವಲ್ಲಿ ಯೋಗ್ಯವಲ್ಲ. ಹೀಗಾಗಿ ಮನೆಯಲ್ಲೇ ತಯಾರಿಸಿದ ಫೇಸ್ ಮಾಸ್ಕ್ ಬಳಸುವಂತೆ ಆರೋಗ್ಯ ಸೇವೆಗಳ ಮಹಾನಿರ್ದೇಶಕ ರಾಜೀವ್ ಗರ್ಗ್ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಎನ್-95 ಮಾಸ್ಕ್ ಯಾಕೆ ಬಳಸಬಾರದು!
ಉಸಿರಾಟಕಾರಕ ಕವಾಟಗಳಿರುವ N95 ಮಾಸ್ಕ್ಗಳ ಬಳಕೆಯು ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೈಗೊಂಡ ಕ್ರಮಗಳಿಗೆ ಹಾನಿಕಾರಕವಾಗಿದ್ದು, ಇದು ವೈರಸ್ ಮುಖಗವಸಿನಿಂದ ಹೊರಬರುವುದನ್ನು ತಡೆಯುವುದಿಲ್ಲ.
ಆರಂಭದಲ್ಲಿ ಸರ್ಕಾರದ ಸಲಹೆ ಏನಾಗಿತ್ತು?
ಮುಖ ಮತ್ತು ಬಾಯಿಗೆ ಮನೆಯಲ್ಲೇ ತಯಾರಿಸಿದ ರಕ್ಷಣಾತ್ಮಕ ಕವಚ ಅಥವಾ ಮಾಸ್ಕ್ಅನ್ನು ಬಳಸುವ ಬಗ್ಗೆ ಕೇಂದ್ರ ಸರ್ಕಾರವು ಕಳೆದ ಏಪ್ರಿಲ್ ತಿಂಗಳಲ್ಲಿ ಸಲಹೆ ನೀಡಿತ್ತು. ಅಂತಹ ಮಾಸ್ಕ್ಗಳನ್ನು ಪ್ರತಿದಿನ ತೊಳೆದು ಸ್ವಚ್ಛಗೊಳಿಸಬೇಕು ಎಂದು ಸಲಹೆ ನೀಡಿತ್ತು. ಆದರೆ, ಈ ರೀತಿ ಕೈಯಿಂದ ಮಾಡಿದ ಮುಖಗವಸುಗಳು ಆರೋಗ್ಯ ಕಾರ್ಯಕರ್ತರಿಗೆ ಅಥವಾ ಕೋವಿಡ್ -19 ರೋಗಿಗಳೊಂದಿಗೆ ಕೆಲಸ ಮಾಡುವವರಿಗೆ ಅಥವಾ ಕೋವಿಡ್ ರೋಗಿಗಳ ಬಳಕೆಗೆ ಯೋಗ್ಯವಲ್ಲ. ಕೋವಿಡ್ ರೋಗಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಆರೋಗ್ಯ ಕಾರ್ಯಕರ್ತರು ಪಿಪಿಇ ಕಿಟ್ ಅಥವಾ ನಿರ್ದಿಷ್ಟ ರಕ್ಷಣಾತ್ಮಕ ಸಾಧನಗಳನ್ನು ಧರಿಸಬೇಕಾದ ಅಗತ್ಯವಿರುವುದರಿಂದ ಅವರಿಗೆ ಈ ಮಾಸ್ಕ್ ಕಡ್ಡಾಯವಲ್ಲ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
-95 ಉಸಿರಾಟಕಾರಕ ಎಂದರೆ ಏನು?
ಎನ್ 95 ಉಸಿರಾಟಕಾರಕವು ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ)ವಾಗಿದ್ದು, ಇದನ್ನು ಧರಿಸಿದವರನ್ನು ವಾಯುಗಾಮಿ ಕಣಗಳಿಂದ ಮತ್ತು ಮುಖವನ್ನು ಕಲುಷಿತಗೊಳಿಸದಂತೆ ರಕ್ಷಿಸಲು ಬಳಸಲಾಗುತ್ತದೆ. ಇದನ್ನು ಧರಿಸುವುದರಿಂದ ಸಣ್ಣ ಕಣಗಳ ಏರೋಸಾಲ್‌ಗಳು ಮತ್ತು ದೊಡ್ಡ ಹನಿಗಳು (ತೈಲೇತರ ಏರೋಸಾಲ್‌ಗಳು ಮಾತ್ರ) ಸೇರಿದಂತೆ ಕಲುಷಿತ ವಾಯು ಕಣಗಳಿಂದ ರಕ್ಷಣೆ ಸಿಗುತ್ತದೆ. ಎನ್-95 ಉಸಿರಾಟಕಾರಕಗಳು ಕನಿಷ್ಟ 95% ವಾಯುಗಾಮಿ ಕಣಗಳನ್ನು ಫಿಲ್ಟರ್ ಮಾಡುತ್ತವೆ. ಈ ಉಸಿರಾಟಕಾರಕಗಳನ್ನು ಪ್ರಾಥಮಿಕವಾಗಿ ಆರೋಗ್ಯ ಕಾರ್ಯಕರ್ತರಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಧೂಳಿನ ಕಣಗಳಿಂದ ರಕ್ಷಣೆ ಪಡೆಯುವ ಉದ್ದೇಶದಿಂದಲೂ ಇದನ್ನು ಬಳಸಲಾಗುತ್ತದೆ.
ಎನ್ -95 ಮಾಸ್ಕ್ಗಳ ಕಾರ್ಯ
ಫೇಸ್ ಮಾಸ್ಕ್ಗಳ ಬಳಕೆಯನ್ನು ಹೆಚ್ಚು ಪ್ರೋತ್ಸಾಹಿಸಲಾಗಿದ್ದರೂ, ಕವಾಟವಿರುವ ಎನ್ -95 ಮಾಸ್ಕ್ಗಳು ಹೆಚ್ಚು ಶಾಖವನ್ನು ಸೆಳೆಯುತ್ತವೆ. ಈ ಚಿಕ್ಕ ವೃತ್ತಾಕಾರದ ಕವಾಟವಿರುವ ಯಾವುದೇ N-95 ಮುಖವಾಡವನ್ನು ಫೈಬರ್ ಅಡಕವಾಗಿರುವ ಮೂಲಭೂತವಾಗಿ ಬೆಳೆದ ಪ್ಲಾಸ್ಟಿಕ್ ಡಿಸ್ಕ್ನಿಂದ ತಯಾರಿಸಲಾಗುತ್ತದೆ. ಆರಾಮದಾಯಕ ಉಸಿರಾಟಕ್ಕಾಗಿ ಉಸಿರಾಡುವ ಗಾಳಿಯನ್ನು ಫಿಲ್ಟರ್ ಮಾಡುವುದು ಮತ್ತು ಗಾಳಿಯಲ್ಲಿರುವ ರೋಗಕಾರಕಗಳನ್ನು ಉಸಿರಾಡದಂತೆ ತಡೆಯುವುದು ಈ ಕವಾಟದ ಕಾರ್ಯವಾಗಿದೆ.
ಕವಾಟದ ಮಾಸ್ಕ್ಗಳು ಕೊರೊನಾ ವೈರಸ್ ಹರಡಲು ಹೇಗೆ ಕಾರಣವಾಗುತ್ತವೆ?
ಯಾವುದೇ N-95 ಮಾಸ್ಕ್ನ ಪ್ಲಾಸ್ಟಿಕ್ ಕವಾಟಗಳನ್ನು ನೀವು ಉಸಿರಾಡುವಾಗ ಗಾಳಿಯನ್ನು ಫಿಲ್ಟರ್ ಮಾಡಲು ಬಳಸಲಾಗುತ್ತದೆ. ಅಂದರೆ ಉಸಿರು ಒಳತೆಗೆದುಕೊಳ್ಳುವಾಗ ಶೇ.100ರ ಪ್ರಮಾಣದಲ್ಲೇ ಗಾಳಿ ಫಿಲ್ಟರ್ ಆಗುತ್ತದೆ. ಆದರೆ ನೀವು ಉಸಿರು ಹೊರಬಿಡುವಾಗ ಗಾಳಿಯು ಮತ್ತೆ ಫಿಲ್ಟರ್ ಆಗುವುದಿಲ್ಲ. ಅದು ಅದೇ ರೀತಿ ಹೊರಗೆ ಹೋಗುತ್ತದೆ. ಆದ್ದರಿಂದ, ಒಂದು ವೇಳೆ ಎನ್-95 ಮಾಸ್ಕ್ ಧರಿಸಿದವರು ಲಕ್ಷಣರಹಿತ ಸೋಂಕಿತರಾಗಿದ್ದರೆ, ಅವರು ಫಿಲ್ಟರ್ ಮಾಡದ ಗಾಳಿಯನ್ನು ಹೊರಬಿಡುವ ಮೂಲಕ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವವರಿಗೆ ಬೇಗನೆ ಸೋಂಕು ಹಬ್ಬುತ್ತಾರೆ. ಈ ಕವಾಟಗಳು ಉಸಿರಾಡಿ ಹೊರಹಾಕಿದ ಗಾಳಿಯನ್ನು ಫಿಲ್ಟರ್ ಮಾಡದೆ ಇರುವುದರ ಜೊತೆಗೆ, ಹೊರಹಾಕಲ್ಪಟ್ಟ ಗಾಳಿಯು ಕವಾಟದಿಂದ ತ್ವರಿತವಾಗಿ ಹೊರಗೆ ತಳ್ಳುತ್ತದೆ. ಹೀಗಾಗಿ ಎನ್-95 ಮಾಸ್ಕ್ನಲ್ಲಿರುವುದು ವಾಸ್ತವವಾಗಿ ಏಕವ್ಯಕ್ತಿಪರ ಕವಾಟವಾಗಿದೆ. ಅಂದರೆ ಒಬ್ಬರಿಗೆ ಮಾತ್ರವೇ ಇದರಿಂದ ಅನುಕೂಲ.
ನೀವು ಏನು ಮಾಡಬೇಕು?
ಮುಂಭಾಗದಲ್ಲಿ ಕವಾಟಗಳು ಅಥವಾ ಪ್ಲಾಸ್ಟಿಕ್ ಮುಚ್ಚಳಗಳನ್ನು ಹೊಂದಿರುವ ಮಾಸ್ಕ್ಗಳನ್ನು ಧರಿಸುವುದನ್ನು ತಪ್ಪಿಸಿ. ಏಕೆಂದರೆ ಅದು 'ವನ್-ವೇ ವಾಲ್ವ್' ಆಗಿರಬಹುದು. ಇಂತಹ ಮಾಸ್ಕ್ಗಳು, ಅದನ್ನು ಧರಿಸಿರುವ ವ್ಯಕ್ತಿಯನ್ನು ಮಾತ್ರ ರಕ್ಷಿಸುತ್ತದೆ. ವನ್-ವೇ ಕವಾಟವನ್ನು ಹೊಂದಿರುವ ಈ ಮಾಸ್ಕ್ ನಿಮ್ಮ ಬಾಯಿಯಿಂದ ಹೊರಬರುವ ಏರೋಸಾಲ್‌ಗಳನ್ನು ಫಿಲ್ಟರ್ ಮಾಡುವುದಿಲ್ಲ. ಹೀಗಾಗಿ ಅದು ನಿಮ್ಮ ಸುತ್ತಲಿರುವವರನ್ನು ತಕ್ಷಣವೇ ಅಪಾಯಕ್ಕೆ ದೂಡುತ್ತದೆ.
ಪರಿಹಾರ ಕ್ರಮಗಳು:
- ಎನ್-95 ದ್ವಿಮುಖ ಕವಾಟವನ್ನು ಹೊಂದಿರುವ ಮಾಸ್ಕ್ಗಳು ಉಸಿರು ಒಳತೆಗೆದುಕೊಳ್ಳುವಾಗ ಮತ್ತು ಹೊರಬಿಡುವ ಸಮಯದಲ್ಲಿ ಕಣಗಳನ್ನು ಫಿಲ್ಟರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ವೈರಸ್ಗಳಿಗೆ ಒಡ್ಡಿಕೊಳ್ಳುವ ವ್ಯಾಪ್ತಿ ಜಾಸ್ತಿ ಇರುವ ಆರೋಗ್ಯ ಕಾರ್ಯಕರ್ತರು ಹೆಚ್ಚಾಗಿ ಇದನ್ನು ಬಳಸುತ್ತಾರೆ.
- ಮನೆಯಿಂದ ಹೊರಬರುವಾಗ, ವೈರಸ್‌ನ ಹರಡುವಿಕೆಯನ್ನು ಕಡಿಮೆಗೊಳಿಸಲು ಮಾಸ್ಕ್ ಅಥವಾ ಫೇಸ್ ಕವರ್‌ಗಳನ್ನು ಬಳಸಲು ಆರೋಗ್ಯ ಇಲಾಖೆ ಸೂಚಿಸಿದೆ.
- ಮನೆಯಲ್ಲೇ ತಯಾರಿಸಿದ ಮುಖದ ಕವರ್ ಅಥವಾ ಮಾಸ್ಕ್ಗಳನ್ನು ಮಾತ್ರವೇ ಜನಸಾಮಾನ್ಯರು ಬಳಸಬೇಕು. ಸೋಂಕಿತ ಜನರೊಂದಿಗೆ ನಿಯಮಿತವಾಗಿ ಸಂಪರ್ಕಕ್ಕೆ ಬರುವ ಆರೋಗ್ಯ ಕಾರ್ಯಕರ್ತರು ಸರಿಯಾದ ಪಿಪಿಇ ಉಪಕರಣಗಳನ್ನು ಧರಿಸಬೇಕು.
- ಒಬ್ಬ ವ್ಯಕ್ತಿಯೊಂದಿಗೆ ಕನಿಷ್ಠ ಎರಡು ಮಾಸ್ಕ್ಗಳು ಲಭ್ಯವಿರಬೇಕು. ಒಮ್ಮೆ ಒಂದನ್ನು ತೊಳೆದು ಹಾಕಿದಾಗ ಮತ್ತೊಂದು ಮಾಸ್ಕ್ ಬಳಸಬಹುದು.
- ಮಾಸ್ಕ್ ಅನ್ನು ಸ್ವಚ್ಛವಾದ ಬಟ್ಟೆಯಿಂದ ಮಾಡಬೇಕು. ಮುಖದ ಮೇಲೆ ಹಾಕಿಕೊಂಡಾಗ ಅದು ಮೂಗು ಮತ್ತು ಬಾಯಿಯನ್ನು ಸಂಪೂರ್ಣವಾಗಿ ಮುಚ್ಚುವಂತಿರಬೇಕು.
- ಯಾವುದೇ ಕಾರಣಕ್ಕೂ ಮಾಸ್ಕ್ಗಳನ್ನು ಕುಟುಂಬ ಸದಸ್ಯರು ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳಬಾರದು.