ಮುಂಬೈ/ಆಗ್ರಾ: ಮಹಾಮಾರಿ ಕೊರೊನಾ ವೈರಸ್ನಿಂದ ಇಡೀ ವಿಶ್ವವೇ ತತ್ತರಿಸಿ ಹೋಗಿದ್ದು, ಡೆಡ್ಲಿ ವೈರಾಣುವಿನಿಂದ ಭಾರತದಲ್ಲೂ ಆತಂಕ ಶುರುವಾಗಿದೆ. ಮಾರಕ ಸೋಂಕಿನ ವಿರುದ್ಧ ಹೋರಾಡಲು ಈಗಾಗಲೇ ಅನೇಕ ಕ್ರಮ ಕೈಗೊಳ್ಳಲಾಗಿದೆ.
ಈಗಾಗಲೇ ಶಾಲೆ, ಕಾಲೇಜ್, ಸಿನಿಮಾ ಹಾಲ್,ಮಾಲ್, ಪಬ್,ಪಾರ್ಕ್ ಸೇರಿದಂತೆ ಜನಸಂದಣಿ ಇರುವ ಜಾಗಗಳಲ್ಲಿ ಯಾರು ಸೇರದಂತೆ ಆದೇಶ ಹೊರಡಿಸಲಾಗಿದೆ. ಇದರ ಮಧ್ಯೆ ಇದೀಗ ದೇಶದ ಪ್ರಮುಖ ಪ್ರವಾಸಿ ತಾಣಗಳಾಗಿರುವ ಆಗ್ರಾದ ತಾಜ್ಮಹಲ್ ಹಾಗೂ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಗಳು ಸ್ಥಗಿತಗೊಳ್ಳಲಿವೆ.
ಸಿದ್ಧಿವಿನಾಯಕ ದೇವಸ್ಥಾನ ಇಂದಿನಿಂದ ಬಂದ್ ಮಾಡಲು ಅಲ್ಲಿನ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದ್ದು, ದಿನದಿಂದ ದಿನಕ್ಕೆ ವೈರಸ್ ಏರಿಕೆ ಕಾಣುತ್ತಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಮುಂದಿನ ಆದೇಶ ಹೊರಬೀಳುವವರೆಗೂ ಈ ನಿಯಮ ಜಾರಿಯಲ್ಲಿರುವುದಾಗಿ ತಿಳಿಸಲಾಗಿದ್ದು, ಭಕ್ತರು ಭೇಟಿ ನೀಡದಂತೆ ಸೂಚನೆ ನೀಡಲಾಗಿದೆ.
ಭಾರತದಲ್ಲಿ 114 ಜನರಲ್ಲಿ ಕೊರೊನಾ ಮಹಾಮಾರಿ ಕಾಣಿಸಿಕೊಂಡಿರುವ ಕಾರಣ ಉತ್ತರಪ್ರದೇಶದ ಆಗ್ರಾದಲ್ಲಿರುವ ತಾಜ್ಮಹಲ್ ಕೂಡ ಬಂದ್ ಮಾಡಲಾಗಿದೆ.