ಮುಂಬೈ: ಮುಂಬೈನಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ವಿಮಾನ ಹಾರಾಟ ಸ್ಥಗಿತಗೊಂಡಿದ್ದು, ನಗರದಾದ್ಯಂತ ಟ್ರಾಫಿಕ್ ಜಾಮ್ ಉಂಟಾಗಿದೆ.
-
Mumbai: Water logging and traffic jam in parts of the city following heavy rainfall. #Maharashtra pic.twitter.com/cYkM8AMyAS
— ANI (@ANI) July 8, 2019 " class="align-text-top noRightClick twitterSection" data="
">Mumbai: Water logging and traffic jam in parts of the city following heavy rainfall. #Maharashtra pic.twitter.com/cYkM8AMyAS
— ANI (@ANI) July 8, 2019Mumbai: Water logging and traffic jam in parts of the city following heavy rainfall. #Maharashtra pic.twitter.com/cYkM8AMyAS
— ANI (@ANI) July 8, 2019
ಬೆಳಗ್ಗೆ 9 ಗಂಟೆಯಿಂದ ಕ್ಷಣ ಕ್ಷಣಕ್ಕೂ ವಾತಾವರಣ ಬದಲಾಗುತ್ತಿದೆ. ಹೀಗಾಗಿ ಕೆಲಕಾಲ ವಿಮಾನ ಹಾರಟ ಸ್ಥಗಿತಗೊಳಿಸಲಾಗಿದೆ. ಆದರೆ, ಇಲ್ಲಿಯವರೆಗೆ ಯಾವುದೇ ವಿಮಾನ ಹಾರಾಟ ರದ್ದಾಗಿಲ್ಲ. ಕೆಲವು ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು ಮಳೆಯಿಂದ ವಾಣಿಜ್ಯ ನಗರಿ ಜನರು ತತ್ತರಗೊಂಡಿದ್ದು, ಮುಂಜಾನೆಯಿಂದಲೂ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಂಟೆಗಟ್ಟಲೆ ವಾಹನಗಳು ನಿಂತಲ್ಲೇ ನಿಂತಿದ್ದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ಇಂದು ಮುಂಬೈನ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.