ETV Bharat / bharat

ಮತ್ತಷ್ಟು ಚುರುಕುಗೊಂಡ ಸುಶಾಂತ್ ಸಾವು ಪ್ರಕರಣ: ಬ್ಯಾಂಕ್​ ವಹಿವಾಟಿನ ಬಗ್ಗೆ ತನಿಖೆ

author img

By

Published : Aug 3, 2020, 1:58 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್​ ರಜಪೂತ್ ಅವರ ಸಾವು ಪ್ರಕರಣವನ್ನು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದು, ಬ್ಯಾಂಕ್​ ವಹಿವಾಟಿನ ಬಗ್ಗೆಯೂ ವಿಚಾರಣೆ ನಡೆಸುತ್ತಿದ್ದಾರೆ.

Sushant Singh Rajput
ಸುಶಾಂತ್ ಸಿಂಗ್​ ರಜಪೂತ್

ಮುಂಬೈ: ಬಾಲಿವುಡ್ ನಟ ಸುಶಾಂತ್​ ಸಿಂಗ್​ ರಜಪೂತ್ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಆತ್ಮಹತ್ಯೆಯೋ, ಕೊಲೆಯೋ ಎಂಬ ಅನುಮಾನಗಳ ನಡುವೆ ಕೆಲವೊಂದು ಗೊಂದಲಗಳಿಗೆ ತೆರೆಬಿದ್ದಿದೆ.

ಸುಶಾಂತ್ ಸಿಂಗ್​ ರಜಪೂತ್ ಮೃತಪಡುವ ಒಂದು ದಿನದ ಮೊದಲು ಅಂದ್ರೆ ಜೂನ್ 13ರಂದು ಅವರ ಮನೆಯಲ್ಲಿ ಯಾವುದೇ ಸಮಾರಂಭ ನಡೆದಿಲ್ಲ ಎಂದು ಮುಂಬೈ ಪೊಲೀಸ್ ಕಮೀಷನರ್ ಪರಮ್​ ಬೀರ್ ಸಿಂಗ್​ ಸ್ಪಷ್ಟನೆ ನೀಡಿದ್ದಾರೆ. ಇದಾದ ಒಂದು ದಿನದ ನಂತರ ಸುಶಾಂತ್​ ದೇಹ ಆತ್ಮಹತ್ಯೆ ಮಾಡಿಕೊಂಡ ಮಾದರಿಯಲ್ಲಿ ಅವರ ಕೋಣೆಯಲ್ಲಿ ಪತ್ತೆಯಾಗಿತ್ತು.

ಮುಂಬೈ ಪೊಲೀಸರು ಈ ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸುತ್ತಿದ್ದು, ಸುಶಾಂತ್​ರ ಕುಟುಂಬಸ್ಥರು, ಸ್ನೇಹಿತರು, ವೈದ್ಯರು ಮುಂತಾದವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಇದರ ಜೊತೆಗೆ ಸುಶಾಂತ್​ರ ಬ್ಯಾಂಕ್​ ವಹಿವಾಟಿನ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸುಶಾಂತ್​ ಸಾವು ಪ್ರಕರಣದಲ್ಲಿ ಮಹಾರಾಷ್ಟ್ರದ ಪ್ರಮುಖ ರಾಜಕೀಯ ವ್ಯಕ್ತಿಯ ಹೆಸರೂ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಮುಂಬೈ ಪೊಲೀಸ್ ಕಮೀಷನರ್ ಪರಮ್​ ಬೀರ್ ಸಿಂಗ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.