ETV Bharat / bharat

ಎರಡೂವರೆ ತಿಂಗಳ ನಂತರ ಮುಂಬೈನಲ್ಲಿ ಲೋಕಲ್​ ರೈಲು​​ ಸಂಚಾರ: ಇವರಿಗೆ ಮಾತ್ರ ಸೇವೆ..!

ಮಾರ್ಚ್​ನಿಂದ ಸ್ಥಗಿತಗೊಂಡಿದ್ದ ರೈಲ್ವೆ ಇಂದಿನಿಂದ ಮುಂಬೈನಲ್ಲಿ ಆರಂಭವಾಗಲಿದೆ. ಕೇವಲ ಅಗತ್ಯ ಸೇವೆಗಳು ಹಾಗೂ ಖಾಸಗಿ ವೈದ್ಯಕೀಯ ಸೇವೆಗಳಲ್ಲಿರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

Mumbai local trains
ಮುಂಬೈ ಲೋಕಲ್​ ಟ್ರೇನ್​
author img

By

Published : Jun 15, 2020, 7:04 AM IST

ಮುಂಬೈ: ಅಗತ್ಯ ಸೇವೆಗಳ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಮುಂಬೈನಲ್ಲಿ ಇಂದಿನಿಂದ ಲೋಕಲ್​ ರೈಲುಗಳು ಸಂಚರಿಸಲಿವೆ.

ಮಾರ್ಚ್​ನಿಂದ ರೈಲು ಸೇವೆಯನ್ನು ರದ್ದು ಮಾಡಲಾಗಿದ್ದು, ಸುಮಾರು ಎರಡೂವರೆ ತಿಂಗಳ ನಂತರ ರೈಲು ಸೇವೆ ಆರಂಭವಾಗಲಿದೆ ಎಂದು ಕೇಂದ್ರ ಮತ್ತು ಪಶ್ಚಿಮ ರೈಲ್ವೆ ಹಾಗೂ ಬೃಹನ್​ ಮುಂಬೈ ಮಹಾನಗರ ಪಾಲಿಕೆ ಘೋಷಿಸಿವೆ.

ಪಶ್ಚಿಮ ರೈಲ್ವೆ 73 ಜೋಡಿ ಉಪನಗರ ರೈಲ್ವೆ ಸೇವೆ ಒದಗಿಸಲಿದ್ದು, ಇದರಲ್ಲಿ ರೈಲುಗಳು ವಿಹಾರ್​ ಹಾಗೂ ದಹನು ನಗರಗಳ ಮಾರ್ಗದಲ್ಲಿ ಓಡಾಡಲಿವೆ.

ಕೇಂದ್ರಿಯ ರೈಲ್ವೆ ಸುಮಾರು 200 ರೈಲುಗಳ ಮೂಲಕ ಹಾಗೂ ಪಶ್ಚಿಮ ರೈಲ್ವೆ 120 ಟ್ರೇನ್​ಗಳ ಮೂಲಕ ಕಾರ್ಯಾಚರಣೆ ನಡೆಸಲಿವೆ. ಈ ರೈಲುಗಳು ಸಿಎಂಎಸ್​ಟಿ ಇಂದ ಕಸರಾ, ಕರ್ಜಾತ್​, ಕಲ್ಯಾಣ್​, ಥಾಣೆ ಮಾರ್ಗವಾಗಿ ಸಂಚರಿಸಲಿವೆ.

ಈ ರೈಲುಗಳಲ್ಲಿ ಅಗತ್ಯ ಸೇವೆಗಳ ವಲಯದಲ್ಲಿರುವ 1.25 ಲಕ್ಷ ಮಂದಿ ಪ್ರತಿದಿನ ಸಂಚಾರ ಮಾಡಬಹುದು ಎಂದು ಅಂದಾಜಿಸಲಾಗಿದೆ. ಈ ಉದ್ಯೋಗಿಗಳಲ್ಲಿ 50 ಸಾವಿರ ಸಿಬ್ಬಂದಿ ಪಶ್ಚಿಮ ರೈಲ್ವೆಗೆ ಸೇರಿದ್ದಾರೆ.

ಅಗತ್ಯ ಸೇವೆ ಹೊರತುಪಡಿಸಿ ಇರುವ ಬೇರೆ ಸಾರ್ವಜನಿಕರಿಗೆ ಕಡ್ಡಾಯವಾಗಿ ರೈಲ್ವೆ ಪ್ರಯಾಣ ನಿರ್ಬಂಧ ಮಾಡಲಾಗಿದೆ. ಜೊತೆಗೆ ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್​ ಹಾಗೂ ಟಿಕೆಟ್​​ ಕೌಂಟರ್​​ಗಳಲ್ಲಿ ಟಿಕೆಟ್​ ವಿತರಕರು ಪಿಪಿಇ ಕಿಟ್​ಗಳನ್ನು ಧರಿಸುವುದು ಕಡ್ಡಾಯ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.