ETV Bharat / bharat

ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ 19 ಅಂತಸ್ತಿನ ಹೊಸ ಕಟ್ಟಡವನ್ನೇ ಬಿಟ್ಟುಕೊಟ್ಟ ಹೃದಯವಂತ! - ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು

ಮುಂಬೈ ಮೂಲದ ಬಿಲ್ಡರ್ ಒಬ್ಬರು ಹೊಸದಾಗಿ ನಿರ್ಮಿಸಿದ್ದ 19 ಅಂತಸ್ತಿನ ಕಟ್ಟಡವನ್ನು ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಬೃಹತ್ ಮುಂಬೈ​ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ)ಗೆ ಹಸ್ತಾಂತರಿಸಿದ್ದಾರೆ.

newly built luxury condo into COVID-19 hospital
19 ಅಂತಸ್ತಿನ ನೂತನ ಕಟ್ಟಡವನ್ನೇ ಬಿಟ್ಟುಕೊಟ್ಟ ಹೃದಯವಂತ
author img

By

Published : Jun 21, 2020, 7:19 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದ್ದು, ಮಹಾಮಾರಿ ವಿರುದ್ಧ ಮುಂಬೈ ತನ್ನ ಹೋರಾಟವನ್ನು ಮುಂದುವರೆಸುತ್ತಿದೆ. ಇಂತ ಪರಿಸ್ಥಿತಿಯಲ್ಲಿ ಅನೇಕ ಮಂದಿ ಸರ್ಕಾರಕ್ಕೆ ನೆರವಾಗುತ್ತಿದ್ದಾರೆ.

ಮುಂಬೈ ಮೂಲದ ಬಿಲ್ಡರ್ ಒಬ್ಬರು ಹೊಸದಾಗಿ ನಿರ್ಮಿಸಿದ 19 ಅಂತಸ್ತಿನ ಕಟ್ಟಡವನ್ನು ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ಬೃಹತ್ ಮುಂಬೈ​ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ)ಗೆ ಹಸ್ತಾಂತರಿಸಿದ್ದಾರೆ.

  • Maharashtra: A pvt builder hands over a 19-storey newly constructed, ready-to-move-in building to Municipal Corporation of Greater Mumbai. Mehul Sanghvi, builder says, "We decided willingly after discussing with tenants. It's being used as quarantine centre for #COVID patients." pic.twitter.com/PVhkR8ltfr

    — ANI (@ANI) June 21, 2020 " class="align-text-top noRightClick twitterSection" data=" ">

ಶೀಜಿ ಶರಣ್ ಡೆವಲಪರ್ಸ್‌ನ ಮೆಹುಲ್ ಸಂಘ್ವಿ, 'ಬಾಡಿಗೆದಾರರೊಂದಿಗೆ ಚರ್ಚಿಸಿದ ನಂತರ ನಾವು ಸ್ವಇಚ್ಛೆಯಿಂದ ಇಂತಾ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಕಟ್ಟಡವನ್ನು ಕೋವಿಡ್-19 ರೋಗಿಗಳಿಗಾಗಿ ಚಿಕಿತ್ಸೆ ನೀಡಲು ಬಳಸಲಾಗುತ್ತಿದೆ' ಎಂದು ಹೇಳಿದ್ದಾರೆ.

ಮಲಾಡ್‌ನ ಎಸ್‌ವಿ ರಸ್ತೆಯಲ್ಲಿರುವ ಈ ಕಟ್ಟಡದಲ್ಲಿ 130 ಫ್ಲ್ಯಾಟ್‌ಗಳಿವೆ. ನೂತನವಾಗಿ ನಿರ್ಮಾಣವಾದ ಈ ಕಟ್ಟಡ ಮಾಲೀಕರಿಗೆ ಹಸ್ತಾಂತರಿಸಲು ಸಿದ್ಧವಾಗಿತ್ತು. ಆದರೆ ಕಟ್ಟಡ ಮಾಲೀಕರು ಫ್ಲ್ಯಾಟ್​ ಖರೀದಿಸಿದವರೊಂದಿಗೆ ಚರ್ಚೆ ನಡೆಸಿ ಬೃಹತ್​ ಮುಂಬೈ​ ಮುನ್ಸಿಪಲ್ ಕಾರ್ಪೊರೇಷನ್​ಗೆ ಕಟ್ಟಡ ಹಸ್ತಾಂತರಿಸಿದ್ದಾರೆ.

ಇಲ್ಲಿಯವರೆಗೆ, 300 ರೋಗಿಗಳನ್ನು ಈ ಕಟ್ಟಡಕ್ಕೆ ವರ್ಗಾಯಿಸಲಾಗಿದ್ದು, ಒಂದು ಫ್ಲಾಟ್‌ಗೆ ನಾಲ್ಕು ರೋಗಿಗಳನ್ನು ವರ್ಗಾಯಿಸಲಾಗಿದೆ. ಕಟ್ಟಡದ ಆವರಣದಲ್ಲಿ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.