ಮುಂಬೈ: ಮಹಾಮಾರಿ ಕೊರೊನಾ ವೈರಸ್ ತಂದಿಟ್ಟಿರುವ ಸಂಕಷ್ಟ ಅಷ್ಟಿಷ್ಟಲ್ಲ. ಇದರಿಂದ ಅನೇಕರು ಕೆಲಸ ಕಳೆದುಕೊಂಡಿದ್ದರೆ, ಹಲವರು ಆರ್ಥಿಕ ಸಂಕಷ್ಟಕ್ಕೊಳಗಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಕಾರಣದಿಂದಾಗಿ ಮುಂಬೈನಲ್ಲಿ ಬಾಲಕನೋರ್ವ ಟೀ ಮಾರಾಟ ಮಾಡ್ತಿದ್ದಾನೆ.
14 ವರ್ಷದ ಬಾಲಕ ಸುಭಾನ್ ಕುಟುಂಬಕ್ಕೆ ಸಹಾಯ ಮಾಡುವ ಉದ್ದೇಶದಿಂದ ಟೀ ಮಾರಾಟ ಮಾಡುವ ಕೆಲಸ ಮಾಡ್ತಿದ್ದಾನೆ. ಸುಭಾನ್ ತಾಯಿ ಶಾಲೆಯಲ್ಲಿ ಬಸ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೊರೊನಾದಿಂದಾಗಿ ಶಾಲೆ ಬಂದ್ ಆಗುತ್ತಿದ್ದಂತೆ ಗಳಿಕೆ ನಿಂತು ಹೋಗಿದೆ. ಕುಟುಂಬ ಪೋಷಿಸುವ ಉದ್ದೇಶದಿಂದ ಚಹಾ ಮಾರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾನೆ.
12 ವರ್ಷಗಳ ಹಿಂದೆ ನನ್ನ ತಂದೆ ಸಾವನ್ನಪ್ಪಿದ್ದಾರೆ. ಸದ್ಯ ಸಹೋದರಿಯರು ಆನ್ಲೈನ್ ತರಗತಿಗಳ ಮೂಲಕ ಶಾಲೆ ಅಧ್ಯಯನ ಮಾಡುತ್ತಿದ್ದಾರೆ. ಶಾಲೆ ಪುನಾರಂಭಗೊಂಡ ಬಳಿಕ ನಾನು ಈ ಕೆಲಸ ನಿಲ್ಲಿಸುತ್ತೇನೆ ಎಂದು ಹೇಳಿದ್ದಾನೆ.
ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ. ಭೆಂಡಿ ಬಜಾರ್ನ ಅಂಗಡಿಯಲ್ಲಿ ಚಹಾ ತಯಾರಿಸುತ್ತೇನೆ. ಅದನ್ನ ನಾಗಪದ, ಭೆಂಡಿ ಬಜಾರ್ ಮತ್ತು ಇತರ ಪ್ರದೇಶಗಳಲ್ಲಿ ಮಾರಾಟ ಮಾಡುತ್ತೆನೆ. ನನಗೆ ಯಾವುದೇ ಅಂಗಡಿಗಳಿಲ್ಲ. ದಿನಕ್ಕೆ 300-400 ರೂ ಗಳಿಕೆ ಮಾಡಿ, ತಾಯಿ ಕೈಗೆ ನೀಡುತ್ತಿದ್ದೇನೆ ಎಂದಿದ್ದಾನೆ.