ಅಂಬಾಲಾ (ಹರಿಯಾಣ): ಫ್ರಾನ್ಸ್ನಿಂದ ಭಾರತಕ್ಕೆ ಬರಲಿರುವ ರಫೇಲ್ ಜೆಟ್ಗಳು ಅಂಬಾಲಾ ವಾಯುನೆಲೆಗೆ ತಲುಪುವ ಬೆನ್ನಲ್ಲೇ ರಕ್ಷಣಾ ಇಲಾಖೆಯ ಪರಿಣಿತರೊಬ್ಬರು ''ಬಹುಕೌಶಲ್ಯ ರಫೇಲ್ ಜೆಟ್ ಸೇನೆಗೆ ಸೇರ್ಪಡೆ ಮಾಡಿಕೊಳ್ಳುವುದರಿಂದ ಭಾರತೀಯ ವಾಯುಸೇನೆ ಪಾಕ್ ಹಾಗೂ ಚೀನಾದ ಸೇನೆಗೆ ಸೆಡ್ಡು ಹೊಡಯಲಿದೆ'' ಎಂದು ಬಣ್ಣಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ವಾಯುಪಡೆಯ ನಿವೃತ್ತ ಸಾರ್ಜೆಂಟ್ ಖುಷ್ಬೀರ್ ಸಿಂಗ್ ದತ್ ಎಳೆ ಎಳೆಯಾಗಿ ರಫೇಲ್ನ ಉಪಯೋಗದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ನಮಗೆ ಸದ್ಯಕ್ಕೆ 43 ಏರ್ ಸ್ಕ್ವ್ಯಾಡ್ರನ್ ದಾಳಿಗೆ ಬೇಕು. ಆದರೆ ನಮ್ಮ ಬಳಿ 34 ಏರ್ ಸ್ಕ್ವ್ಯಾಡ್ರನ್ಗಳು ಮಾತ್ರ ಇದ್ದು, ಮುಂದಿನ ಕೆಲವು ವರ್ಷಗಳಲ್ಲಿ 8 ಏರ್ ಸ್ಕ್ವ್ಯಾಡ್ರನ್ಗಳು ವಾಯುಸೇನೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಚೀನಾ ಹಾಗೂ ಪಾಕಿಸ್ತಾನ ಭಾರತದ ಮೇಲೆ ಕಣ್ಣಿಟ್ಟಿದ್ದು, ರಫೇಲ್ ಜೆಟ್ ಫೈಟರ್ಗಳು ವಾಯುಸೇನೆಗೆ ಸೇರ್ಪಡೆ ಆಗಿದ್ದರಿಂದ ನಮ್ಮ ಶಕ್ತಿ ಹೆಚ್ಚಿದೆ. ಹೀಗಾಗಿ ಆ ಎರಡು ರಾಷ್ಟ್ರಗಳು ಆತಂಕದಲ್ಲಿವೆ ಎಂದಿದ್ದಾರೆ.
ಸುಮಾರು 4 ವರ್ಷಗಳ ಹಿಂದೆ ಭಾರತ ಫ್ರಾನ್ಸ್ನೊಡನೆ 59 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ 36 ರಫೇಲ್ ಜೆಟ್ ಫೈಟರ್ಗಳನ್ನು ಫ್ರಾನ್ಸ್ ಪೂರೈಸಬೇಕಿತ್ತು. ಈಗ ಮೊದಲ ಹಂತವಾಗಿ ಐದು ಜೆಟ್ ಫೈಟರ್ಗಳನ್ನು ಹಸ್ತಾಂತರ ಮಾಡಿದೆ.
ಅಂಬಾಲಾದಲ್ಲಿ ರಫೇಲ್ಗಳ ಸೇರ್ಪಡೆ ಏಕೆ..?
ಅಂಬಾಲಾ ವಾಯುನೆಲೆ ಅತ್ಯಂತ ಮುಂದುವರೆದ ವಾಯುನೆಲೆಯಾಗಿದೆ. ಸುಮಾರು 150 ರಿಂದ 400 ಕಿಲೋಮೀಟರ್ಗಳ ಅಂತರದಲ್ಲಿ ಚೀನಾ ಹಾಗೂ ಪಾಕಿಸ್ತಾನದ ಗಡಿಯನ್ನು ಒಳಗೊಳ್ಳುತ್ತದೆ.
ಇದೇ ಕಾರಣದಿಂದ ರಫೇಲ್ ಜೆಟ್ಗಳನ್ನು ಇದೇ ವಾಯುನೆಲೆಯಲ್ಲಿ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ತಯಾರಿ ನಡೆಸಲಾಗಿದೆ ಎಂದು ನಿವೃತ್ತ ಸಾರ್ಜೆಂಟ್ ಖುಷ್ಬೀರ್ ಸಿಂಗ್ ವಿವರಿಸಿದ್ದಾರೆ.