ETV Bharat / bharat

25 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಪಿಂಚಣಿ ನೀಡಲು ಎಂಪಿ ಸರ್ಕಾರದ ಚಿಂತನೆ - 25 ಮೇಲ್ಪಟ್ಟ ಅವಿವಾಹಿತ ಹೆಣ್ಣು ಮಕ್ಕಳಗೆ ಪಿಂಚಣಿ ವ್ಯವಸ್ಥೆ

ಈ ಮೊದಲು ಮಧ್ಯಪ್ರದೇಶ ಸರ್ಕಾರ 18 ವರ್ಷದ ಪುತ್ರ ಮತ್ತು 25 ವರ್ಷದೊಳಗಿನ ಪುತ್ರಿಯರಿಗೆ ಮಾತ್ರ ಕುಟುಂಬ ಪಿಂಚಣಿ ನೀಡುತ್ತಿತ್ತು. ಇದೀಗ 25 ವರ್ಷ ಮೇಲ್ಪಟ್ಟ ಅವಿವಾಹಿತ ಹೆಣ್ಣು ಮಕ್ಕಳಿಗೂ ಪಿಂಚಣಿ ಕೊಡಲು ನಿರ್ಧರಿಸಿದೆ.

ಎಂಪಿ ಸರ್ಕಾರ ಚಿಂತನೆ
MP Govt
author img

By

Published : Feb 8, 2021, 2:40 PM IST

ಭೋಪಾಲ್ (ಮಧ್ಯಪ್ರದೇಶ): ಸರ್ಕಾರಿ ನೌಕರ ಪೋಷಕರ ಮರಣದ ನಂತರ ಅವರ ಅವಿವಾಹಿತ ಮಗಳಿಗೆ ಕುಟುಂಬ ಪಿಂಚಣಿ ನೀಡಲು ರಾಜ್ಯ ಸರ್ಕಾರ ತಯಾರಿ ನಡೆಸುತ್ತಿದೆ.

ಇಲ್ಲಿಯವರೆಗೆ, ಕುಟುಂಬ ಪಿಂಚಣಿಯನ್ನು 18 ವರ್ಷದ ಪುತ್ರ ಮತ್ತು 25 ವರ್ಷದೊಳಗಿನ ಪುತ್ರಿಯರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ, ಕೇಂದ್ರ ಸರ್ಕಾರ 25 ವರ್ಷ ಮೇಲ್ಪಟ್ಟ ಅವಿವಾಹಿತ ಹೆಣ್ಣು ಮಕ್ಕಳಿಗೂ ಪಿಂಚಣಿ ಕೊಡಲು ನಿರ್ಧರಿಸಿದೆ. ಈ ಪ್ರಸ್ತಾಪಕ್ಕೆ ಹಣಕಾಸು ಇಲಾಖೆ ಈಗಾಗಲೇ ಸಮ್ಮತಿಸಿದ್ದು, ಮುಖ್ಯಮಂತ್ರಿಗಳ ಸಚಿವಾಲಯವು ಅದರ ಪರೀಕ್ಷೆಗೆ ಸಾಮಾನ್ಯ ಆಡಳಿತ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದೆ. ಕೇಂದ್ರ ಸರ್ಕಾರ ಏಪ್ರಿಲ್ 28, 2011 ರಂದು ಪಿಂಚಣಿ ನಿಯಮಗಳನ್ನು ಪರಿಷ್ಕರಿಸಿದೆ.

ಈ ಪ್ರಸ್ತಾವನೆಯ ಮೇರೆಗೆ 2020 ರ ಮಾರ್ಚ್ 13 ರಂದು ನಡೆದ ಕುಟುಂಬ ಪಿಂಚಣಿ ಕಲ್ಯಾಣ ಮಂಡಳಿಯ ಸಭೆಯಲ್ಲಿ ಹಣಕಾಸು ಇಲಾಖೆ ತನ್ನ ತಾತ್ವಿಕ ಒಪ್ಪಿಗೆ ನೀಡಿದೆ. ಹೆಣ್ಣುಮಕ್ಕಳಿಗೆ ಕುಟುಂಬ ಪಿಂಚಣಿಯ ಲಾಭ ಪಡೆಯಲು ಮುಖ್ಯಮಂತ್ರಿಗಳ ಸಚಿವಾಲಯವು ಸಾಮಾನ್ಯ ಆಡಳಿತ ಇಲಾಖೆಗೆ ಕಳುಹಿಸಿದೆ.

ಮದುವೆಯ ಮೇಲೆ ಪಿಂಚಣಿ ಸ್ಥಗಿತ:

ಪ್ರಸ್ತಾವನೆಯಲ್ಲಿ ಅವಿವಾಹಿತ ಹೆಣ್ಣುಮಕ್ಕಳಿಗೆ 25 ವರ್ಷ ವಯಸ್ಸಿನ ಮಿತಿ ರದ್ದುಪಡಿಸಲಾಗಿದ್ದು, ಮದುವೆಯಾಗುವವರೆಗೂ ಕುಟುಂಬ ಪಿಂಚಣಿಯನ್ನು ಪಡೆಯಬಹುದಾಗಿದೆ. ಒಂದು ವೇಳೆ ಪಿಂಚಣಿ ಪಡೆಯುತ್ತಿರುವ ಹೆಣ್ಣುಮಕ್ಕಳು ಮದುವೆಯಾದರೆ ಅವರ ಪಿಂಚಣಿ ರದ್ದಾಗುತ್ತದೆ ಎಂಬ ಷರತ್ತನ್ನು ವಿಧಿಸಲಾಗಿದೆ. ಅಂಗವಿಕಲ ಗಂಡು ಮಕ್ಕಳು ಮತ್ತು ಹೆಣ್ಣುಮಕ್ಕಳಿಗೆ ಕುಟುಂಬ ಪಿಂಚಣಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ.

ಅವಲಂಬಿತರಿಗೆ ಕೇವಲ 30 ಪ್ರತಿಶತದಷ್ಟು ಪಿಂಚಣಿ :

ಅವಲಂಬಿತರು ಪಿಂಚಣಿಯ ಶೇಕಡಾ 30 ರಷ್ಟು ಮಾತ್ರ ಕುಟುಂಬ ಪಿಂಚಣಿಯಾಗಿ ಪಡೆಯುತ್ತಾರೆ. ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ನಂತರ ನೌಕರನಿಗೆ ಮೂಲ ವೇತನದ ಶೇ 50 ರಷ್ಟು ಪಿಂಚಣಿಯಾಗಿ ನೀಡಲಾಗುತ್ತದೆ ಮತ್ತು ನೌಕರನ ಮರಣದ ನಂತರ ಶೇ 30ರಷ್ಟು ಪಿಂಚಣಿಯನ್ನು ಹೆಂಡತಿಗೆ ನೀಡಲಾಗುತ್ತದೆ. ರಾಜ್ಯ ಸರ್ಕಾರ ಕನಿಷ್ಠ ಪಿಂಚಣಿ ಮೊತ್ತವನ್ನು 7,550 ರೂ. ಮತ್ತು ಕೇಂದ್ರ ಸರ್ಕಾರ 9,000 ರೂ. ಕನಿಷ್ಠ ಪಿಂಚಣಿ ನಿಗದಿಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.