ಭೋಪಾಲ್ (ಮಧ್ಯಪ್ರದೇಶ): ಕೋವಿಡ್ 19 ಲಸಿಕೆ ಪ್ರಾಯೋಗಿಕ ಪರೀಕ್ಷೆಗೆ ಒಳಗಾಗಲು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಸ್ವಯಂಪ್ರೇರಣೆಯಿಂದ ಸಜ್ಜಾಗಿದ್ದಾರೆ.
"ನಾನು ಕೋವಿಡ್-19 ಲಸಿಕೆ ಪ್ರಯೋಗಕ್ಕೆ ಸ್ವಯಂ ಸೇವಕನಾಗಲು ಸಿದ್ಧನಿದ್ದೇನೆ. ಈ ಬಗ್ಗೆ ವೈದ್ಯರ ಜೊತೆ ಮಾತನಾಡುತ್ತೇನೆ. ಅಲ್ಲದೇ ಇಂತಹ ಕಾರ್ಯಗಳಿಗೆ ಮೊದಲು ನಾವು ಮುಂದೆ ಬಂದರೆ ನಮ್ಮನ್ನು ನೋಡಿ ಜನರು ಸಹ ಸ್ವಯಂ ಸೇವಕರಾಗಲು ಮುಂದೆ ಬರುತ್ತಾರೆ" ಎಂದು ಮಿಶ್ರಾ ಹೇಳಿದ್ದಾರೆ.
ಇದೇ ವೇಳೆ ರೈತರ ಪ್ರತಿಭಟನೆ ಕುರಿತು ಮಾತನಾಡಿದ ಮಿಶ್ರಾ, ರೈತರನ್ನು ಪ್ರಚೋದಿಸುವ ಕಾರ್ಯ ನಡೆಯುತ್ತಿದ್ದು, ಇದು ಯಶಸ್ವಿಯಾಗುವುದಿಲ್ಲ. ಸರ್ಕಾರ ರೈತರೊಂದಿಗೆ ಶಾಂತಿಯುತವಾಗಿ ಮಾತುಕತೆ ನಡೆಸಿ ಅವರ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಕಂಡುಕೊಳ್ಳಲಿದೆ ಎಂದರು.
ಇದನ್ನೂ ಓದಿ...ಪಟ್ಟು ಬಿಡದ ರೈತರು: ಕೃಷಿ ಮಸೂದೆ ಹಿಂಪಡೆಯುವವರೆಗೂ ಹೋರಾಟ ಎಂದ ಅನ್ನದಾತರು