ETV Bharat / bharat

ಪ್ರಮುಖ ರಾಜ್ಯಗಳಲ್ಲಿ 'ಬಿಜೆಪಿ' ಕಿಲಕಿಲ, 'ಕೈ' ಮಂಕು; ಕುಗ್ಗದ ನಮೋ ಹವಾ! - BJP candidates in Gujarat

10 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಮುನ್ನಡೆ ಪಡೆದುಕೊಂಡಿದ್ದು, ಪ್ರಮುಖವಾಗಿ ಮಧ್ಯಪ್ರದೇಶ ಹಾಗೂ ಗುಜರಾತ್​ನಲ್ಲಿ ಉತ್ತಮ ಸಾಧನೆ ಮಾಡುವುದು ಬಹುತೇಕ ಖಚಿತವಾಗಿದೆ.

modi wave
modi wave
author img

By

Published : Nov 10, 2020, 1:41 PM IST

ಹೈದರಾಬಾದ್​: ಬಿಹಾರದ ಚುನಾವಣೆ ಜತೆಗೆ ಇಂದು 10 ರಾಜ್ಯಗಳ ಉಪಚುನಾವಣೆ ಫಲಿತಾಂಶ ಬಹಿರಂಗಗೊಳ್ಳುತ್ತಿದ್ದು, ಪ್ರಮುಖ ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಗೆಲುವಿನತ್ತ ದಾಪುಗಾಲು ಹಾಕಿದೆ.

ಬಿಹಾರ ವಿಧಾನಸಭೆ ಫೈಟ್​: ಸ್ಪಷ್ಟ ಬಹುಮತದತ್ತ ಎನ್​ಡಿಎ ದಾಪುಗಾಲು

ಬಿಹಾರದಲ್ಲೂ ಎನ್​ಡಿಎ ಈಗಾಗಲೇ ಸ್ಪಷ್ಟ ಬಹುಮತದತ್ತ ದಾಪುಗಾಲು ಇಟ್ಟಿದ್ದು, ಇದರ ಜತೆ ಮಧ್ಯಪ್ರದೇಶ, ಗುಜರಾತ್​, ಉತ್ತರ ಪ್ರದೇಶ, ಮಣಿಪುರ ಹಾಗೂ ಕರ್ನಾಟಕದಲ್ಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡು ಗೆಲುವು ದಾಖಲು ಮಾಡುವ ಮುನ್ಸೂಚನೆ ನೀಡಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಹವಾ ಕುಗ್ಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಗುಜರಾತ್​ನಲ್ಲಿ ಕ್ಲೀನ್​​ ಸ್ವೀಪ್​ನತ್ತ ಬಿಜೆಪಿ...8 ಕ್ಷೇತ್ರಗಳಲ್ಲೂ ಮುನ್ನಡೆ!

ಗುಜರಾತ್​ನಲ್ಲಿ ಕ್ಲೀನ್​ ಸ್ವೀಪ್​!?

ಗುಜರಾತ್​ನಲ್ಲಿನ 8 ಕ್ಷೇತ್ರಗಳ ಪೈಕಿ ಎಲ್ಲ ಕ್ಷೇತ್ರಗಳಲ್ಲೂ ಭಾರತೀಯ ಜತನಾ ಪಾರ್ಟಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಹೀಗಾಗಿ ತವರು ನಾಡಿನಲ್ಲಿ ಮೋದಿ ಹವಾ ಮುಂದುವರೆದಿದೆ.

ಮಧ್ಯಪ್ರದೇಶದಲ್ಲೂ ಬಿಜೆಪಿ ಕಿಲಕಿಲ!

28 ಕ್ಷೇತ್ರಗಳ ಮಧ್ಯಪ್ರದೇಶ ವಿಧಾಸಭಾ ಬೈ ಎಲೆಕ್ಷನ್​ನಲ್ಲಿ ಭಾರತೀಯ ಜನತಾ ಪಾರ್ಟಿ 17 ಕ್ಷೇತ್ರಗಳಲ್ಲಿ ಮುನ್ನಡೆಯಲಿದೆ. ಈ ಮೂಲಕ ಶಿವರಾಜ್​ ಸಿಂಗ್​ ಚೌಹಾಣ್​ ನೇತೃತ್ವದ ಸರ್ಕಾರ ಸೇಫ್​ ಆಗಿದೆ. ಉತ್ತರ ಪ್ರದೇಶದ 7 ಕ್ಷೇತ್ರಗಳ ಪೈಕಿ 5ರಲ್ಲಿ ಬಿಜೆಪಿ ಮುನ್ನಡೆಯಲಿದೆ.

ಉಳಿದಂತೆ ಕರ್ನಾಟಕದಲ್ಲಿ ಎರಡು ಕ್ಷೇತ್ರದಲ್ಲಿ, ತೆಲಂಗಾಣ 1 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ. 58 ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಾರ್ಟಿ 30ಕ್ಕೂ ಅಧಿಕ ಸ್ಥಾನಗಳಲ್ಲಿ ಜಯ ಸಾಧಿಸುವ ಸಾಧ್ಯತೆ ದಟ್ಟವಾಗಿದೆ. ಇನ್ನು ಮಣಿಪುರದಲ್ಲಿನ 5 ಕ್ಷೇತ್ರಗಳ ಪೈಕಿ ಈಗಾಗಲೇ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.