ETV Bharat / bharat

ಮುಂಗೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ವಿಡಿಯೋ ಶೇರ್ ಮಾಡಿದ ಯುವತಿ - ಕ್ರೈಂ ಸುದ್ದಿ

ಯುವತಿ ನೀಡಿದ ದೂರಿನ ಆಧಾರದ ಮೇರೆಗೆ 12 ಜನರನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ ಎಂದು ಭೋಪಾಲ್​ ನಗರ ಡಿಐಜಿ ಇರ್ಷಾದ್ ವಲಿ ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ.

girl claims apathy, slits wrist, uploads video on Twitter

author img

By

Published : Nov 1, 2020, 11:51 PM IST

Updated : Nov 2, 2020, 6:58 AM IST

ಭೋಪಾಲ್: ತನ್ನ ತಂದೆಯ ಕೊಲೆ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಯುವತಿಯೋರ್ವಳು ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಅಲ್ಲದೆ ಕೈ ಕುಯ್ದುಕೊಳ್ಳುವ ವಿಡಿಯೋವನ್ನು ಟ್ವಿಟರ್​ಗೂ ಅಪ್ಲೋಡ್ ಮಾಡಿದ್ದಾಳೆ. ಮಧ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಯುವತಿಯ ಆರೋಪಗಳನ್ನು ಪೊಲೀಸರು ತಳ್ಳಿಹಾಕಿದ್ದು, ಏಪ್ರಿಲ್​ನಲ್ಲಿ ಯುವತಿಯು ತನ್ನ ತಂದೆಯನ್ನು ಎಂಟು ಜನರು ಹೊಡೆದು ಕೊಂದಿದ್ದಾರೆ ಎಂದು ದೂರು ದಾಖಲಿಸಿದ ಮೂರೇ ದಿನಗಳಲ್ಲಿ 12 ಜನರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಟ್ವಿಟರ್​ನಲ್ಲಿ ಅಪ್ಲೋಡ್​ ಮಾಡಿರುವ ವಿಡಿಯೋದೊಂದಿಗೆ ನೋಟ್ ಬರೆದಿರುವ ಯುವತಿ, ಕಳೆದ ಆರು ತಿಂಗಳಿನಿಂದ ನಾವು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. ಆದರೆ ನಾವು ಬಡವರಾಗಿರುವುದರಿಂದ ನಮಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾಳೆ.

ಯುವತಿ ನೀಡಿದ ದೂರಿನ ಆಧಾರದ ಮೇರೆಗೆ 12 ಜನರನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ ಎಂದು ಭೋಪಾಲ್​ ನಗರ ಡಿಐಜಿ ಇರ್ಷಾದ್ ವಲಿ ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ಸದ್ಯ ಗಾಯಾಳು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಹೇಳಿಕೆ ಪಡೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಗೋವಿಂದಪುರ ಪೊಲೀಸ್​ ಸ್ಟೇಷನ್ ಠಾಣಾಧಿಕಾರಿ ಅಶೋಕ ಸಿಂಗ್ ಪರಿಹಾರ ಮಾಹಿತಿ ನೀಡಿದ್ದಾರೆ.

Last Updated : Nov 2, 2020, 6:58 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.