ETV Bharat / bharat

ಮೂವರು ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಪ್ರಿಯಕರನ ಜೊತೆ ಸರಸ, ಮಹಿಳೆಗೆ 18 ವರ್ಷ ಜೈಲೂಟ! - ಮೂವರು ಮಕ್ಕಳು ಕೊಣೆ

ಹೊಸದಾಗಿ ಪರಿಚಯವಾದ ಲವರ್​ ಜತೆ ರಸ ಕ್ಷಣಗಳನ್ನು ಸವಿಯುವ ಉದ್ದೇಶದಿಂದ ಮೂವರು ಮಕ್ಕಳ ತಾಯಿ ಮಕ್ಕಳನ್ನು ರೂಂನಲ್ಲಿ ಕೂಡಿ ಹಾಕಿ ಹೊಟೇಲ್‌ಗೆ ಹೋಗಿದ್ದಳು.

ಸಾಂದರ್ಭಿಕ ಚಿತ್ರ
author img

By

Published : Nov 16, 2019, 1:21 PM IST

Updated : Nov 16, 2019, 1:48 PM IST

ಇಂಗ್ಲೆಂಡ್​: ಮನೆಯಲ್ಲಿ ಗಂಡ ಹಾಗೂ ಮೂವರು ಮುದ್ದಾದ ಮಕ್ಕಳಿದ್ದರೂ ಹೊಸ ಗೆಳೆಯನೊಂದಿಗೆ ರಾತ್ರಿ ಕಳೆಯಲು ಮಹಿಳೆಯೋರ್ವಳು ಹೊಟೇಲ್​ಗೆ ತೆರಳಿರುವ ಘಟನೆ ಲಂಡನ್​​ನಲ್ಲಿ ನಡೆದಿದೆ.

ತನ್ನ ಮೂವರು ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿರುವ 32 ವರ್ಷದ ಮಹಿಳೆ ಗೆಳೆಯನೊಂದಿಗೆ ಹೊಟೇಲ್​ಗೆ ತೆರಳಿದ್ದಾಳೆ. ಮುಗ್ಧ ಮಕ್ಕಳ ಬಗ್ಗೆ ಅಮಾನವೀಯವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಅಲ್ಲಿನ ನ್ಯಾಯಾಲಯ ಮಹಿಳೆಗೆ 18 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇಂಗ್ಲೆಂಡ್​​ನ ಲ್ಯಾಂಕಶೇರ್‌ನಲ್ಲಿ ಈ ಘಟನೆ ನಡೆದಿದೆ.

ಮೂವರು ಮಕ್ಕಳನ್ನು ಒಂದೇ ಕೋಣೆಯಲ್ಲಿ ಕೂಡಿ ಹಾಕಿರುವ ಮಹಿಳೆ ಆಹಾರವನ್ನೂ ನೀಡದೆ ಉಪವಾಸ ಇರಿಸಿದ್ದಳು. ಈ ವೇಳೆ ಗಂಡ ಬೇರೆಡೆ ಕೆಲಸಕ್ಕೆ ಹೋಗಿದ್ದು ಅದರ ಸದುಪಯೋಗ ಪಡೆದುಕೊಂಡ ಹೆಂಡತಿ ಈ ರೀತಿ ದುರ್ವರ್ತನೆ ತೋರಿದ್ದಾಳೆ. ಈ ಘಟನೆ ಗಂಡನಿಗೆ ಗೊತ್ತಾಗುತ್ತಿದ್ದಂತೆ ಆತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಆಕೆಯನ್ನು ಬಂಧಿಸಿ ಶಿಕ್ಷೆ ವಿಧಿಸಲಾಗಿದೆ.

Intro:Body:Conclusion:
Last Updated : Nov 16, 2019, 1:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.