ನಲ್ಗೊಂಡ (ತೆಲಂಗಾಣ): ಆರ್ಥಿಕ ಬಿಕ್ಕಟ್ಟಿನಿಂದ ಪೋಷಿಸಲಾಗದೆ ಹೆತ್ತ ತಾಯಿಯನ್ನೇ ಮಗ ಸುಟ್ಟು ಕೊಂದಿರುವ ಘಟನೆ ನಲ್ಗೊಂಡ ವಲಯದ ನರ್ಸಿಂಗ್ ಭಟ್ಲದಲ್ಲಿ ಬುಧವಾರ ನಡೆದಿದೆ. ಘಟನೆ ನಂತರ ಆತ ಪರಾರಿಯಾಗಿದ್ದಾನೆ.
ಲಿಂಗಸ್ವಾಮಿ ತಾಯಿಯನ್ನು ಕೊಂದ ಮಗ. ಶಾಂತಮ್ಮ (65) ಮೃತ ಮಹಿಳೆ. ಲಾಕ್‌ಡೌನ್‌ನಿಂದಾಗಿ ಗ್ರಾಮದ ಲಿಂಗಸ್ವಾಮಿ ಉದ್ಯೋಗ ಕಳೆದುಕೊಂಡು ಆರ್ಥಿಕ ತೊಂದರೆಗಳಿಂದ ಅಮ್ಮನಿಗೆ ಊಟ ಹಾಕಲೂ ಸಾಧ್ಯವಾಗದ ಪರಿಸ್ಥಿತಿ ಎದುರಾಯಿತು. ಹೀಗಾಗಿ ಬುಧವಾರ ಮುಂಜಾನೆ ತಾಯಿ ಮಲಗಿದ್ದಾಗ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ತಲುಪಿರುವ ಪೊಲೀಸರು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಆರ್ಥಿಕ ತೊಂದರೆಗಳಿಂದಾಗಿ ಲಿಂಗಸ್ವಾಮಿ ತಾಯಿಯನ್ನು ಕೊಂದಿದ್ದಾನೋ? ಅಥವಾ ಆಸ್ತಿಗಾಗಿ ಹತ್ಯೆ ಮಾಡಿದ್ದಾನೋ? ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಲಿದೆ.