ಪಂಚಕುಲ/ಮಂಡ್ಸಾರ್: ರಾಜಸ್ಥಾನದ ಬಳಿಕ ಇದೀಗ ಹರಿಯಾಣ ಹಾಗೂ ಮಧ್ಯಪ್ರದೇಶದಲ್ಲೂ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ.
ಮಧ್ಯಪ್ರದೇಶದಲ್ಲಿ ಕಳೆದೊಂದು ವಾರದಲ್ಲಿ 200ಕ್ಕೂ ಹೆಚ್ಚು ಕಾಗೆಗಳು ಮೃತಪಟ್ಟಿದ್ದರೆ, ಹರಿಯಾಣದಲ್ಲಿ ಸುಮಾರು 1,000 ಕೋಳಿಗಳು ಹಕ್ಕಿ ಜ್ವರಕ್ಕೆ ಬಲಿಯಾಗಿವೆ. ಸತ್ತ ಕಾಗೆ ಹಾಗೂ ಕೋಳಿಗಳ ಮಾದರಿಗಳನ್ನು ತನಿಖೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ.
ಮಧ್ಯಪ್ರದೇಶದ ಮಂಡ್ಸಾರ್, ಇಂದೋರ್, ಕೋಟಾ ಸೇರಿದಂತೆ ಅನೇಕ ನಗರಗಳಲ್ಲಿ ಕಾಗೆಗಳು ಇದ್ದಕ್ಕಿದ್ದಂತೆ ಸತ್ತು ಬೀಳುತ್ತಿವೆ. ಕೋಟಾದಲ್ಲಿ 15 ಪಾರಿವಾಳಗಳೂ ಪ್ರಾಣತೆತ್ತಿವೆ. ಹರಿಯಾಣದ ಪಂಚಕುಲದಲ್ಲಿ ಸಾವಿರಾರು ಕೋಳಿಗಳು ಹಠಾತ್ ಸಾವನ್ನಪ್ಪಿದ್ದು, ಕೋಳಿ ಸಾಕಾಣಿಕೆ ಕೇಂದ್ರಗಳು ಮುನ್ನೆಚ್ಚರಿಕೆ ವಹಿಸಬೇಕೆಂದು ಪಶುಸಂಗೋಪನಾ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 16,505 ಹೊಸ ಕೊರೊನಾ ಪ್ರಕರಣ
ಹಕ್ಕಿ ಜ್ವರ ಕಂಡುಬಂದ ಸುತ್ತಮುತ್ತಲಿನ ಪ್ರದೇಶಗಳ ಜನರಲ್ಲಿ ಶೀತ, ಕೆಮ್ಮು, ಜ್ವರದಂತಹ ಅನಾರೋಗ್ಯ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ವಹಿಸದೇ ವೈದ್ಯರನ್ನು ಸಂಪರ್ಕಿಸುವಂತೆ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.