ಅಹಮದಾಬಾದ್: ವಡೋದರಾ ಸೇರಿದಂತೆ ಗುಜರಾತ್ನ ಹಲವು ನಗರಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರಹಾಹ ಉಂಟಾಗಿ ಬೀದಿಗಳೆಲ್ಲ ನದಿಗಳಂತಾಗಿವೆ.
ಪ್ರವಾಹದ ನೀರಿನ ಜತೆಗೆ ನಗರಕ್ಕೆ ಮೊಸಳೆಗಳು ನುಗ್ಗುತ್ತಿವೆ. ನಗರದ ಬೀದಿಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ಮೊಸಳೆಗಳು ಜನರಲ್ಲಿ ಆತಂಕ ಸೃಷ್ಟಿಸಿವೆ. ಈ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೊಸಳೆಗಳನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಗಳಿಗೆ ಬಿಡುವ ಎಲ್ಲ ಪ್ರಯತ್ನಗಳನ್ನು ಪ್ರಾಣಿ ರಕ್ಷಣಾ ದಳ ಮಾಡುತ್ತಿದೆ.
ನೀರಿನ ಪ್ರಮಾಣ ತಗ್ಗುತ್ತಿದ್ದಂತೆ ಮೊಸಳೆಗಳು ನಗರದ ರಸ್ತೆಗಳಲ್ಲಿ ಕಾಣಿಸುತ್ತಿವೆ ಬರುತ್ತಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ನೂರಾರು ಜನರನ್ನು ಸಂರಕ್ಷಿಸಿದ್ದು, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದೆ.
ಮಳೆ ಕಡಿಮೆಯಾಗಿದ್ದು, ಶುಕ್ರವಾರದ ಪರಿಸ್ಥಿತಿಗಿಂತ ಈಗ ಸ್ವಲ್ಪ ಸುಧಾರಿಸಿದೆ. ಮುಂದಿನ 48 ಗಂಟೆ ಮತ್ತೆ ಮಳೆ ಆರ್ಭಟಿಸಲಿದೆ ಎಂದು ಐಎಂಡಿ (ಭಾರತೀಯ ಹವಮಾನ ವಿಭಾಗ) ತಿಳಿಸಿದೆ. ರೈಲು ಸಂಚಾರ, ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವರದಿಯಾಗಿದೆ.