ನವದೆಹಲಿ: ಕೋವಿಡ್-19 ವಿಚಾರ ಸಂಬಂಧ ರಾಜ್ಯಸಭೆಯಲ್ಲಿಂದು ವಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಕಲಾಪದ ಗಮನ ಸೆಳೆದಿದ್ದಾರೆ. ಕೊರೊನಾ ವೈರಸ್ ತಡೆಗಟ್ಟುವ ಸಂಬಂಧ ಕೇಂದ್ರ ಸರ್ಕಾರ ಗೋಲ್ಡನ್ ತಿಂಗಳುಗಳನ್ನು ವ್ಯರ್ಥ ಮಾಡಿದೆ ಎಂದು ಗುಲಾಂ ನಬಿ ಆಜಾದ್ ಆರೋಪಿಸಿದ್ದಾರೆ.
ವೈದ್ಯ ಕ್ಷೇತ್ರದಲ್ಲಿ ಗೋಲ್ಡನ್ ಅವರ್ಸ್ ಅಂತ ಹೇಳಲಾಗುತ್ತಿದೆ. ರೋಗಿಗೆ ತುರ್ತಾಗಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಹೀಗೆ ಬಳಕೆ ಮಾಡಲಾಗುತ್ತಿದೆ. ಸರ್ಕಾರ ಕೋವಿಡ್ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದೆ ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ 2019ರ ಡಿಸೆಂಬರ್‌ನಲ್ಲೇ ಎಚ್ಚರಿಕೆ ನೀಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ವರ್ಷದ ಜನವರಿಯಲ್ಲಿ ಇದೇ ವಿಚಾರದಲ್ಲಿ ಗಮನ ಸೆಳೆದಿದ್ದರು ಎಂದು ಗುಲಾಂ ನಬಿ ಆಜಾದ್ ಕಲಾಪಕ್ಕೆ ತಿಳಿಸಿದ್ದಾರೆ.
ಇನ್ನು ಜಿಎಸ್‌ಟಿ, ಆರ್ಥಿಕ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ-2020 ಬಗ್ಗೆ ಚರ್ಚೆಗೆ ಆಡಳಿತ ಹಾಗೂ ವಿರೋಧ ಪಕ್ಷಗಳು ಒಪ್ಪಿಗೆ ಸೂಚಿಸಿವೆ.