ತಿರುವನಂತಪುರ: ಕೇರಳ ಮಾಜಿ ಗೃಹ ಸಚಿವ, ಸಿಪಿಐ (ಎಂ) ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೇಶ್ ಕೊಡಿಯೇರಿ ವಿರುದ್ಧದ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ತಡರಾತ್ರಿ ಕೇರಳದ ಹಲವೆಡೆ ರೇಡ್ ಮಾಡಿದೆ.
ತಿರುವನಂತಪುರದಲ್ಲಿರವ ಬಿನೇಶ್ ಅವರ ಮನೆ ಮೇಲೆ ಇಡಿ ಅಧಿಕಾರಿಗಳು ರೇಡ್ ಮಾಡಿ, ಪರಿಶೀಲನೆ ನಡೆಸಿದರು.
ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಇತ್ತೀಚೆಗಷ್ಟೇ ಬಿನೇಶ್ ಕೊಡಿಯೇರಿ ಅವರನ್ನು ಬೆಂಗಳೂರಿನ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದರು.