ETV Bharat / bharat

ವಿಸ್ಟಾ ಐಕಾನ್​​ ಉದ್ಯಾನದ ಲೋಗೋ ವಿನ್ಯಾಸಪಡಿಸಿದರೆ ಕೇಂದ್ರದಿಂದ ಸಿಗಲಿದೆ 5 ಲಕ್ಷ ರೂ. ಬಹುಮಾನ! - ಐಕಾನಿಕ್ ಸ್ಟ್ರಕ್ಷರ್ ವಿನ್ಯಾಸ ಸ್ಪರ್ಧೆ ನೋಂದಣಿ

ಐಕಾನಿಕ್​ ಉದ್ಯಾನ ವಿನ್ಯಾಸ ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭವಾಗಲಿದ್ದು, ಡಿಸೆಂಬರ್ 11 ರವರೆಗೆ ಮುಂದುವರಿಯುತ್ತದೆ. ವಿಜೇತರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದು, ಮುಂದಿನ ಅತ್ಯುತ್ತಮ ವಿನ್ಯಾಸಗಳಿಗೆ ತಲಾ 1 ಲಕ್ಷ ರೂ. ಪ್ರಶಂಸೆ ಪ್ರಶಸ್ತಿ ಸಿಗಲಿವೆ ಎಂದರು.

ಸಂಸತ್ ಭವನ
author img

By

Published : Nov 16, 2020, 8:43 PM IST

ನವದೆಹಲಿ: ರಾಷ್ಟ್ರ ರಾಜಧಾನಿಯ ನವ ಭಾರತ ಉದಯನ್​ನಲ್ಲಿ (ನ್ಯೂ ಇಂಡಿಯಾ ಗಾರ್ಡನ್) ಐಕಾನಿಕ್​ ಉದ್ಯಾನ ವಿನ್ಯಾಸ ಸ್ಪರ್ಧೆಗೆ ಪಾಲ್ಗೊಳ್ಳಲು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಹ್ವಾನಿಸಿದೆ.

ಯಮುನಾ ನದಿಯ ದಡದಲ್ಲಿ ಇರುವ ಈ ಅಪ್ರತಿಮ ರಚನೆಯು (ಸ್ಟ್ರಕ್ಷರ್​) 75 ವರ್ಷಗಳ ಸ್ವಾತಂತ್ರ್ಯದ ನೆನಪಿಗಾಗಿ ಕೇಂದ್ರ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿದೆ.

ರಾಷ್ಟ್ರ ರಾಜಧಾನಿಯ ನವ ಭಾರತ್ ಉದಯನ್‌ನಲ್ಲಿ ಅಪ್ರತಿಮ ರಚನೆಯ ವಿನ್ಯಾಸ ಸ್ಪರ್ಧೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ದೇಶಾದ್ಯಂತದ ಸೃಜನಶೀಲ ಮನಸ್ಸುಗಳನ್ನು ಆಹ್ವಾನಿಸುತ್ತಿದ್ದೇವೆ ಎಂದು ವಸತಿ ಮತ್ತು ನಗರಾ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಹೇಳಿದ್ದಾರೆ.

ನೋಂದಣಿ ಪ್ರಕ್ರಿಯೆ ಮಂಗಳವಾರದಿಂದ ಪ್ರಾರಂಭವಾಗಲಿದ್ದು, ಡಿಸೆಂಬರ್ 11 ರವರೆಗೆ ಮುಂದುವರಿಯುತ್ತದೆ. ವಿಜೇತರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದ್ದು, ಮುಂದಿನ ಅತ್ಯುತ್ತಮ ವಿನ್ಯಾಸಗಳಿಗೆ ತಲಾ 1 ಲಕ್ಷ ರೂ. ಪ್ರಶಂಸೆ ಪ್ರಶಸ್ತಿ ಸಿಗಲಿವೆ ಎಂದರು.

ಇಡೀ ಪ್ರಕ್ರಿಯೆಯನ್ನು ನಡೆಸುವ ಕಾರ್ಯವನ್ನು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ವಿನ್ಯಾಸ ಸ್ಪರ್ಧೆ ಬಿಡುಗಡೆ ಮಾಡಿದೆ.

ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್​ವರೆಗೆ ಕೇಂದ್ರ ವಿಸ್ಟಾ ಯೋಜನೆಯ ಒಂದು ಭಾಗವಾಗಿದೆ. ಕೇಂದ್ರ ವಿಸ್ಟಾ ಮಾಸ್ಟರ್ ಪ್ಲ್ಯಾನ್ ಈ ಪ್ರದೇಶವನ್ನು ವಿಶ್ವ ದರ್ಜೆಯ ಸಾರ್ವಜನಿಕ ಸ್ಥಳವಾಗಿ ಅಭಿವೃದ್ಧಿಪಡಿಸುವುದು ಮತ್ತು ಪುನರಾಭಿವೃದ್ಧಿಯ ಉದ್ದೇಶ ಇರಿಸಿಕೊಂಡಿದೆ. ವಾಸ್ತುಶಿಲ್ಪದ ಪ್ರತಿಮೆಯಾಗಿ ಅದರ ಭವ್ಯತೆ ಪುನಃಸ್ಥಾಪನೆ, ಆಡಳಿತದ ಸಮರ್ಥ ಕಾರ್ಯನಿರ್ವಹಣೆಗೆ ಆಧುನಿಕ ಸೌಲಭ್ಯ ಒದಗಿಸುವುದು. ಸಾಂಸ್ಕೃತಿಕ ಸಂಸ್ಥೆಗಳನ್ನು ಬಲಪಡಿಸುವುದು ಮತ್ತು ಭಾರತೀಯ ಸ್ವಾತಂತ್ರ್ಯದ 75ನೇ ವರ್ಷವನ್ನು ಸ್ಮರಿಸುವುದು ಇದರಡಿ ಸೇರಿದೆ.

ಮಾಸ್ಟರ್ ಪ್ಲ್ಯಾನ್ ಅಡಿಯಲ್ಲಿ ಕೇಂದ್ರ ವಿಸ್ಟಾ ಯೋಜನೆಯು ಪ್ರಸ್ತುತ 2.9 ಕಿ.ಮೀ.ನಿಂದ 6.3 ಕಿ.ಮೀ.ಗೆ ವಿಸ್ತರಿಸಲಾಗಿದೆ. 20.22 ಎಕರೆ ಪ್ರದೇಶದಲ್ಲಿ ಹರಡಿರುವ ನವ ಭಾರತ್ ಉದಯನ್ 2022ರ ಆಗಸ್ಟ್ 15ರಂದು ಸಾರ್ವಜನಿಕರಿಗೆ ಮುಕ್ತವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.