ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಚುನಾವಣೆ ಪ್ರಚಾರದ ಭರಾಟೆ ನಡೆಯುವೆಯೂ ಪ್ರಧಾನಿ ಮೋದಿ ಜತೆ ರಾಜಕೀಯೇತರ ವಿಷಯಗಳ ಬಗ್ಗೆ ವೆರಿ ವೆರಿ ಇಂಟ್ರೆಸ್ಟಿಂಗ್ ಸಂದರ್ಶನ ನಡೆಸಿದ್ದಾರೆ.
-
#WATCH PM Narendra Modi during interaction with Akshay Kumar, speaks on his friends in opposition parties, especially Ghulam Nabi Azad & Mamata Banerjee pic.twitter.com/8GkqrHpqXv
— ANI (@ANI) April 24, 2019 " class="align-text-top noRightClick twitterSection" data="
">#WATCH PM Narendra Modi during interaction with Akshay Kumar, speaks on his friends in opposition parties, especially Ghulam Nabi Azad & Mamata Banerjee pic.twitter.com/8GkqrHpqXv
— ANI (@ANI) April 24, 2019#WATCH PM Narendra Modi during interaction with Akshay Kumar, speaks on his friends in opposition parties, especially Ghulam Nabi Azad & Mamata Banerjee pic.twitter.com/8GkqrHpqXv
— ANI (@ANI) April 24, 2019
ಜನಸಾಮಾನ್ಯರಿಗೆ ಇರುವ ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ಪ್ರಧಾನಿ ಮೋದಿ, ನಟ ಅಕ್ಷಯ್ ಕುಮಾರ್ ಮುಂದೆ ಬಿಚ್ಚಿಟ್ಟಿದ್ದಾರೆ.
ರಾಜಕೀಯವಾಗಿ ವಿರೋಧ ವ್ಯಕ್ತಪಡಿಸುವ ನಾಯಕರಲ್ಲಿ ನಿಮ್ಮ ಗೆಳೆಯರು ಯಾರು ಎಂಬ ಪ್ರಶ್ನೆಗೆ ಪ್ರಧಾನಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಯೆಸ್ ಪ್ರತಿಪಕ್ಷಗಳಲ್ಲಿ ಹಲವು ಆತ್ಮೀಯ ಸ್ನೇಹಿತರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಜಿದ್ದಿಗೆ ಬಿದ್ದವರಂತೆ ಹೋರಾಡುತ್ತಿರುವ ಮಮತಾ ಬ್ಯಾನರ್ಜಿ ನನ್ನ ನೆಚ್ಚಿನ ಸ್ನೇಹಿತೆ ಅಂದಿದ್ದಾರೆ ಮೋದಿ.
ವಿರೋಧಿಗಳ ವಿರುದ್ಧ ಕೆಂಡ ಕಾರುವ ಮಮತಾ ಬ್ಯಾನರ್ಜಿ ಅವರು ಪ್ರತಿ ವರ್ಷ ಎರಡು ಜೊತೆ ಕುರ್ತಾ ಹಾಗೂ ಬೆಂಗಾಲಿ ಸಿಹಿ ತಿಂಡಿಗಳನ್ನು ಮರೆಯದೇ ಕೊಟ್ಟು ಕಳಿಸುತ್ತಿದ್ದಾರಂತೆ.
ಅದಕ್ಕೆ ಬಾಂಗ್ಲಾ ದೇಶದ ಪ್ರಧಾನಿ ಅವರ ಒಂದು ಪ್ರಸಂಗ ನೆನಪಿಸಿಕೊಂಡು ಗೆಳತನದ ವಿಷಯವನ್ನ ಬಹಿರಂಗ ಮಾಡಿದ್ದಾರೆ...
ಇನ್ನು ಗುಲಾಂ ನಬಿ ಆಜಾದ್ ಜೊತೆಗಿನ ಒಡನಾಟವನ್ನ ವಿವರಿಸಿದ ಅವರು, ತಾವಿನ್ನೂ ಸಿಎಂ ಆಗುವುದಕ್ಕಿಂತ ಮುನ್ನ ಸಂಸತ್ ಭವನಕ್ಕೆ ಭೇಟಿ ನೀಡಿದಾಗಿನ ಸಂದರ್ಭವನ್ನ ಮೋದಿ ಬಿಚ್ಚಿಟ್ಟಿದ್ದಾರೆ.