ETV Bharat / bharat

ಮೋದಿ 2.0 ಆಡಳಿತ: ಒಂದು ಕ್ಷಕಿರಣ - ನರೇಂದ್ರ ಮೋದಿ 2.0 ಆಡಳಿತದ ಸಾಧನೆ

ಪ್ರಧಾನಿಯಾಗಿ ತಮ್ಮ ಎರಡನೇ ಇನ್ನಿಂಗ್ಸ್​ ಅನ್ನು​ ಮೇ 30, 2019 ರಂದು ಅಧಿಕಾರ ಸ್ವೀಕರಿಸುವ ಮೂಲಕ ನರೇಂದ್ರ ಮೋದಿ ಆರಂಭಿಸಿದರು. ಮೋದಿ ಇಂದು ತಮ್ಮ ಸರ್ಕಾರದ ಎರಡನೇ ಇನ್ನಿಂಗ್ಸ್​ನ ಮೊದಲ ವಾರ್ಷಿಕೋತ್ಸವ ಆಚರಿಸುತ್ತಿದ್ದಾರೆ. ಈ ಒಂದು ವರ್ಷದ ಅವಧಿಯಲ್ಲಿ ಸರ್ಕಾರ ಸವೆಸಿದ ದಾರಿಯ ಒಂದು ಸ್ಥೂಲ ಚಿತ್ರಣ ಇಲ್ಲಿದೆ.

Modi
ಮೋದಿ
author img

By

Published : May 30, 2020, 11:31 AM IST

ಕಳೆದ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ಹಲವಾರು ಮಹತ್ವದ ನಿರ್ಧಾರ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಈ ಪೈಕಿ ಮುಖ್ಯವಾದವು ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿ, ಇಡೀ ರಾಜ್ಯವನ್ನು ಜಮ್ಮು ಹಾಗೂ ಕಾಶ್ಮೀರ ಹಾಗೂ ಲಡಾಖ್‍ಗಳೆಂಬ ಕೇಂದ್ರಾಡಳಿತ ಪ್ರದೇಶಗಳಾಗಿ ಆಗಸ್ಟ್ 2019 ರಲ್ಲಿ ವಿಭಜಿಸಲಾಯಿತು. ಉಳಿದಂತೆ ದೇಶದ ಬೆನ್ನೆಲುಬಾಗಿರುವ ರೈತರ ಹಾಗೂ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಬಲವರ್ಧನೆಗೆ ಕೂಡಾ ನಾನಾ ಉಪ ಕ್ರಮಗಳನ್ನು ಕಳೆದೊಂದು ವರ್ಷದಿಂದ ತೆಗೆದುಕೊಳ್ಳಲಾಗಿದೆ.

ಈ ಪೈಕಿ ಮುಖ್ಯವಾದುವುಗಳೆಂದರೆ, 2022ರ ವೇಳೆಗೆ ರೈತರ ಅದಾಯ ದ್ವಿಗುಣಗೊಳಿಸುವ ಸಂಬಂಧ, ಅಂತರ್ ಸಚಿವಾಲಯಗಳ ಸಚಿವರು ಚಿಂತನೆ ನಡೆಸಿದ್ದು, ರೈತರ 7 ಆದಾಯ ಮೂಲಗಳ ಮೂಲಕ ಅವರ ಆದಾಯ ದ್ವಿಗುಣಗೊಳಿಸುವ ಚಿಂತನೆ ನಡೆದಿದೆ.10,000 ಕ್ಕೂ ಅಧಿಕ ರೈತರ ಉತ್ಪನ್ನ ಗುಂಪುಗಳನ್ನು ಹಾಗೂ 500 ಮೀನುಗಾರಿಕಾ ಉತ್ಪನ್ನ ಗುಂಪುಗಳಿಗೆ ಬೆಂಬಲ ಕಾರ್ಯಕ್ರಮ ರೂಪಿಸಲಾಗಿದೆ. ಕೃಷಿ ಕ್ಷೇತ್ರದ ಆಧುನೀಕರಣಕ್ಕೆ ಸಂಬಂಧಿಸಿದಂತೆ ಮಾದರಿ ಲ್ಯಾಂಡ್ ಲೀಸ್ ಕಾಯ್ದೆ 2016, ಮಾದರಿ ಎಪಿಎಂಸಿ ಕಾಯ್ದೆ 2017, ಮಾದರಿ ಗುತ್ತಿಗೆ ವ್ಯವಸಾಯ ಕಾಯ್ದೆ 2018 ಗಳನ್ನು ಜಾರಿಗೊಳಿಸಲಾಗಿದೆ. ಕೃಷಿ ಹಾಗೂ ಸಂಬಂಧಿತ ಸಚಿವಾಲಯದ ಪುನರ್ ರಚನೆ, 7.86 ಮಿಲಿಯನ್ ಹೆಕ್ಟೇರ್​​ಗೆ ನೀರುಣಿಸುವ 99 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಯೋಜನೆ, 151 ಜಿಲ್ಲೆಗಳನ್ನು ಬರಗಾಲದಿಂದ ರಕ್ಷಿಸುವ ಯೋಜನೆ ಹಾಗೂ 2 ಲಕ್ಷ ರೈತರನ್ನು ಒಳಗೊಂಡು 2.5 ಮಿಲಿಯನ್ ಹೆಕ್ಟೇರ್​ನಲ್ಲಿ ಸಾವಯವ ಕೃಷಿ, ಪ್ರಧಾನ ಮಂತ್ರಿ ಕಿಸಾನ್ (ಪ್ರಧಾನ ಮಂತ್ರಿ ಕೃಷಿ ಸನ್ಮಾನ್ ನಿಧಿ) ಯೋಜನೆ ಮೂಲಕ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ನೆರವು. 8.52 ಕೋಟಿ ರೈತರಿಗೆ 62,469 ಕೋಟಿ ಸಹಾಯಧನ ಬಿಡುಗಡೆ, ಮೀನುಗಾರಿಕಾ ಉದ್ಯಮಕ್ಕೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆರ್ಥಿಕ ನಿಧಿ ಇನ್ನಿತರೆ ಪ್ರಮುಖ ಯೋಜನೆಗಳು.

ಮೋದಿ ನೇತೃತ್ವದಲ್ಲಿ ಇಂದು ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ. ದೇಶದ ಆರ್ಥಿಕತೆಯನ್ನು ಇನ್ನಷ್ಟು ಸದೃಢಗೊಳಿಸಲು ಸರಕು ಹಾಗೂ ಸೇವಾ ತೆರಿಗೆಯನ್ನು (ಜಿಎಸ್‍ಟಿ) ಇನ್ನಷ್ಟು ಸರಳಗೊಳಿಸಲು ಕಾಯಲಾಗುತ್ತಿದೆ. ವಾಹನ ತಯಾರಿಕಾ ಕ್ಷೇತ್ರ ಇನ್ನೂ ಮೇಕ್ ಇನ್ ಇಂಡಿಯಾ ಉತ್ಪನ್ನಗಳಿಗೆ ಕಾಯುತ್ತಿದೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು 2020ರ ಬಜೆಟ್‍ನಲ್ಲಿ ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಭಾರತ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಮುಖ್ಯವಾಗಿ ಆಮದು ಮೇಲೆ ಹೆಚ್ಚುವರಿ ಆಮದು ಸುಂಕ, ವೈಯಕ್ತಿಕ ಆದಾಯ ತೆರಿಗೆ ಕಾಯ್ದೆಯಲ್ಲಿ ಬದಲಾವಣೆ, ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಗೆ ಹಲವು ವಿನಾಯತಿ ಇತ್ಯಾದಿಗಳು ಸೇರಿವೆ.

ಮೇಕ್ ಇನ್ ಇಂಡಿಯಾವನ್ನು ಯಶಸ್ವಿಗೊಳಿಸಲು ಜಿಎಸ್‍ಟಿ ಜಾರಿಗೊಳಿಸಲಾಗಿದೆ. ಆ ಮೂಲಕ ತೆರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಪಾರದರ್ಶಕತೆ ಹಾಗೂ ಉತ್ತರದಾಯಿತ್ವದ ನಿರೀಕ್ಷೆ ಮಾಡಲಾಗುತ್ತಿದೆ. ಮೇಕ್ ಇನ್ ಇಂಡಿಯಾದ ಭಾಗವಾಗಿರುವ ಡಿಜಿಟಲ್ ಇಂಡಿಯಾ ಯೋಜನೆ, ಈ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸುಲಲಿತ ಮತ್ತು ಪಾರದರ್ಶಕಗೊಳಿಸಿದೆ. ಇದು ಜಿಎಸ್‍ಟಿ ಜಾರಿಗೆ ನೆರವಾಗುತ್ತಿದೆ. ಕೆಲವು ಕ್ಷೇತ್ರಗಳ ಮೇಲಿನ ಆಮದು ತೆರಿಗೆ ಹೆಚ್ಚಳ ಮಾಡುವ ಮೂಲಕ ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಯಶಸ್ವಿಗೊಳಿಸಲು ಶ್ರಮಿಸಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಮೂಲಕ ಭಾರತವನ್ನು ವಿಶ್ವದ ಅತಿ ದೊಡ್ಡ ಉತ್ಪಾದನಾ ವಲಯವಾಗಿಸಲು ಸರ್ಕಾರ ನಿರ್ಧರಿಸಿದೆ. 2020 ರ ಮೇ 20ರಂದು ಭಾರತೀಯ ರೈಲ್ವೆ ತನ್ನ ಫ್ರೆಂಚ್​ ಸಹಭಾಗಿತ್ವ ಸಂಸ್ಥೆ ಅಲ್‍ಸ್ಟಾಮ್ ಮೂಲಕ ಸ್ಥಳೀಯವಾಗಿ ಉತ್ಪಾದಿಸಿದ 12,000 ಅಶ್ವ ಶಕ್ತಿಯ ಎಲೆಕ್ಟ್ರಿಕ್ ಲೋಕೋವನ್ನು ಲೋಕಾರ್ಪಣೆಗೊಳಿಸಿತು.

2020ರ ಮೇ ನಲ್ಲಿ ಭಾರತ ಸರ್ಕಾರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಇನ್ನಷ್ಟು ಸೌಲಭ್ಯ ಘೋಷಿಸಿತು. ಈ ಮೂಲಕ ದೇಶದ ಒಟ್ಟು ಆಂತರಿಕ ಉತ್ಪಾದನಾ ಕ್ಷೇತ್ರಕ್ಕೆ ಇವುಗಳ ಕೊಡುಗೆಯನ್ನು ಇನ್ನಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೋವಿಡ್ -19 ರ ಕಾರಣಕ್ಕಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ಬೆಂಬಲವನ್ನು ಈಗಾಗಲೇ ದೊಡ್ಡ ಮಟ್ಟದಲ್ಲಿ ಘೋಷಿಸಲಾಗಿದೆ. ಮುದ್ರಾ ಹಾಗೂ ಪಿಎಂಇಜಿಪಿ ಘಟಕಗಳಿಗೆ ಎರಡನೇ ಹಂತದ ಹಣಕಾಸು ನೆರವಿನ ವ್ಯವಸ್ಥೆಯನ್ನು ಎಂಎಎಂಇ ಸಚಿವಾಲಯ ಘೋಷಿಸಿದೆ. ಫೆಬ್ರವರಿ1, 2020ಕ್ಕೆ ಅನ್ವಯವಾಗುವಂತೆ ಕೈಗಾರಿಕಾ ಹಾಗೂ ಆಂತರಿಕ ವ್ಯಾಪಾರ ಸಚಿವಾಲಯ (ಡಿಪಿಐಐಟಿ) 27,916 ನವೋದ್ಯಮಗಳನ್ನು ಗುರುತಿಸಿದೆ. ಸರ್ಕಾರ 10 ಸಾವಿರ ಕೋಟಿ ರೂಪಾಯಿಗಳ ಫಂಡ್ ಮೂಲಕ ನವೋದ್ಯಮಗಳಿಗೆ ನೆರವು ನೀಡುತ್ತಿದೆ. ಎಸ್‍ಐಡಿಬಿಐ ಈ ಫಂಡ್​ ಅನ್ನು ನಿರ್ವಹಿಸುತ್ತಿದೆ. ಈ ಫಂಡ್‍ನ ಶೇ. 10 ರಷ್ಟು ಮಹಿಳಾ ನವೋದ್ಯಮಗಳಿಗೆ ಮೀಸಲಿಡಲಾಗಿದೆ. ಪ್ರವಾಸೋದ್ಯಮ ಸಚಿವಾಲಯ, ದೇಶದ 12 ವಲಯಗಳ 17 ಪ್ರವಾಸಿ ತಾಣಗಳನ್ನು ಅಭಿವೃದ್ಧಿಗಾಗಿ ಗುರುತಿಸಿದೆ.

ಮೂಲ ಸೌಕರ್ಯ ಕ್ಷೇತ್ರದಲ್ಲಿ ಕೂಡಾ ಕೇಂದ್ರ ಸರ್ಕಾರ ಭಾರೀ ಬದಲಾವಣೆಗಳನ್ನು ತರುತ್ತಿದೆ. ಜಲ್ ಜೀವನ್ ಮಿಶನ್‍ನಡಿ ಡಿಸೆಂಬರ್ 25ರಂದು ಕೇಂದ್ರ ಸರ್ಕಾರ ಎಲ್ಲಾ ಮನೆಗಳಿಗೂ ಕುಡಿಯುವ ನೀರು ಪೂರೈಕೆಗೆ 3.5 ಲಕ್ಷ ಕೋಟಿ ವ್ಯಯಿಸುವ ನಿರ್ಧಾರ ಘೋಷಿಸಿತು. ಮುಂದಿನ ಐದು ವರ್ಷಗಳಲ್ಲಿ ಮೂಲ ಸೌಕರ್ಯ ಕ್ಷೇತ್ರದಲ್ಲಿ 1.4 ಟ್ರಿಲಿಯನ್ ಡಾಲರ್ ಮೊತ್ತವನ್ನು ಹೂಡಿಕೆ ಮಾಡಲಾಗುವುದು ಎಂದು ಕೇಂದ್ರ ಉಕ್ಕು ಸಚಿವರು ತಿಳಿಸಿದ್ದಾರೆ. ಕೇಂದ್ರ ಸರಕಾರ ನ್ಯಾಷನಲ್ ಇನ್ಫ್ರಾಸ್ಟಕ್ಟರ್ ಪೈಪ್‍ಲೈನ್ (ಎನ್‍ಐಪಿ) ಮೂಲಕ ದೇಶದ ಎಲ್ಲಾ ಕೇತ್ರಗಳದ ಬಗ್ಗೆ ಅಧ್ಯಯನ ನಡೆಸಿದ್ದು, 2025 ಒಳಗೆ, 102 ಲಕ್ಷ ಕೋಟಿ ರೂಪಾಯಿಗಳ ಮೂಲ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಿದೆ.

ವಿಮಾನ ನಿಲ್ದಾಣಗಳ ಖಾಸಗೀಕರಣ ಈಗ ವೇಗ ಪಡೆದುಕೊಂಡಿದೆ. ಆರು ವಿಮಾನ ನಿಲ್ದಾಣಗಳನ್ನು ಈಗಾಗಲೇ ಖಾಸಗೀಕರಣಗೊಳಿಸಲಾಗಿದೆ. ಇನ್ನೂ 6 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲಾಗುವುದು ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್​ ಪುರಿಯವರು ತಿಳಿಸಿದ್ದಾರೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್, ಅದಾನಿ ಗ್ಯಾಸ್, ಎಚ್‍ಪಿಸಿಎಲ್ ವಾಹನಗಳಿಗೆ ಘನೀಕೃತ ಅನಿಲ ಹಾಗೂ ದೊಡ್ಡ ನಗರಗಳಿಗೆ ಕೊಳವೆ ಮೂಲಕ ಅಡುಗೆ ಅನಿಲ ಪೂರೈಸುವ ಗುತ್ತಿಗೆ ಪಡೆದಿವೆ. ಮುಂಬಯಿ-ನಾಗಪುರ ನಡುವಣ ಸೂಪರ್ ಎಕ್ಸ್​ ಪ್ರೆಸ್​ ರಸ್ತೆಗೆ 28,000 ಕೋಟಿ ರೂಪಾಯಿಗಳ ಬೆಂಬಲ ಬ್ಯಾಂಕ್‍ಗಳಿಂದ ದೊರಕಿದ್ದು, ಈ ರಸ್ತೆ ಕೆಲಸ ಈಗಾಗಲೇ ಆರಂಭವಾಗಿದೆ.

ಆರೋಗ್ಯ ಕ್ಷೇತ್ರದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಕೇಂದ್ರ ಸರ್ಕಾರ ತನ್ನ ಬಜೆಟ್ ಅನುದಾನದಲ್ಲಿ ಕೇವಲ ಶೇ. 5.7 ರಷ್ಟು ಹೆಚ್ಚಳ ಮಾಡಿದೆ. ಸರ್ಕಾರ 112 "ಅಸ್ಪಿರೇಶನಲ್" ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಆಸ್ಪತ್ರೆ ನಿರ್ಮಿಸಲು ಉದ್ದೇಶಿಸಿದೆ. ಕಡಿಮೆ ದರದಲ್ಲಿ ಎಲ್ಲರಿಗೂ ಔಷಧಿ ದೊರಕುವಂತೆ ಮಾಡಲು, ಜನ ಔಷಧಿ ಮೆಡಿಕಲ್ ಸ್ಟೋರ್​​ಗಳನ್ನು ಇನ್ನಷ್ಟು ಬಲವರ್ಧನೆ ಮಾಡಲು ಸರ್ಕಾರ ನಿರ್ಧರಿಸಿದೆ. ಆಯುಷ್ಮಾನ್ ಭಾರತ ಯೋಜನೆ ಮೂಲಕ ಎಲ್ಲರಿಗೂ ಆರೋಗ್ಯ ವಿಮಾ ವ್ಯವಸ್ಥೆ ದೊರಕುವಂತೆ ಮಾಡಲಾಗಿದೆ. ಕೋವಿಡ್-19 ನಿಯಂತ್ರಿಸಲು ಸರ್ಕಾರ ಬಹಳ ಯೋಜಿತ ಕಾರ್ಯತಂತ್ರ ರೂಪಿಸುತ್ತಿದೆ.

ನವೆಂಬರ್ 2019ರಲ್ಲಿ ಸುಪ್ರೀಂಕೋರ್ಟ್ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದೆ. ಇದರ ಜೊತೆಗೆ ಕೇಂದ್ರ ಸರ್ಕಾರ ನಮಾಮಿ ಗಂಗಾದಂತಹ ನಾನಾ ಯೋಜನೆಗಳನ್ನು ರೂಪಿಸಿದೆ.

ರಕ್ಷಣಾ ಕೇತ್ರದಲ್ಲೂ ಸರ್ಕಾರ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ. ಘರ್ಷಣೆಯಲ್ಲಿ ಮೃತಪಟ್ಟ ಸೈನಿಕರ ಕುಟುಂಸ್ಥರಿಗೆ ನೀಡುವ ಪರಿಹಾರ ಧನವನ್ನು ಘರ್ಷಣಾ ಪರಿಹಾರ ನಿಧಿಯಿಂದ 2 ಲಕ್ಷ ರೂಪಾಯಿಯಿಂದ 8 ಲಕ್ಷ ರೂಪಾಯಿಗೆ ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಈ ನಡುವೆ ಸಿಆರ್​​ಸಿಎಫ್​​ ಯೋಧರು ಆರು ತಿಂಗಳಿನಿಂದ ತಮ್ಮ ತಿಂಗಳ ರೇಷನ್ ಭತ್ಯೆ ಬಂದಿಲ್ಲವೆಂದು ವರದಿ ಮಾಡಿದ್ದಾರೆ. 2019ರ ಜೂನ್‍ನಲ್ಲಿ ಅಂಗವಿಕಲ ಯೋಧರ ಪಿಂಚಣಿ ಮೊತ್ತದಿಂದ ಆದಾಯ ತೆರಿಗೆ ಕಳೆಯುವಂತೆ ಪ್ರಿನ್ಸಿಪಲ್ ಕಂಟ್ರೋಲರ್ ಆಫ್ ಡಿಫೆನ್ಸ್ ಅಕೌಂಟ್ಸ್ ಬ್ಯಾಂಕ್‍ಗಳಿಗೆ ಪತ್ರ ಬರೆದಿದ್ದಾರೆ.

ಉತ್ತಮ ಆಡಳಿತ, ಯುವ ಭಾರತ, ಎಲ್ಲರಿಗೂ ಶಿಕ್ಷಣ, ಮಹಿಳಾ ಸಬಲೀಕರಣ, ಎಲ್ಲರನ್ನೂ ಜೊತೆಗೊಂಡ ಅಭಿವೃದ್ಧಿಯಲ್ಲಿ ನಮೋ ಯಶಸ್ಸಿನ ಹಾದಿಯಲ್ಲಿದ್ದಾರೆ. ಆದರೆ ಭಾರತೀಯ ಜನತಾ ಪಕ್ಷದ ಇನ್ನೊಂದು ಭರವಸೆಯಾದ ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.

ಈ ನಡುವೆ ಮೋದಿ ಸರ್ಕಾರಕ್ಕೆ ಒಂದು ವರ್ಷ ತುಂಬುವ ದಾರಿಯಲ್ಲಿ ಕೋವಿಡ್ -19 ಎಂಬ ಕಣ್ಣಿಗೆ ಕಾಣದ ವೈರಾಣು ಯುದ್ಧವನ್ನೇ ಸಾರಿದೆ. ಕೊರೊನಾ ದಾಳಿಗೆ ಇಡೀ ದೇಶದ ಜನರೇ ಬಳಲಿ ಬೆಂಡಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ನಮೋ ಧೈರ್ಯ, ಜಾಣ್ಮೆಯಿಂದ ಹೆಜ್ಜೆಯಿಡುತ್ತಿದ್ದಾರೆ. ಆದರೆ ಬಡವರು, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಜನಸಾಮಾನ್ಯರು ಬಹಳ ಸಂಕಷ್ಟದಲ್ಲಿದ್ದಾರೆ. ಇವರೆಲ್ಲರ ಕೈಹಿಡಿದು ಮುಂದೆ ಸಾಗುವ ಬಹುದೊಡ್ಡ ಜವಾಬ್ದಾರಿ ಮೋದಿ ಸರ್ಕಾರಕ್ಕೆ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡು ನಮೋ, ಆತ್ಮ ನಿರ್ಭರ ಪ್ಯಾಕೇಜ್​ ಘೋಷಿಸಿದ್ದಾರೆ. ಭಾರತ ದೇಶವನ್ನು ಬಲಿಷ್ಠವಾಗಿ ರೂಪಿಸುವ ಮೋದಿಯವರ ಸಂಕಲ್ಪಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ದೇಶದ ಅರ್ಥ ವ್ಯವಸ್ಥೆಯನ್ನು ಮೇಲೆತ್ತಬೇಕಿದೆ. ಭಾರತವನ್ನು ಸಂಪೂರ್ಣ ಸ್ವಾವಲಂಬಿ ದೇಶವನ್ನಾಗಿ ರೂಪಿಸಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.