ETV Bharat / bharat

ಉತ್ತರ ಪ್ರದೇಶದ ಕೋವಿಡ್​-19 ಆಸ್ಪತ್ರೆಗಳಲ್ಲಿ ಮೊಬೈಲ್​ ಬ್ಯಾನ್​​ - Mobile phones banned in COVID hospitals in Uttar Pradesh

ಕೋವಿಡ್​-19 ಚಿಕಿತ್ಸೆಗಾಗಿ ಮೀಸಲಿರುವ L-2 ಹಾಗೂ L-3 ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳು ಐಸೋಲೇಷನ್​ ವಾರ್ಡ್​ಗಳಲ್ಲಿ ಮೊಬೈಲ್​ ಫೋನ್​ ಬಳಸುವಂತಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಸೂಚಿಸಿದೆ.

UP govt
ಕೋವಿಡ್​-19 ಆಸ್ಪತ್ರೆಗಳಲ್ಲಿ ಮೊಬೈಲ್​ ಬ್ಯಾನ್​​
author img

By

Published : May 24, 2020, 12:59 PM IST

ಲಖನೌ: ಕೋವಿಡ್​-19 ಆಸ್ಪತ್ರೆಗಳಲ್ಲಿ ಮೊಬೈಲ್​ಗಳನ್ನು​ ಬ್ಯಾನ್​​ ಮಾಡಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್​-19 ಚಿಕಿತ್ಸೆಗಾಗಿ ಮೀಸಲಿರುವ L-2 ಹಾಗೂ L-3 ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳು ಐಸೋಲೇಷನ್​ ವಾರ್ಡ್​ಗಳಲ್ಲಿ ಮೊಬೈಲ್​ ಫೋನ್​ ಬಳಸುವಂತಿಲ್ಲ. ವಾರ್ಡ್​ಗಳ ಉಸ್ತುವಾರಿ ಬಳಿ ಮಾತ್ರ ಎರಡು ಫೋನ್​ಗಳಿರುತ್ತದೆ. ಇದನ್ನು ಬಳಸಿ ರೋಗಿಗಳು ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಬಹುದು.

ಶನಿವಾರ ರಾತ್ರಿ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಮಹಾನಿರ್ದೇಶಕ ಕೆ.ಕೆ. ಗುಪ್ತಾ ನೀಡಿರುವ ಆದೇಶದಲ್ಲಿ ಆಸ್ಪತ್ರೆಗಳ ಅಧಿಕಾರಿಗಳು ಹಾಗೂ ನಿರ್ದೇಶಕರಿಗೆ ವಾರ್ಡ್​ಗಳ ಉಸ್ತುವಾರಿ ಬಳಿ ಇರುವ ದೂರವಾಣಿ ಸಂಖ್ಯೆಯನ್ನು ರೋಗಿಗಳ ಕುಟುಂಬಸ್ಥರಿಗೆ ನೀಡುವಂತೆ ಸೂಚಿಸಲಾಗಿದೆ.

ಉತ್ತರ ಪ್ರದೇಶದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಬಂದಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 10 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಅತಿವೇಗವಾಗಿ ಹೆಚ್ಚುತ್ತಿದ್ದು, ಈವರೆಗೆ ಒಟ್ಟು 6049 ಕೇಸ್​ಗಳು ಪತ್ತೆಯಾಗಿದ್ದು, 155 ಮಂದಿ ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.