ETV Bharat / bharat

ಬಿಜೆಪಿ ಸಂಸದ, ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್​ ನಾಪತ್ತೆ!? - BJP MP and former cricketer Gautam Gambhir news

ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ದೆಹಲಿಯ ಐಟಿಒ ಏರಿಯಾದಲ್ಲಿ ಕಂಡುಬಂದಿದೆ.

ಗೌತಮ್​ ಗಂಭೀರ್​ ನಾಪತ್ತೆ
author img

By

Published : Nov 17, 2019, 9:16 AM IST

Updated : Nov 17, 2019, 9:31 AM IST

ನವದೆಹಲಿ: ಪೂರ್ವ ದೆಹಲಿಯ ಬಿಜೆಪಿ ಸಂಸದ ಹಾಗೂ ಮಾಜಿ ಕ್ರಿಕೆಟರ್​ ಗೌತಮ್​ ಗಂಭೀರ್​ ನಾಪತ್ತೆಯಾಗಿದ್ದಾರಂತೆ. ಹೀಗಂತ ನಾವು ಹೇಳ್ತಿರೋದಲ್ಲ. ದೆಹಲಿಯ ಬೀದಿ ಬದಿಗಳಲ್ಲಿ ಹಾಕಲಾಗಿರೋ ಪೋಸ್ಟರ್​ಗಳಿವು.

ಹೌದು, ನಗರದ ಐಟಿಒ ಏರಿಯಾದಲ್ಲಿ ಗೌತಮ್​ ಗಂಭಿರ್ ಅವರ ನಾಪತ್ತೆ ಪೋಸ್ಟರ್​ಗಳನ್ನು ಮರಗಳಲ್ಲಿ ಅಂಟಿಸಲಾಗಿದೆ. ನೀವು ಈ ವ್ಯಕ್ತಿಯನ್ನು ನೋಡಿದ್ದೀರಾ! ಕೊನೆಯ ಬಾರಿ ಇಂದೋರ್​ನಲ್ಲಿ ಜಿಲೇಬಿ​ ತಿನ್ನುತ್ತಿದ್ದಾಗ ಇವರನ್ನು ನೋಡಿದ್ದು. ಈಗ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಸಂಪೂರ್ಣ ದೆಹಲಿಯೇ ಹುಡುಕುತ್ತಿದೆ ಎಂದು ಪೋಸ್ಟರ್​ಗಳಲ್ಲಿ ಹಾಕಲಾಗಿದೆ.

ಕಳೆದ ನವೆಂಬರ್​ 15ರಂದು ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಕುರಿತು ನಗರಾಭಿವೃದ್ಧಿ ಸಮಿತಿಯು ಸಂಸದೀಯ ಸ್ಥಾಯಿ ಸಮಿತಿ ಸಭೆಯನ್ನು ಕರೆದಿತ್ತು. ಆದರೆ ಈ ಸಭೆಗೆ ಸಂಸದ ಗೌತಮ್​ ಗಂಭೀರ್ ಗೈರಾಗಿದ್ದರು.

ಈ ವಿಚಾರವಾಗಿಯೇ ಗೌತಮ್​ ಗಂಭೀರ್​ ನಾಪತ್ತೆ ಎಂಬ ಪೋಸ್ಟರ್​ಗಳನ್ನು ಯಾರೋ ಕಿಡಿಗೇಡಿಗಳು ಹಾಕಿದ್ದಾರೆ ಎನ್ನಲಾಗಿದೆ.

Intro:Body:

former cricketer Gautam Gambhir news

Conclusion:
Last Updated : Nov 17, 2019, 9:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.