ETV Bharat / bharat

ಬಿಜೆಪಿ ಮುಖಂಡನ ಸಂಬಂಧಿಕರ ನಿವಾಸದ ಮುಂದೆ ದುಷ್ಕರ್ಮಿಯಿಂದ ಗುಂಡಿನ ದಾಳಿ! - ರಾಜಸ್ಥಾನದ ಬಿಕಾನೇರ್​​ನಲ್ಲಿ ಘಟನೆ

ರಾಜಸ್ಥಾನದಲ್ಲಿ ಬಿಜೆಪಿ ಸಂಬಂಧಿಕರ ಮನೆ ಮುಂದೆ ವ್ಯಕ್ತಿಯೋರ್ವ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ.

Rajasthan news
Rajasthan news
author img

By

Published : Oct 20, 2020, 4:58 PM IST

ಬಿಕಾನೇರ್​ ​(ರಾಜಸ್ಥಾನ): ಬಿಜೆಪಿ ಮುಖಂಡ ನರೇಂದ್ರ ಸುರೇನ್​​ ಸಂಬಂಧಿಕರ ಮನೆ ಮುಂದೆ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ರಾಜಸ್ಥಾನದ ಬಿಕಾನೇರ್​​ನಲ್ಲಿ ಈ ಘಟನೆ ನಡೆದಿದೆ. ಇದರ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಣ ಸುಲಿಗೆ ಮಾಡಲು ಒತ್ತಾಯಿಸಿರುವ ದುಷ್ಕರ್ಮಿಗಳು ಹಣ ನೀಡದೇ ಹೋದರೆ ವ್ಯಕ್ತಿಯ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ದುಷ್ಕರ್ಮಿಗಳು ಸುಲಿಗೆಗಾಗಿ ಒತ್ತಾಯಿಸಿದರು ಮತ್ತು ಮೊತ್ತವನ್ನು ಪಾವತಿಸದಿದ್ದರೆ ವ್ಯಕ್ತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು.

ಘಟನೆ ವೇಳೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.

ಈ ಹಿಂದೆ ಕೂಡ ಇದೇ ರೀತಿಯ ಬೆದರಿಕೆ ತಮ್ಮ ಸಂಬಂಧಿಕರಿಗೆ ಬಂದಿದ್ದು, ತಾವು ಹೆಚ್ಚಿಗೆ ತಲೆ ಕೆಡಿಸಿಕೊಂಡಿಲ್ಲ ಎಂದು ನರೇಂದ್ರ ಸೂರನ್​ ತಿಳಿಸಿದ್ದಾರೆ. ದುಷ್ಕರ್ಮಿಗಳು 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ದುಷ್ಕರ್ಮಿಗಳು ಯಾವುದೇ ರೀತಿಯ ಹೆದರಿಕೆ ಇಲ್ಲದೇ ಓಡಾಡಿಕೊಂಡಿದ್ದು, ತಮ್ಮ ಕುಟುಂಬ ಕೊಲೆ ಮಾಡುವ ಬೆದರಿಕೆ ಸಹ ಹಾಕಿದ್ದಾಗಿ ತಿಳಿದು ಬಂದಿದೆ. ಇದೇ ವಿಚಾರವಾಗಿ ಬಿಜೆಪಿ ಅಧ್ಯಕ್ಷ ಸತೀಶ್​ ಪೂನಿಯಾ ಈಗಾಗಲೇ ಡಿಜಿಪಿ ಜತೆ ಮಾತನಾಡಿದ್ದು, ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.