ಸಂತ ಕಬೀರ್ ನಗರ: ಜಿಲ್ಲಾಧಿಕಾರಿ ಆದೇಶದ ಮೇರೆಗೆ ಉತ್ತರ ಪ್ರದೇಶದ ಭಾಟಾಪರ್ ಗ್ರಾಮದ ಸಮಾಧಿಯಿಂದ 5 ವರ್ಷದ ಬಾಲಕನ ಶವವನ್ನು ಹೊರತೆಗೆಯಲಾಗಿದೆ.
ಜೂನ್ 29 ರಂದು ಗ್ರಾಮದ ನೀರಿನ ಪಂಪ್‌ನಿಂದ ಕುಡಿಯುವ ನೀರನ್ನು ತರುತ್ತಿದ್ದಾಗ ಬಾಲಕನಿಗೆ ವಿದ್ಯುತ್ ತಗುಲಿ ಸಾವನ್ನದ್ದ. ಅದೇ ದಿನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಕೂಡ ಗ್ರಾಮದಲ್ಲಿ ಪರಿಶೀಲನೆಗಾಗಿ ಹಾಜರಿದ್ದರು.
ಬಾಲಕ ಸಾವನ್ನಪ್ಪಿದ ದಿನ ತಂದೆಯ ಆಕ್ಷೇಪಣೆಯ ಹೊರತಾಗಿಯೂ ಗ್ರಾಮದ ಮುಖ್ಯಸ್ಥ ಮತ್ತು ಆಡಳಿತ ಅವಸರದಿಂದ ಬಾಲಕನನ್ನು ಅಂತ್ಯಸಂಸ್ಕಾರ ಮಾಡಿದರು. ಈ ಬಗ್ಗೆ ತನಿಖೆಯನ್ನು ತಪ್ಪಿಸಲು ಹೀಗೆ ಮಾಡಲಾಯಿತು ಎಂದು ಆರೋಪಿಸಲಾಗಿದೆ.
ಮೃತನ ತಂದೆ ತನಿಖೆ ನಡೆಸಬೇಕೆಂದು ಡಿಸಿ ಅವರಿಗೆ ಮನವಿ ಮಾಡಿದ್ದರು. ಗ್ರಾಮದ ಮುಖ್ಯಸ್ಥ ಮತ್ತು ಆಡಳಿತವನ್ನು ತನ್ನ ಮಗನ ಸಾವಿನ ಪ್ರಕರಣದ ತಪ್ಪಿತಸ್ಥರೆಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಜಿಲ್ಲಾಧಿಕಾರಿ ಈ ಬಗ್ಗೆ ತನಿಖೆಗೆ ಆದೇಶಿಸಿದರು. ಪ್ರಕರಣದ ಮೇಲ್ವಿಚಾರಣೆಗಾಗಿ ಡಿಸಿ ಅವರ ಮುಂದಾಳತ್ವದಲ್ಲಿ ಶವವನ್ನು ಸಮಾಧಿಯಿಂದ ಹೊರತೆಗೆಯಲಾಯಿತು.