ನವದೆಹಲಿ: ಕಳೆದ 9 ತಿಂಗಳ ಹಿಂದೆ 60 ವರ್ಷದ ಕಾಮುಕನಿಂದ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಇದೀಗ ನವಜಾತ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಯಾರಿಗೂ ತಿಳಿಯದ ರೀತಿಯಲ್ಲಿ ಬಿಲ್ಡಿಂಗ್ ಟೆರೆಸ್ ಮೇಲೆ ಮಗುವಿಗೆ ಜನ್ಮ ನೀಡಿದ್ದು, ತದನಂತರ ಅದನ್ನ ಮನೆಯಿಂದ ಸ್ವಲ್ಪ ದೂರದ ಅಂಗಡಿವೊಂದರ ಮುಂದೆ ಬಿಟ್ಟು ಬಂದಿದ್ದಾಳೆ.
ಅಕ್ಟೋಬರ್ 31ರಂದು ಈ ಘಟನೆ ನಡೆದಿದ್ದು, ಸ್ಥಳೀಯರ ಆಧಾರದ ಮೇಲೆ ಪೊಲೀಸರು ಸ್ಥಳಕ್ಕಾಗಮಿಸಿ, ನವಜಾತ ಶಿಶು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಬಾಲಕಿ ಈ ಮಗುವಿಗೆ ಜನ್ಮ ನೀಡಿರುವುದು ಗೊತ್ತಾಗಿದೆ. ಇನ್ನು ಮಗು ಸಾವನ್ನಪ್ಪಿದೆಯಾ? ಅಥವಾ ಜೀವಂತವಾಗಿರುವುದೇ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಕಳೆದ 9 ತಿಂಗಳ ಹಿಂದೆ 60 ವರ್ಷದ ಕಾಮುಕನಿಂದ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಘಟನೆ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ಇದೀಗ ಮಗುವಿಗೆ ಜನ್ಮ ನೀಡಿ, ಹಾಳೆವೊಂದರಲ್ಲಿ ಸುತ್ತಿಕೊಂಡು ಹೋಗಿ ಬಿಟ್ಟು ಬಂದಿದ್ದಾಳೆ. ಅತ್ಯಾಚಾರ ಎಸಗಿದ್ದ ಆರೋಪಿ ಬಂಧನ ಮಾಡುವಲ್ಲಿ ಈಗಾಗಲೇ ಪೊಲೀಸರು ಯಶಸ್ವಿಯಾಗಿದ್ದಾರೆ.