ಲಡಾಖ್ : ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ ನಂತರ ಲಡಾಖ್‌ನ ಲೇಹ್‌ನಲ್ಲಿ ಮಿಲಿಟರಿ ಹೆಲಿಕಾಪ್ಟರ್ ಮತ್ತು ಫೈಟರ್ ಜೆಟ್ಗಳ ಚಟುವಟಿಕೆ ಹೆಚ್ಚಾಗಿ ಕಂಡು ಬಂದಿದೆ.
ಚೀನಾದೊಂದಿಗಿನ ಗಡಿ ಬಿಕ್ಕಟ್ಟು ಮತ್ತು ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ಹಿಂಸಾತ್ಮಕ ಸಂಘರ್ಷ ನಡೆದ ಬಳಿಕ ಈ ಚಟುವಟಿಕೆಯು ಮಹತ್ವ ಪಡೆದುಕೊಂಡಿದೆ. ಭಾರತೀಯ ವಾಯುಪಡೆಯ ಸುಖೋಯ್ -30 ಎಂಕೆಐ, ಮಿರಾಜ್ 2000 ಮತ್ತು ಜಾಗ್ವಾರ್ ಫೈಟರ್ ಏರ್ಕ್ರಾಫ್ಟ್ಗಳನ್ನು ಸುಧಾರಿತ ಜಾಗಗಳಿಗೆ ಸ್ಥಳಾಂತರಿಸಿದೆ.
-
Military chopper and fighter jet activity seen in Leh, Ladakh pic.twitter.com/1OoeEIPgrw
— ANI (@ANI) June 19, 2020 " class="align-text-top noRightClick twitterSection" data="
">Military chopper and fighter jet activity seen in Leh, Ladakh pic.twitter.com/1OoeEIPgrw
— ANI (@ANI) June 19, 2020Military chopper and fighter jet activity seen in Leh, Ladakh pic.twitter.com/1OoeEIPgrw
— ANI (@ANI) June 19, 2020
ಪೂರ್ವ ಲಡಾಖ್ ಸೆಕ್ಟರ್‌ನಲ್ಲಿರುವ ಭಾರತೀಯ ಸೇನಾಪಡೆಗಳಿಗೆ ವಾಯುಪಡೆಯ ಬೆಂಬಲ ಒದಗಿಸುವುದಕ್ಕಾಗಿ ಅಮೆರಿಕದ ಅಪಾಚೆ ಹೆಲಿಕಾಪ್ಟರ್‌ಗಳನ್ನು ಕಾರ್ಯಾಚರಣೆ ನಡೆಯುತ್ತಿರುವ ಪ್ರದೇಶಗಳ ಸಮೀಪದಲ್ಲಿ ನಿಯೋಜಿಸಲಾಗಿದೆ.
ಚಿನೂಕ್ ಹೆಲಿಕಾಪ್ಟರ್‌ಗಳನ್ನು ಲೇಹ್ ವಾಯುನೆಲೆಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಯಾವುದಾದರೂ ಅಗತ್ಯ ಪರಿಸ್ಥಿತಿ ಉದ್ಭವಿಸಿದಲ್ಲಿ ಕ್ಷಿಪ್ರ ಪಡೆಗಳ ಸಾಗಣೆ ಮತ್ತು ಸೈನಿಕರ ವರ್ಗಾವಣೆಯ ಸಾಮರ್ಥ್ಯ ಒದಗಿಸುತ್ತದೆ.