ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಲಷ್ಕರ್ - ಎ - ತೋಯ್ಬಾ (ಎಲ್‌ಇಟಿ) ಕಮಾಂಡರ್ ಜೊತೆಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಒಬ್ಬ ಉಗ್ರನನ್ನು ಪಾಕಿಸ್ತಾನ ಮೂಲದ ಉಗ್ರ ಡ್ಯಾನಿಶ್ ಎಂದು ಗುರುತಿಸಲಾಗಿದೆ ಎಂದು ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
ಹತ್ಯೆಗೀಡಾದ ಇನ್ನೊಬ್ಬ ಉಗ್ರ ಎಲ್‌ಇಟಿ ಕಮಾಂಡರ್ ನಸೀರ್ - ಉ - ದಿನ್ ಲೋನ್ ಆಗಿದ್ದು, ಆತ ಏಪ್ರಿಲ್ 18ರಂದು ಸೊಪೋರ್‌ನಲ್ಲಿ ಮೂವರು ಸಿಆರ್‌ಪಿಎಫ್ ಜವಾನರನ್ನು ಮತ್ತು ಮೇ 4ರಂದು ಹ್ಯಾಂಡ್‌ವಾರಾದಲ್ಲಿ ಮೂವರು ಸಿಆರ್‌ಪಿಎಫ್ ಜವಾನರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಅವರು ತಿಳಿಸಿದ್ದಾರೆ.
ಇಬ್ಬರು ಉಗ್ರರನ್ನು ಹತ್ಯೆ ಮಾಡುವುದು ಭದ್ರತಾ ಪಡೆಗಳ ದೊಡ್ಡ ಸಾಧನೆಯಾಗಿದೆ ಎಂದು ವಿಜಯ್ ಕುಮಾರ್ ಹೇಳಿದ್ದಾರೆ.