ಗಾಜಿಯಾಬಾದ್ (ಉತ್ತರ ಪ್ರದೇಶ): ತನ್ನ ಎಂಟು ತಿಂಗಳ ಮಗುವಿನ ಸಾವಿನ ಸುದ್ದಿ ತಿಳಿದು ನಡೆದುಕೊಂಡೇ ಮನೆಗೆ ಹಿಂದಿರುಗಲು ನಿರ್ಧರಿಸಿದ ಕಾರ್ಮಿಕನೊಬ್ಬನಿಗೆ ಪೊಲಿಸರು ಊರಿಗೆ ಮರಳಲು ಟಿಕೆಟ್ ಬುಕ್ ಮಾಡಿಸಿದ್ದಾರೆ.
ಕೊರೊನಾ ಲಾಕ್ಡೌನ್ ಹಿನ್ನೆಲೆ ತನ್ನ ಕುಟುಂಬದಿಂದ ದೂರವಿರುವ ಬಿಹಾರದ ಬೆಗುಸಾರೈ ನಿವಾಸಿ ರಾಮ್ ಪುಕಾರ್, ತನ್ನ ಮಗುವಿನ ಸಾವಿನ ಸುದ್ದಿ ತಿಳಿದು ನಡೆದುಕೊಂಡೇ ಮನೆಗೆ ಹಿಂದಿರುಗಲು ನಿರ್ಧರಿಸಿದ್ದಾನೆ. ಆದರೆ ದೆಹಲಿ-ಯುಪಿ ಗಡಿ ಬಳಿ ಪೊಲೀಸರು ಆತನನ್ನು ತಡೆದಿದ್ದಾರೆ.
ಪೊಲೀಸರು ಮುಂದೆ ಹೋಗಲು ಬಿಡದ ಕಾರಣ ಮೂರು ದಿನಗಳ ಕಾಲ ರಾಮ್ ಪುಕಾರ್ ಗಾಜಿಪುರ ಫ್ಲೈ ಓವರ್ ಅಡಿಯಲ್ಲಿ ಕುಳಿತುಕೊಂಡು, ಕುಟುಂಬದವರೊಂದಿಗೆ ಫೋನ್ನಲ್ಲಿ ಮಾತನಾಡುತ್ತಾ ಅಳುತ್ತಿದ್ದ.
ರಸ್ತೆ ಬದಿಯಲ್ಲಿ ರಾಮ್ ಪುಕಾರ್ ಅಳುತ್ತಿರುವುದನ್ನು ನೋಡಿದ ದೆಹಲಿ ಪೊಲೀಸ್ ಕಾನ್‌ಸ್ಟೇಬಲ್, ವಲಸೆ ಕಾರ್ಮಿಕನ ಕಷ್ಟವನ್ನು ಕೇಳಿ ಪೂರ್ವ ದೆಹಲಿಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ವಿವರಿಸಿದ್ದಾರೆ. ಬಳಿಕ ಆತನಿಗೆ ಊರಿಗೆ ತೆರಳಲು ಟಿಕೆಟ್ ಬುಕ್ ಮಾಡಿಸಿ ಕೊಡಲಾಗಿದೆ.