ETV Bharat / bharat

ಪೌರತ್ವ ಕಾಯ್ದೆಗೆ ನಿಯಮಗಳನ್ನು ರೂಪಿಸಲು 3 ತಿಂಗಳ ಕಾಲಾವಕಾಶ ಕೋರಿದ ಗೃಹ ಇಲಾಖೆ - ನಾಗರಿಕರ ರಾಷ್ಟ್ರೀಯ ನೋಂದಣಿ

ಪೌರತ್ವ ತಿದ್ದುಪಡಿ ಕಾಯ್ದೆಗೆ ನಿಯಮಗಳನ್ನು ರೂಪಿಸಲು ಮೂರು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಗೃಹ ಇಲಾಖೆ ಸಂಬಂಧಿತ ಸಂಸತ್ ಸ್ಥಾಯಿ ಸಮಿತಿಗೆ ಮನವಿ ಮಾಡಿದೆ.

MHA
ಗೃಹ ಇಲಾಖೆ
author img

By

Published : Aug 2, 2020, 7:23 PM IST

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಗೆ ನಿಯಮಗಳನ್ನು ರಚಿಸಲು ಹೆಚ್ಚುವರಿ ಮೂರು ತಿಂಗಳ ಕಾಲಾವಕಾಶ ಬೇಕೆಂದು ಕೇಂದ್ರ ಗೃಹ ಇಲಾಖೆ ಕೇಳಿಕೊಂಡಿದ್ದು, ಸಂಬಂಧಿತ ಸ್ಥಾಯಿ ಸಮಿತಿಗೆ ಮನವಿ ಸಲ್ಲಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಸಂಸದೀಯ ಕಾರ್ಯಗಳ ಕೈಪಿಡಿಯ ಪ್ರಕಾರ, ಯಾವುದಾದರೊಂದು ಮಸೂದೆಗೆ ಅಂಕಿತ ಬಿದ್ದ ನಂತರ ಅದು 6 ತಿಂಗಳ ಒಳಗೆ ಅದು ಸಂಪೂರ್ಣ ನಿಯಮಗಳನ್ನು ರೂಪಿಸಬೇಕು. ಇಲ್ಲವಾದದಲ್ಲಿ ವಿಸ್ತರಣೆಗೆ ಅನುಮತಿ ಪಡೆಯಬೇಕು, ಹೀಗಾಗಿ ಅನುಮತಿ ಕೇಳಲಾಗಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪ್ಘಾನಿಸ್ತಾನದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಪೌರತ್ವ ನೀಡಲು ಸಿಎಎ ಕಾಯ್ದೆಯನ್ನು ಸಂಸತ್ತು ಅಂಗೀಕರಿಸಿತ್ತು. ಡಿಸೆಂಬರ್ 12, 2019ರಂದು ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದರು.

ಸ್ಥಾಯಿ ಸಮಿತಿಯು ಸಿಎಎ ಸ್ಥಿತಿ ಕುರಿತು ಮಾಹಿತಿ ಬಯಸಿದ ಬೆನ್ನಲ್ಲೇ ಗೃಹ ಸಚಿವಾಲಯವು ಹೆಚ್ಚುವರಿ ಅವಧಿ ಕಾಲಾವಕಾಶ ಕೊಡಬೇಕೆಂದು ಮನವಿ ಸಲ್ಲಿಸಿದೆ. ಸ್ಥಾಯಿ ಸಮಿತಿ ಈ ಗೃಹ ಇಲಾಖೆಯ ಮನವಿಯನ್ನು ಒಪ್ಪುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.