ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಅನ್‌ಲಾಕ್ 4.0 ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಸೆಪ್ಟೆಂಬರ್ 1ರಿಂದ ಈ ನಿಯಮ ದೇಶಾದ್ಯಂತ ಜಾರಿಗೆ ಬರಲಿದೆ. ಪ್ರಮುಖವಾಗಿ ಎಲ್ಲ ರಾಜ್ಯಗಳಲ್ಲಿ ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರದಿಂದ ಗ್ರೀನ್ ಸಿಗ್ನಲ್ ದೊರೆತಿದೆ.
ಇವುಗಳಿಗೆ ಅನುಮತಿ:
- ಸ್ಥಳೀಯ ರೈಲುಗಳ ಓಡಾಟ
- ಮೆಟ್ರೋ ಸಂಚಾರ
- ಹೊಟೇಲ್,ರೆಸ್ಟೋರೆಂಟ್, ಬಾರ್
- ಬಯಲು ರಂಗ ಮಂದಿರ
- ಕ್ರೀಡಾ ಚಟುವಟಿಕೆಗಳಿಗೆ ಒಪ್ಪಿಗೆ
- ಸಾಂಸ್ಕೃತಿಕ ಚಟುವಟಿಕೆಗಳು (100 ಜನರು ಮಾತ್ರ ಭಾಗಿಯಾಗಬೇಕು)
- ರಾಜಕೀಯ ಸಭೆ ನಡೆಸಲು ಒಪ್ಪಿಗೆ (100 ಜನರು ಮಾತ್ರ ಭಾಗಿಯಾಗಬೇಕು)
- ಆನ್ಲೈನ್ ಮೂಲಕ ಶಾಲಾ ತರಬೇತಿ ನಡೆಸಲು ಅನುಮತಿ
ಯಾವುದು ಇರಲ್ಲ:
- ಶಾಲಾ, ಕಾಲೇಜುಗಳು
- ಚಿತ್ರಮಂದಿರ
- ಸ್ವಿಮ್ಮಿಂಗ್ ಪೂಲ್
ಮಾರ್ಗಸೂಚಿಯ ವಿವರ:
ಸೆಪ್ಟೆಂಬರ್ 30ರವರೆಗೆ ಶಾಲಾ-ಕಾಲೇಜುಗಳು ಬಂದ್ ಇರಲಿದ್ದು, ಆನ್ಲೈನ್ ಮೂಲಕ ಕೋಚಿಂಗ್ ನಡೆಸಲು ಅನುಮತಿ ನೀಡಲಾಗಿದೆ. ಇದರ ಮಧ್ಯೆ ಶೇ 50ರಷ್ಟು ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿ ಶಾಲಾ-ಕಾಲೇಜುಗಳಿಗೆ ತೆರಳಲು ಸೂಚನೆ ನೀಡಲಾಗಿದೆ.
9ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಈ ನಿಯಮ ಕಂಟೈನ್‌ಮೆಂಟ್ ಝೋನ್ ಹೊರತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ಅನ್ವಯವಾಗಲಿದೆ.
ಉನ್ನತ ಶಿಕ್ಷಣದ ವಿದ್ಯಾರ್ಥಿಗಳು, ಪಿಹೆಚ್ಡಿ ವಿದ್ಯಾರ್ಥಿಗಳು, ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕಾಲೇಜುಗಳಿಗೆ ಭೇಟಿ ನೀಡಬಹುದಾಗಿದೆ.