ಪಾಟ್ನಾ: 'ಎಂ.ಎಸ್.ಧೋನಿ' ಸಿನಿಮಾ ಖ್ಯಾತಿಯ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ತೀವ್ರ ಆಘಾತವಾಗಿದೆ. ಬಿಹಾರ ಮೂಲದ ಸುಶಾಂತ್ ಸಿಂಗ್ ಸಮಯ ಸಿಕ್ಕಾಗಲೆಲ್ಲಾ ತಮ್ಮ ಸ್ವಗ್ರಾಮಕ್ಕೆ ಭೇಟಿ ನೀಡುತ್ತಿದ್ದರು.
'ಎಂ.ಎಸ್.ಧೋನಿ' ಚಿತ್ರದಲ್ಲಿನ ಅತ್ಯುತ್ತಮ ನಟನೆಯಿಂದ ಅವರು ತಮ್ಮ ಗ್ರಾಮದ ಧೋನಿಯಾಗಿ ಮನೆ ಮಾತಾಗಿದ್ದರು. ತಾಯಿಯ ಆಸೆಯಂತೆ ಸುಶಾಂತ್ ಕೊನೆಯ ಬಾರಿ ಸಹರ್ಸಾದಲ್ಲಿರುವ ತಮ್ಮ ಅಜ್ಜಿಯ ಮನೆಗೆ ಹೋಗಿದ್ದರು.
ಇಂದು ಸುಶಾಂತ್ ಸಿಂಗ್ ರಜಪೂತ್ ಇನ್ನಿಲ್ಲ. ಆದರೆ ಬಿಹಾರಕ್ಕೆ ಬಂದ ಸುಶಾಂತ್ ಅವರು ಕ್ರಿಕೆಟ್ ಆಡಿದ ನೆನಪುಗಳು ಹಾಗೂ ಅವರು ಮಾತನಾಡಿದ್ದು, 'ಈಟಿವಿ ಭಾರತ'ದಲ್ಲಿ ನೆನಪಾಗಿ ಉಳಿದಿದೆ. ಕಳೆದ ಬಾರಿ ಬಿಹಾರಕ್ಕೆ ಬಂದ ಈ ಯುವನಟ, ತಾಯಿಯ ಪ್ರತಿಜ್ಞೆಯನ್ನು ಈಡೇರಿಸಲು ಸಹರ್ಸಾದ ಕುಲದೇವಿಯನ್ನು ಪೂಜಿಸಿದ್ದರು. ಬಳಿಕ ಸ್ಥಳೀಯ ಜನರೊಂದಿಗೆ ಕ್ರಿಕೆಟ್ ಕೂಡ ಆಡಿದ್ದರು.
ಸುಶಾಂತ್ ಚಿಚೋರ್, ಎಂ.ಎಸ್.ಧೋನಿ, ಪಿಕೆ, ಕೇದಾರನಾಥ, ಕಾಯ್ ಪೊ ಚೆ ಚಿತ್ರಗಳಲ್ಲಿ ಅತ್ಯುತ್ತಮ ನಟಿಸಿದ್ದರು.