ಶಾಮ್ಲಿ (ಉತ್ತರ ಪ್ರದೇಶ): ಜಿಲ್ಲೆಯ ಕೈರಾನಾ ಪಟ್ಟಣದಲ್ಲಿ ದೊಡ್ಡ ಮಾಂಸ ಸಂಸ್ಕರಣಾ ಘಟಕದ ಸುತ್ತಲಿನಲ್ಲಿ ವಾಸಿಸುವ ಜನರಲ್ಲಿ ಕೆಲವರು ಮಾಂಸದ ದುರ್ವಾಸನೆಗೆ ಬೇಸರಗೊಂಡು ತಮ್ಮ ಮನೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ.
ಮಾಂಸ ಸಂಸ್ಕರಣಾ ಘಟಕದಿಂದಾಗಿ ಉಸಿರಾಡಲು ಶುದ್ಧವಾದ ಗಾಳಿ ಸಿಗುತ್ತಿಲ್ಲ. ಇದರಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಸಂಸ್ಕರಣಾ ಘಟಕದಿಂದ ಹೊರಬರುವ ದುರ್ವಾಸನೆಯಿಂದ ಈ ಪ್ರದೇಶವು ವಾಸನೆಯ ಟ್ರೇಡ್‌ಮಾರ್ಕ್ ಆಗಿ ಮಾರ್ಪಟ್ಟಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಲಾಯಿತು. ರಾಜ್ಯ ಸರ್ಕಾರಗಳಿಗೆ ಸತತವಾಗಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಆದರೂ ಏನೂ ಪ್ರಯೋಜನವಾಗಲಿಲ್ಲ. ಕೆಲವು ಸ್ಥಳೀಯರು ಅಂತಿಮವಾಗಿ ತಮ್ಮ ಮನೆಗಳನ್ನು ಮಾರಾಟ ಮಾಡಿ ಬೇರೆ ಪ್ರದೇಶಗಳಲ್ಲಿ ನೆಲೆ ನಿಲ್ಲುವ ಯೋಚನೆ ಮಾಡಿದ್ದಾರೆ. ಹೀಗಾಗಿ, ಇಲ್ಲಿನ ಹೆಚ್ಚಿನ ಮನೆಗಳು ಮಾರಾಟಕ್ಕಿವೆ ಎಂದು ಘೋಷಿಸಲಾಗಿದೆ.
ಅಧಿಕಾರಿಗಳಿಗೆ ವಿನಂತಿ ಮತ್ತು ದೂರುಗಳನ್ನು ಕಳುಹಿಸಲಾಗಿದೆ. ಆದರೆ, ಆಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನೂರಾರು ಸರ್ಕಾರದ ಕಡತಗಳಲ್ಲಿ ನಮ್ಮ ಮನವಿಗಳು ಹೂತುಹೋಗಿವೆ ಎಂದು ಜನರ ಬೇಸರ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ, ಮಾಂಸದ ಸ್ಥಾವರವನ್ನು ಜಿಲ್ಲೆಯ ಬೇರೆ ಪ್ರದೇಶಕ್ಕೆ ಸ್ಥಳಾಂತರಿಸುವ ಉದ್ದೇಶವನ್ನು ಮತ್ತೊಮ್ಮೆ ಕೆಲವು ಜನರು ಪ್ರಾರಂಭಿಸಿದರು. ಆದರೆ ಅವರ ಕೋರಿಕೆಯು ದಿನದ ಬೆಳಕನ್ನು ನೋಡುತ್ತದೆಯೇ ಎಂಬುದು ಯಾರಿಗೂ ಖಚಿತವಿಲ್ಲ.